ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಾವಿನ ಹಣ್ಣು ತಿಂದು ಇಬ್ಬರು ಸಹೋದರಿಯರು ಸಾವು; ಕುಟುಂಬಸ್ಥರು ಅಸ್ವಸ್ಥ

ಮಾವಿನ ಹಣ್ಣನ್ನು ತಿಂದ ಬಳಿಕ ಸಹೋದರಿಯರಿಬ್ಬರು ಸಾವನ್ನಪ್ಪಿದ ಘಟನೆ ಬೀದರ್‌ನಲ್ಲಿ ನಡೆದಿದೆ. ಮನೆಯಲ್ಲಿ ಊಟದ ಬಳಿಕ ಮಾವಿನ ಹಣ್ಣು ತಿಂದ ಇಬ್ಬರು ಸಹೋದರಿಯರು ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾವಿನ ಹಣ್ಣು ತಿಂದು ಇಬ್ಬರು ಸಹೋದರಿಯರು ಸಾವು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 12, 2026 1:39 PM

ಬೀದರ್‌: ಮಾವಿನ ಹಣ್ಣನ್ನು ತಿಂದ ಬಳಿಕ ಸಹೋದರಿಯರಿಬ್ಬರು ಸಾವನ್ನಪ್ಪಿದ ಘಟನೆ ಬೀದರ್‌ನಲ್ಲಿ ನಡೆದಿದೆ. ಮನೆಯಲ್ಲಿ ಊಟದ ಬಳಿಕ ಮಾವಿನ ಹಣ್ಣು ತಿಂದ ಇಬ್ಬರು ( sisters die after eating mango) ಸಹೋದರಿಯರು ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ವಿನ ಹಣ್ಣು ಸೇವಿಸಿ ಭವಾನಿ ವೈಜಿನಾಥ ಮೇತ್ರೆ (17) ಹಾಗೂ ಸಂಧ್ಯಾರಾಣಿ ಮೇತ್ರೆ (14) ಸಾವನ್ನಪ್ಪಿದ್ದಾರೆ.

ತಾಯಿ ಇಂದುಮತಿ ಹಾಗೂ ಒಟ್ಟು 5 ಜನ ಹೆಣ್ಣು ಮಕ್ಕಳು ಮಾವಿನ ಹಣ್ಣು ತಿಂದಿದ್ದಾರೆ ಎನ್ನಲಾಗಿದೆ. ಮಾವು ತಿಂದ ಕೆಲ ಹೊತ್ತಿನಲ್ಲೇ ಎಲ್ಲರಿಗೂ ವಾಂತಿ, ಭೇದಿ ಕಾಣಿಸಿಕೊಂಡು ಆರೋಗ್ಯ ಏಕಾಏಕಿ ಹದಗೆಟ್ಟಿದೆ. ಮನೆಯವರು ತಕ್ಷಣ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಭವಾನಿ ಮತ್ತು ಸಂಧ್ಯಾರಾಣಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇನ್ನೊಬ್ಬ ಸಹೋದರಿ ವಿಜಯಶ್ರೀ (19) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಇಂದುಮತಿ ಹಾಗೂ ಮತ್ತೊಬ್ಬ ಸಹೋದರಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಂ) ವರದಿ ಬಂದ ಬಳಿಕವೇ ಸಾವಿನ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಹೈದರಾಬಾದ್‌ನ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.

Bidar News: ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ; ಬೀದರ್‌ನಲ್ಲಿ ಕೃಷಿ ಅಧಿಕಾರಿಗಳಿಂದ 9.35 ಲಕ್ಷ ಮೌಲ್ಯದ 1,539 ಚೀಲ ಜಪ್ತಿ

ಇತ್ತೀಚೆಗೆ ಮುಂಬೈನಲ್ಲಿ ಕಲ್ಲಂಗಡಿ ಸೇವಿಸಿದ ಒಂದೇ ಕುಟುಂಬದ 4 ಜನ ಸಾವನ್ನಪ್ಪಿದ್ದರು. ಏಪ್ರಿಲ್ 25, 2026 ರಂದು ಮುಂಬೈನ ಪೈಧೋನಿ ಪ್ರದೇಶದಲ್ಲಿ ವಾಸವಾಗಿದ್ದ ಅಬ್ದುಲ್ಲಾ ದೋಕಾಡಿಯಾ (44), ಅವರ ಪತ್ನಿ ನಸ್ರೀನ್ (35) ಮತ್ತು ಇಬ್ಬರು ಹೆಣ್ಣುಮಕ್ಕಳಾದ ಆಯೇಷಾ (16), ಝೈನಾಬ್ (12) ತಮ್ಮ ಮನೆಯಲ್ಲಿ ಬಿರಿಯಾನಿ ಮತ್ತು ಕಲ್ಲಂಗಡಿ ಸೇವಿಸಿದ್ದರು. ಬಳಿಕ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಎಲ್ಲರೂ ಮೃತಪಟ್ಟಿದ್ದರು.