ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಳ್ಳಂಬೆಳಿಗ್ಗೆ ನೆತ್ತಿ ಸುಡುವ ಬಿಸಿಲು ಹೊತ್ತು ಮೀರಿದರೆ ಜನ ದಿಗಿಲು

ಬಿಸಿಲಿನ ತಾಪಕ್ಕೆ ಹೆದರಿ ವಯಸ್ಕರೇ ಹೊರಬಾರದ ಸ್ಥಿತಿ ಜಿಲ್ಲೆಯಲ್ಲಿ ಸದ್ಯಕ್ಕಿದ್ದು, ಬೆಳಗ್ಗೆ 7ಕ್ಕೆ ನೆತ್ತಿ ಸುಡುವ ಬಿಸಿಲು, ಸಂಜೆ 6 ಗಂಟೆವರೆಗೂ ಸೂರ್ಯನ ತಾಪಮಾನ ಕಡಿಮೆಯಾಗಿರುವುದಿಲ್ಲ. ಇದರ ನಡುವೆ ವಿದ್ಯುತ್‌ನ ಕಣ್ಣಾಮುಚ್ಚಾಲೆಯಿಂದ ಫ್ಯಾನ್ ಗಾಳಿಯೂ ಇಲ್ಲದೇ ಜನ ತತ್ತರಿಸಿ ಜೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ. ತಂಪು ಪಾನೀಯ ಮಾರಾಟ ವ್ಯಾಪಾರ ಜೋರಾಗಿದೆ

ಬೆಳ್ಳಂಬೆಳಿಗ್ಗೆ ನೆತ್ತಿ ಸುಡುವ ಬಿಸಿಲು ಹೊತ್ತು ಮೀರಿದರೆ ಜನ ದಿಗಿಲು

Profile Ashok Nayak Apr 22, 2025 4:48 PM

ವೀರೇಶ ಎಸ್.ಕೆಂಭಾವಿ, ಯಾದಗಿರಿ

ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಬಿಸಿಲಿನ ಝಳ

ನವಜಾತ ಶಿಶುಗಳಲ್ಲಿ ನಿರ್ಜಲೀಕರಣ ಸಮಸ್ಯೆ

ಬೆಳ್ಳಂಬೆಳಗೆ ನೆತ್ತಿ ಸುಡುವ ಬಿಸಿಲು

ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಳವಾಗುತ್ತಿದೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 41 ರಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಬಿಸಿಲ ಝಳಕ್ಕೆ ನವಜಾತ ಶಿಶುಗಳಲ್ಲಿ ಹಲವು ಸಮಸ್ಯೆ ಕಂಡು ಬಂದಿದೆ. ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಉಲ್ಬಣಗೊಳ್ಳುತ್ತಿದ್ದು, ಇದು ಆತಂಕ ಸೃಷ್ಟಿಸಿದೆ.

ಬಿಸಿಲಿಗೆ ಬೆಂದ ಜನತೆ

ಬಿಸಿಲಿನ ತಾಪಕ್ಕೆ ಹೆದರಿ ವಯಸ್ಕರೇ ಹೊರಬಾರದ ಸ್ಥಿತಿ ಜಿಲ್ಲೆಯಲ್ಲಿ ಸದ್ಯಕ್ಕಿದ್ದು, ಬೆಳಗ್ಗೆ 7ಕ್ಕೆ ನೆತ್ತಿ ಸುಡುವ ಬಿಸಿಲು, ಸಂಜೆ 6 ಗಂಟೆವರೆಗೂ ಸೂರ್ಯನ ತಾಪಮಾನ ಕಡಿಮೆಯಾಗಿರುವುದಿಲ್ಲ. ಇದರ ನಡುವೆ ವಿದ್ಯುತ್‌ನ ಕಣ್ಣಾಮುಚ್ಚಾಲೆಯಿಂದ ಫ್ಯಾನ್ ಗಾಳಿಯೂ ಇಲ್ಲದೇ ಜನ ತತ್ತರಿಸಿ ಜೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ. ತಂಪು ಪಾನೀಯ ಮಾರಾಟ ವ್ಯಾಪಾರ ಜೋರಾಗಿದೆ. ಇದೆಲ್ಲಾದರ ನಡುವೆ ನವಜಾತ ಶಿಶುಗಳಲ್ಲಿ ಈ ಸಮಸ್ಯೆ ಕಂಡುಬರುತ್ತಿರುವುದು ಪೋಷಕರನ್ನು ಚಿಂತೆಗೀಡು ಮಾಡಿದೆ ಎನ್ನುತ್ತಾರೆ ಹಿರಿಯರೊಬ್ಬರು.

ಇದನ್ನೂ ಓದಿ: Yadgiri News: ಯುವಕನಿಗೆ ಬೈಕ್‌ ಡಿಕ್ಕಿ: ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಪಿಎಸ್‌ಐ

ಚಿಕಿತ್ಸೆಗೆ ವಿಶೇಷ ವಾರ್ಡ್

ಬಿಸಿಲಿನ ತಾಪಕ್ಕೆ ನವಜಾತ ಶಿಶುಗಳಲ್ಲಿ ನಿರ್ಜಲೀಕರಣ,ಕಿಡ್ನಿ ಬಾವು , ಮೂತ್ರ ವಿಸರ್ಜನೆ ಸಮಸ್ಯೆ ಕಂಡುಬರುತ್ತಿದೆ. ಕಳೆದೆರಡು ವಾರಗಳಿಂದ ನಗರದ ತಾಯಿ - ಮಕ್ಕಳ ಆಸ್ಪತ್ರೆಗೆ 15ಕ್ಕೂ ಹೆಚ್ಚು ಶಿಶುಗಳು ದಾಖಲಾಗುತ್ತಿರುವುದು ವರದಿಯಾಗಿದೆ. ದಿನಂಪ್ರತಿ ಮೂರ್ನಾಲ್ಕು ನವಜಾತ ಶಿಶುಗಳಿಗೆ ಯಾದಗಿರಿಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವು ಶಿಶುಗಳು ಬೇರೆಡೆ ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಬೇಸಿಗೆಯ ಸಮಸ್ಯೆ

ಪ್ರತಿ ಬಾರಿ ಬೇಸಿಗೆ ಕಾಲ ಆರಂಭವಾದ ನಂತರದಲ್ಲಿ ಜಿಲ್ಲೆಯ ನವಜಾತ ಶಿಶುಗಳಲ್ಲಿ ಈ ಸಮಸ್ಯೆ ಕಾಡುತ್ತಿದ್ದು, ಕಳೆದ ಸಲ 48ಕ್ಕೂ ಹೆಚ್ಚು ಶಿಶುಗಳು ನಿರ್ಜಲೀಕರಣ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆ ಸಹ ನೀಡಲಾಗಿತ್ತು ಎನ್ನುತ್ತದೆ ಮಾಹಿತಿ. ಇದಕ್ಕಾಗಿ ತಾಯಿಂದಿರು ಮುಂಜಾಗ್ರತೆ ಕ್ರಮ ವಹಿಸುವುದು ಸೂಕ್ತವಾಗಿದೆ.

Temp

ಮುಂಜಾಗ್ರತೆ ಅಗತ್ಯ

ನಿರ್ಜಲೀಕರಣದ ಶಿಶುಗಳು ವಿಪರೀತ ಅಳುತ್ತವೆ. ಒದ್ದೆ ಬಟ್ಟೆಯಿಂದ ಮೈ ಒರೆಸಬೇಕು. ಶಿಶುವಿಗೆ ಬಾಯಾರಿಕೆಯಾದಾಗ ಎದೆ ಹಾಲು ಕುಡಿಸಬೇಕು. ದಿನಕ್ಕೆ ಕನಿಷ್ಠ 6 ರಿಂದ 8 ಬಾರಿ ಮೂತ್ರ ವಿಸರ್ಜನೆ ಮಾಡಬೇಕು. ಬಾಣಂತಿಯರು ನೀರಿನಾಂಶದ ಪದಾರ್ಥ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಬಿಸಿಲಿನ ತಾಪದ ಎಫೆಕ್ಟ್

ಬಿಸಿಲಿನ ಝಳದಿಂದ ನವಜಾತ ಶಿಶುಗಳಲ್ಲಿ ಕಿಡ್ನಿ ಮೇಲೆ ಬಾವು, ಮೂತ್ರ ವಿಸರ್ಜನೆ ಸಮಸ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಕಾಮಾಲೆ (ಜಾಂಡೀಸ್), ಕಡಿಮೆ ಉಷ್ಣಾಂಶ (ಹೈಪೋಥರ್ಮಿಯಾ), ಆಸ್ಪಿರೇಶನ್ ಸಿಂಡೋಮ್, ಕಡಿಮೆ ಉಷ್ಣಾಂಶ (ಹೈಪೋಥರ್ಮಿಯಾ) ಹಾಗೂ ಸಕ್ಕರೆ ಅಂಶ ಕೊರತೆ (ಹೈಪೊಗ್ಲಿಸೀಯಾ) ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳು ಆಹಾರ ಸೇವಿಸಲು ನಿರಾಕರಿಸುವುದು, ಮಕ್ಕಳು ಆಹಾರ ಸೇವಿಸಲು ನಿರಾಕರಿಸುವುದು, ಕನಿಷ್ಠ ಮೂತ್ರ ವಿಸರ್ಜನೆ, ಬಾಯಿ ಒಣಗುವಿಕೆ, ಅಲಸ್ಯ, ಮೂರ್ಛೆ, ರಕ್ತಸ್ರಾವ, ಯುವಜನರಲ್ಲಿ ಪ್ರಜ್ಞೆ ತಪ್ಪುವುದು, ಸಿಡಿಮಿಡಿ ಗೊಳ್ಳುವುದು, ಗಾಬರಿಗೊಳ್ಳುವುದು, ಅತಿಯಾದ ತಲೆನೋವು, ಕೆಂಪಾದ ಒಣಚರ್ಮ, ತಲೆ ಸುತ್ತು ವಿಕೆ, ವಾಕರಿಕೆ ಕಂಡು ಬರಬಹುದು ಎಂದು ಡಾಕ್ಟರ್ ಮಾಹಿತಿ ನೀಡಿದ್ದಾರೆ.

ಪೋಷಕರೇನು ಮಾಡಬೇಕು?

ಪೋಷಕರು ನವಜಾತ ಶಿಶುಗಳ ಆರೈಕೆ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಮಕ್ಕಳಲ್ಲಿನ ನಿರ್ಜಲೀಕರಣ ತಡೆಗೆ ಮುಂದಾಗಬೇಕು. ಮಕ್ಕಳಿಗೆ ಬಿಸಿಲು ಹೆಚ್ಚು ತಾಗದಂತೆ ಜಾಗೃತಿ ವಹಿಸಬೇಕು. ಮಗು ಹುಟ್ಟಿದ ತಕ್ಷಣ ಅರ್ಧ ಗಂಟೆಯೊಳಗೆ ಎದೆಹಾಲು ಹೊರತಾಗಿ ಬೇರೆ ಆಹಾರ ಪದಾರ್ಥ ಕೊಡಬಾರದು ಎನ್ನುತ್ತಾರೆ ವೈದ್ಯರು.