ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕ ದುರಸ್ತಿ ಮಾಡಿ
ಪಟ್ಟಣದ ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕಕ್ಕೆ ಭಾನುವಾರ ಭೇಟಿ ನೀಡಿದ ಸಿಪಿಐಎಂ ನಗರದ ಘಟಕ ನಿಯೋಗವು, ಘಟಕದ ಕಾರ್ಯದ ಬಗ್ಗೆ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಇಲ್ಲಿನ ನೀರನ್ನು ಶುದ್ಧೀಕರಣ ಮಾಡಬೇಕಾದ ಯಂತ್ರಗಳು ಸ್ಥಗಿತಗೊಂಡು ಹಲವಾರು ತಿಂಗಳುಗಳೇ ಆಗಿವೆ. ಜೊತೆಗೆ ನೀರಿನ ಶುದ್ಧೀಕರಣ ಘಟಕದಲ್ಲಿ ಆಲಂ ಬಳಸುತ್ತಿಲ್ಲ, ಕಲ್ಮಶಗಳನ್ನು ತೆಗೆಯುವ ಯಾವೊಂದು ವಿಧಾನವನ್ನೂ ಅನುಸರಿಸುತ್ತಿಲ್ಲ