ನಟಿ ಶ್ರೀಲೀಲಾಗೆ ಬಾಲಿವುಡ್ನಲ್ಲಿ ಸಿಕ್ತು ಮತ್ತೊಂದು ಭರ್ಜರಿ ಆಫರ್
ಟಾಲಿವುಡ್ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿರುವ ನಟಿ, ಕನ್ನಡತಿ ಶ್ರೀಲೀಲಾ ಇದೀಗ ಬಾಲಿವುಡ್ನಲ್ಲಿಯೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಕಿರೀಟಿ ಜತೆಗಿನ ʼಜೂನಿಯರ್ʼ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಅಭಿನಯದ ಸಿನಿಮಾದಲ್ಲಿ ಶ್ರೀಲೀಲಾ ಅವರಿಗೆ ಅವಕಾಶ ಸಿಕ್ಕಿದೆ.