Dhanveer Gowda: ದರ್ಶನ್ ಇಲ್ಲದೆ ಬರ್ತ್‌ಡೇ ಆಚರಿಸಲ್ಲ ಎಂದ ಧನ್ವೀರ್- ಹುಟ್ಟುಹಬ್ಬಕ್ಕೆ ಶುಭ ಕೋರಿದ ವಿಜಯಲಕ್ಷ್ಮಿ.!
Dhanveer Birthday: ಇಂದು ನಟ ಧನ್ವಿರ್ ಜನ್ಮ ದಿನವಾಗಿದ್ದು ನಟ ದರ್ಶನ್ ಅವರ ಪತ್ನಿ ವಿಜಯ ಲಕ್ಷ್ಮೀ ಅವರು ನಟ ಧನ್ವಿರ್ ಗೆ ಶುಭ ಕೋರಿದ್ದಾರೆ. ಆದರೆ ಇದರ ಬೆನ್ನಲ್ಲೆ ಈ ಬಾರಿ ಹುಟ್ಟು ಹಬ್ಬ ಆಚರಣೆ ಮಾಡುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ನಟ ಧನ್ವಿರ್ ಮನವಿ ಮಾಡಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ನಟ ಧನ್ವಿರ್ -

ನವದೆಹಲಿ: 'ಬಜಾರ್', 'ಬೈ ಟು ಲವ್ ಸ್ಟೋರಿ' ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ಧನ್ವಿರ್ (Dhanveer Gowda) ಅವರು ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ಭರವಸೆಯ ನಟ ಎಂದೆ ಹೇಳಬಹುದು. ನಟ ಧನ್ವಿರ್ ಅವರು ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಸಿನಿಮಾರಂಗಕ್ಕೆ ಬಂದರೂ ಕೂಡ ದೊಡ್ಡ ದೊಡ್ಡ ನಟ ನಟಿಯರ ಒಡನಾಟ ಅವರಿಗೆ ಮೊದಲಿನಿಂದಲೂ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾದ ಇವರು ಮೊದಲಿನಿಂದಲೂ ನಟ ದರ್ಶನ್ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಸಿನಿಮಾ ಸಂಬಂಧಿತ ಕಾರ್ಯಕ್ರಮದಲ್ಲಿ, ಸಿನಿಮಾ ಸೆಲೆಬ್ರಿಟಿಗಳ ಮನೆಯ ಕಾರ್ಯಕ್ರಮಕ್ಕೂ ಕೂಡ ಇವರು ಆಗಾಗ ಭೇಟಿ ಆಗುತ್ತಲೇ ಇರುತ್ತಾರೆ. ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಅರೆಸ್ಟ್ ಆದ ಬಳಿಕ ದರ್ಶನ್ ಪರ ಹಾಗೂ ಅವರ ಅಭಿಮಾನಿಗಳ ಪರ ನಿಲ್ಲುವ ಮೂಲಕ ನಟ ಧನ್ವಿರ್ ಅವರು ಮತ್ತೆ ಮುನ್ನಲೆಗೆ ಬಂದಿದ್ದರು. ಇದೀಗ ಇಂದು ಅವರ ಜನ್ಮ ದಿನವಾಗಿದ್ದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ನಟ ಧನ್ವಿರ್ ಗೆ ಶುಭ ಕೋರಿದ್ದಾರೆ. ಆದರೆ ಇದರ ಬೆನ್ನಲ್ಲೆ ಈ ಬಾರಿ ಹುಟ್ಟು ಹಬ್ಬ ಆಚರಣೆ ಮಾಡುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ನಟ ಧನ್ವಿರ್ ಮನವಿ ಮಾಡಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ನಟ ಧನ್ವಿರ್ ಗೌಡ ಅವರು 1995ರ ಸೆಪ್ಟಂಬರ್ 8ರಂದು ಬೆಂಗಳೂರಿನಲ್ಲಿ ಜನಿಸಿದ್ದು,ಬಜಾರ್ ಸಿನಿಮಾ ಮೂಲಕ ನಟನ ಜೀವನವನ್ನು ಅವರು ಆರಂಭಿಸಿದ್ದಾರೆ. ಧನ್ವೀರ್ ಅವರು 2019ರಲ್ಲಿ ತೆರೆಕಂಡ ಸಿಂಪಲ್ ಸಿನಿ ನಿರ್ದೇಶನದ `ಬಜಾರ್' ಚಿತ್ರದ ಮೂಲಕ ಸ್ವಲ್ಪ ಮಟ್ಟಿಗೆ ಜನ ಮಾನ್ಯತೆ ಪಡೆದು ಬಳಿಕ ಬೈಟು ಲವ್, ಕೈವ, ವಾಮನ ಸಿನಿಮಾಗಳಲ್ಲಿ ಕೂಡ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಾಯಕ ನಟನೆನಿಸಿದ್ದಾರೆ. ಇಂದು ಅವರ ಹುಟ್ಟು ಹಬ್ಬವಾದ ಕಾರಣ ಅವರ ಅಭಿಮಾನಿಗಳು, ಉಳಿದ ಸಿನಿಮಾ ಸೆಲೆಬ್ರಿಟಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ.

ನಟ ಧನ್ವಿರ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ದರ್ಶನ್ ಅವರು ಇಲ್ಲವಾಗಿದ್ದರು ಅವರ ಪತ್ನಿ ವಿಜಯಲಕ್ಷ್ಮೀ ವಿಶೇಷ ಪೋಸ್ಟ್ ಹಂಚಿಕೊಂಡು ಶುಭಾಶಯಗಳನ್ನು ತಿಳಿಸಿದ್ದಾರೆ. ವಿಜಯ ಲಕ್ಷ್ಮೀ, ದರ್ಶನ್ ಪುತ್ರ ವಿನೀಶ್ ಹಾಗೂ ಧನ್ವಿರ್ ಜೊತೆಗಿರುವ ಫೋಟೋ ಪೋಸ್ಟ್ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳು, ನಿಮ್ಮ ಜೀವನದಲ್ಲಿ ಅಂದುಕೊಂಡ ಎಲ್ಲ ಕನಸು ಈಡೇರಲಿ ಎಂದು ವಿಶೇಷವಾಗಿ ವಿಶ್ ಮಾಡಿದ್ದಾರೆ.
ಆದರೆ ನಟ ಧನ್ವಿರ್ ಮಾತ್ರ ಈ ಬಾರೀ ಹುಟ್ಟು ಹಬ್ಬವನ್ನು ಆಚರಿಸಲು ಹಿಂದೆಟು ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡುವುದಕ್ಕೆ ನಟ ಧನ್ವಿರ್ ಬ್ರೇಕ್ ಹಾಕಿದ್ದಾರೆ ಎಂದೇ ಹೇಳಬಹುದು. ಅವರು ಹಂಚಿಕೊಂಡ ಪೋಸ್ಟ್ ನಲ್ಲಿ 'ನನ್ನ ಆತ್ಮೀಯ ಅಭಿಮಾನಿಗಳೇ...ಸೆಪ್ಟೆಂಬರ್ 8ರಂದು ನನ್ನ ಹುಟ್ಟುಹಬ್ಬ ಇರುವುದರಿಂದ ನಿಮ್ಮ ಸಂಭ್ರಮಾ ಚರಣೆಯಲ್ಲಿ ನಾನು ಭಾಗಿಯಾಗಲು ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ. ಕ್ಷಮೆ ಇರಲಿ... ನನ್ನ ಪ್ರೀತಿಯ ಅಭಿಮಾನಿಗಳೇ ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಹಾರೈಸಿ..., ಆಶೀರ್ವದಿಸ ಬೇಕೆಂದು ಎಲ್ಲರನ್ನು ಪ್ರೀತಿಯಿಂದ ವಿನಂತಿಸಿಕೊಳ್ಳತ್ತೇನೆ. ಮುಂದಿನ ವರ್ಷ ಖಂಡಿತವಾಗಿ ನಿಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತೇನೆ.. ನಿಮ್ಮ ಧನ್ವಿರ್ ಎಂದು ಬರೆದ ಪೋಸ್ಟ್ ಅನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ:Hello 123 Movie: ʼಹಲೋ 123' ಮೂಲಕ ಸ್ಯಾಂಡಲ್‌ವುಡ್‌ಗೆ ಭುವನ್ ಪೊನ್ನಣ್ಣ ರೀ ಎಂಟ್ರಿ; ಯೋಗರಾಜ್ ಭಟ್ ಸಾಥ್
ಒಟ್ಟಾರೆಯಾಗಿ ನಟ ದರ್ಶನ್ ಅವರು ರೇಣುಕಾಸ್ವಾಮಿ ಅವರ ಪ್ರಕರಣದ ಅಡಿಯಲ್ಲಿ ಮತ್ತೆ ಜೈಲು ಸೇರಿದ್ದು ಇಂತಹ ಪರಿಸ್ಥಿತಿಯಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸದೆ ಇರಲು ಅವರು ಈ ನಿರ್ಧಾರ ಕೈಗೊಂಡಿರಬೇಕು ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗುತ್ತಿದೆ. ಈ ಮೂಲಕ ನಟ ಧನ್ವಿರ್ ಅವರ ಹುಟ್ಟು ಹಬ್ಬದ ಆಚರಣೆ ಈ ಬಾರಿ ಇಲ್ಲವಾದರೂ ಅವರ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಶುಭಕೋರಿ ಹಾರೈಸಿದ್ದಾರೆ.