ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kartik Aaryan And Sreeleela: ಡೇಟಿಂಗ್‌ ರೂಮರ್ಸ್‌ ನಡುವೆಯೇ ಕಾರ್ತಿಕ್ ಆರ್ಯನ್‌ ಮನೆಯಲ್ಲಿ ಕಾಣಿಸಿಕೊಂಡ ನಟಿ ಶ್ರೀಲೀಲಾ- ಫೋಟೊ ವೈರಲ್!

Kartik Aaryan And Sreeleela: ನಟ ಕಾರ್ತಿಕ್ ಆರ್ಯನ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬದೊಂದಿಗೆ ಗಣೇಶ ಚತುರ್ಥಿಯನ್ನು ಆಚರಿಸಿದ್ದರು. ಆದರೆ ಈ ಬಾರೀ ಅವರ ಮನೆಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ನಟಿ ಶ್ರೀಲೀಲಾ ಕೂಡ ಹಾಜರಾಗಿದ್ದರು. ನಟ ಕಾರ್ತಿಕ್ ಮತ್ತು ಶ್ರೀಲೀಲಾ ಗೌಪ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು ಇಬ್ಬರು ಒಟ್ಟಿಗೆ ಇರುವ ಅನೇಕ ಫೋಟೊಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲೆ ಇವರಿಬ್ಬರು ಒಟ್ಟಿಗೆ ಗಣೇಶೋತ್ಸವ ಆಚರಿಸಿಕೊಂಡಿರುವ ಫೋಟೊಗಳು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.

ಕಾರ್ತಿಕ್ ಆರ್ಯನ್‌ ಮನೆಯಲ್ಲಿ ನಟಿ ಶ್ರೀಲೀಲಾ! ಫೋಟೋ ವೈರಲ್‌

-

Profile Pushpa Kumari Sep 8, 2025 12:09 PM

ನವದೆಹಲಿ: ಈ ಬಾರೀ ಗಣೇಶ ಚತುರ್ಥಿ ಹಬ್ಬವು ರಾಷ್ಟ್ರಾದ್ಯಂತ ಅದ್ಧೂರಿಯಾಗಿ ಆಚರಿಸಲಾಗಿದೆ. ಸಾಮಾನ್ಯ ಜನರಿಂದ ಸೆಲೆ ಬ್ರಿಟಿಗಳ ವರೆಗೂ ಕೂಡ ಗಣೇಶೋತ್ಸವವನ್ನು ಆಚರಿಸಿದ್ದು ಅದರ ಕೆಲವು ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಅಂತೆಯೇ ನಟ ಕಾರ್ತಿಕ್ ಆರ್ಯನ್ (Kartik Aaryan) ಅವರು ಕೂಡ ಮುಂಬೈನ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬದೊಂದಿಗೆ ಗಣೇಶ ಚತುರ್ಥಿಯನ್ನು ಆಚರಿಸಿದ್ದರು. ಆದರೆ ಈ ಬಾರೀ ಅವರ ಮನೆಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ನಟಿ ಶ್ರೀಲೀಲಾ ಕೂಡ ಹಾಜರಾಗಿದ್ದರು. ನಟ ಕಾರ್ತಿಕ್ ಮತ್ತು ಶ್ರೀಲೀಲಾ(Kartik Aaryan And Sreeleela) ಗೌಪ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು ಇಬ್ಬರು ಒಟ್ಟಿಗೆ ಇರುವ ಅನೇಕ ಫೋಟೊಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲೆ ಇವರಿಬ್ಬರು ಒಟ್ಟಿಗೆ ಗಣೇಶೋತ್ಸವ ಆಚರಿಸಿ ಕೊಂಡಿರುವ ಫೋಟೊಗಳು ಉಂಟಾದ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.

ನಟ ಕಾರ್ತಿಕ್ ಮತ್ತು ಶ್ರೀಲೀಲಾ ಅವರು ಒಟ್ಟಿಗೆ ಸಿನಿಮಾ ಮಾಡಿದ್ದು ಅವರಿಬ್ಬರು ಲವ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ವದಂತಿ ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ತಿಂಗಳಿನಿಂದಲೂ ಹರಿ ದಾಡುತ್ತಿದೆ. ಇದಾದ ಬಳಿಕ ಅವರಿಬ್ಬರು ಹೊಟೇಲ್ ನಲ್ಲಿ ಒಟ್ಟಿಗೆ ಲಂಚ್ ಮಾಡಿರುವ ಫೋಟೊ ಸಹ ವೈರಲ್ ಆಗಿತ್ತು. ಇದೀಗ ನಟ ಕಾರ್ತಿಕ್ ಕುಟುಂಬ ದೊಂದಿಗೆ ನಟಿ ಶ್ರೀಲೀಲಾ ಅವರು ಫೋಟೋಗೆ ಪೋಸ್ ನೀಡುತ್ತಿರುವ ದೃಶ್ಯ ಕೂಡ ವೈರಲ್ ಆಗಿದೆ.

ನಟಿ ಶ್ರೀಲೀಲಾ ಅವರ ಜೊತೆಗೆ ಅವರ ತಾಯಿ ಕೂಡ ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ದ್ದಾರೆ. ನಟ ಕಾರ್ತಿಕ್ ಹಾಗೂ ಶ್ರೀಲೀಲಾ ಅವರ ಡ್ರೆಸ್ ಕೂಡ ಪೇರ್ ಕಾಂಬೀನೇಶನ್ ನಂತೆಯೇ ಇತ್ತು. ಇಬ್ಬರದ್ದು ಕ್ರೀಂ ಕಲರ್ ಬಣ್ಣವಾಗಿದ್ದು ಈ ಜೋಡಿ ಫೋಟೊ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಕಾರ್ತಿಕ್ ಅವರ ತಿವಾರಿ ಕುಟುಂಬದಲ್ಲಿ ಆಯೋಜಿಸಿದ್ದ ಈ ಸಂಭ್ರಮದಲ್ಲಿ ನಟಿ ಶ್ರೀಲೀಲಾ ಅವರು ಕುಟುಂಬ ಸದಸ್ಯರಂತೆ ಪಾಲ್ಗೊಂಡಿದ್ದು ಸದ್ಯ ಅವರ ಫೋಟೊಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

ನಟ ಕಾರ್ತಿಕ್ ಅವರ ಸಹೋದರಿ ಡಾ. ಕೃತಿಕಾ ತಿವಾರಿ ಅವರು ಇತ್ತೀಚೆಗೆ ತಮ್ಮ ವೈದ್ಯಕೀಯ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಹೀಗಾಗಿ ನಟ ಕಾರ್ತಿಕ್ ಅವರು ತಮ್ಮ ಸಹೋದ ರಿಗಾಗಿ ಪಾರ್ಟಿ ಒಂದನ್ನು ಆಯೋಜಿಸಿದ್ದರು. ಈ ಸಂಭ್ರಮಾ ಚರಣೆ‌ಯಲ್ಲಿ ಬಹುಭಾಷಾ ನಟಿ ಶ್ರೀಲೀಲಾ ಕೂಡ ಭಾಗವಹಿಸಿದ್ದು ಅದರ ಕೆಲವು ಫೋಟೊಗಳು ಸಹ ವೈರಲ್ ಆಗಿತ್ತು. ಆ ಪಾರ್ಟಿಯ ವೈರಲ್ ವಿಡಿಯೋದಲ್ಲಿ ಶ್ರೀಲೀಲಾ ಪುಷ್ಪ 2 ಹಾಡಿನ ಕಿಸ್ಸಿಕ್ ಹಾಡಿನ ಐಕಾನಿಕ್ ಸ್ಟೆಪ್ ಕೂಡ ಮಾಡಿದ್ದರು.

ಇದನ್ನು ಓದಿ:Life Today Movie: ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌- ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್‌ ಆಗೋ ಸಾಂಗ್‌ ಇದಂತೆ!

ನಟ ಕಾರ್ತಿಕ್ ಅವರ ತಾಯಿ ಮಾಲಾ ತಿವಾರಿ ಅವರು ಇದೇ ವರ್ಷದ 2025 ರ ಐಫಾ ಪ್ರಶಸ್ತಿ ವಿತರಣೆಯ ಸಮಾರಂಭದಲ್ಲಿ ಅವರ ಭಾವಿ ಸೊಸೆಯ ನಿರೀಕ್ಷೆಗಳ ಬಗ್ಗೆ ಕೆಲವು ಅನಿಸಿಕೆ ಅಭಿ ಪ್ರಾಯ ವ್ಯಕ್ತಪಡಿಸಿದ್ದರು. ಅದರ ಪ್ರಕಾರ ತಮ್ಮ ಪುತ್ರ ಕಾರ್ತಿಕ್ ಅವರಿಗೆ ಒಳ್ಳೆಯ ವೈದ್ಯೆ ಯೊಬ್ಬರ ಜೊತೆ ವಿವಾಹ ಮಾಡಿಸಬೇಕು ಎಂಬ ಮನದಾಸೆ ಇಸೆ ಎಂದು ಅವರು ಹೇಳಿದ್ದರು. ನಟಿ ಶ್ರೀಲೀಲಾ ಅವರು ಕೂಡ ವೈದ್ಯ ರಂಗದಲ್ಲಿ ಶಿಕ್ಷಣ ಪಡೆದವರಾಗಿದ್ದು ಈ ಮಾತನ್ನು ನಟಿ ಶ್ರೀಲೀಲಾ ಅವರಿಗೆ ಸೂಕ್ಷ್ಮವಾಗಿ ಹೇಳಿದ್ದಿರಬಹುದಾ? ಎಂದು ಅಭಿಮಾನಿಗಳು ಊಹಿಸಿದ್ದರು. ಅದರ ಬೆನ್ನಲ್ಲೆ ಕಾರ್ತಿಕ್ ಮತ್ತು ಶ್ರೀಲೀಲಾ ಅನುರಾಗ್ ಬಸು ಅವರ ಮುಂಬರುವ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ. ಇವರಿಬ್ಬರ ನಡುವೆ ಅನೇಕ ಗಾಸಿಪ್ ಹರಿದಾಡುತ್ತಿದ್ದರೂ ಕೂಡ ನಟ ಕಾರ್ತಿಕ್ ಮತ್ತು ನಟಿ ಶ್ರೀಲೀಲಾ ಇಬ್ಬರೂ ಯಾವುದೇ ಸ್ಪಷ್ಟನೆಯನ್ನು ಇದುವರೆಗೆ ನೀಡಿಲ್ಲ.