ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madenur Manu: ನಟ ಶಿವಣ್ಣ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಮಡೆನೂರು ಮನು

Madenur Manu: ಈ ಹಿಂದೆ ಹಲವು ಬಾರಿ ಕ್ಷಮೆ ಕೇಳಲು ನಟ ಶಿವರಾಜ್‌ಕುಮಾರ್‌ ಅವರ ನಿವಾಸದ ಬಳಿ ಮಡೆನೂರು ಮನು ತೆರಳಿದ್ದರು. ಆದರೇ ಅದು ಸಾಧ್ಯವಾಗಿರಲಿಲ್ಲ. ಇಂದು ಕಂಠೀರವ ಸ್ಟುಡಿಯೋದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಮಡೆನೂರು ಮನು ಕ್ಷಮೆಕೇಳಿದ್ದಾರೆ.

ನಟ ಶಿವಣ್ಣ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಮಡೆನೂರು ಮನು

Prabhakara R Prabhakara R Aug 25, 2025 4:44 PM

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ನಟ ಮಡೆನೂರು ಮನು ಕ್ಷಮೆಯಾಚಿಸಿದ್ದಾರೆ. ಈ ಹಿಂದೆ ವೈರಲ್ ಆಗಿದ್ದ ಆಡಿಯೋ ವಿಚಾರಕ್ಕೆ ಸಂಬಂಧಿಸಿ ಕಂಠೀರವ ಸ್ಟುಡಿಯೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Actor Shivarajkumar) ಅವರ ಕಾಲಿಗೆ ಬಿದ್ದು ಮಡೆನೂರು ಮನು (Madenur Manu) ಕ್ಷಮೆ ಕೋರಿದ್ದಾರೆ.

ಶಿವರಾಜ್‌ ಕುಮಾರ್‌ ಸೇರಿ ಸ್ಯಾಂಡಲ್‌ವುಡ್‌ ಪ್ರಮುಖ ನಟರ ಸಾವಿನ ಬಗ್ಗೆ ಮನು ಮಾತನಾಡಿದ್ದ ಆಡಿಯೋ ವೈರಲ್‌ ಆಗಿತ್ತು. ಹೀಗಾಗಿ ಮನು ಮೇಲೆ ಚಿತ್ರರಂಗದಿಂದ ನಿಷೇಧ ಹೇರಲಾಗಿತ್ತು. ಬಳಿಕ ಹಲವು ಬಾರಿ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ, ಕ್ಷಮೆ ಕೇಳಲು ಪ್ರಯತ್ನಿಸಿದ್ದರು. ಆದರೇ ಅದು ಸಾಧ್ಯವಾಗಿರಲಿಲ್ಲ. ಇದೀಗ ಶಿವಣ್ಣ ಅವರನ್ನು ಭೇಟಿಯಾಗಿ ಕ್ಷಮೆಯಾಚಿಸಿದ್ದಾರೆ.

ಮಡೆನೂರು ಮನು ಜೈಲಿಂದ ಹೊರಬಂದ ಮೇಲೆ ಆ ಆಡಿಯೋ ನನ್ನದಲ್ಲ, ನಾನು ಎಲ್ಲ ನಟರ ಬಳಿ ಕ್ಷಮೆ ಕೇಳುವುದಾಗಿ ಹೇಳಿದ್ದರು. ಬಳಿಕ ಅವರ ಮೇಲಿನ ನಿಷೇಧ ತೆರವು ಮಾಡುವುದಾಗಿ ಫಿಲ್ಮ್‌ ಚೇಂಬರ್‌ ತಿಳಿಸಿತ್ತು.



ಈ ಸುದ್ದಿಯನ್ನೂ ಓದಿ | Madenur Manu: ಮಡೆನೂರು‌ ಮನುಗೆ ಬಿಗ್ ರಿಲೀಫ್; ಅತ್ಯಾಚಾರ ಕೇಸ್‌ ವಾಪಸ್‌ ತೆಗೆದುಕೊಂಡ ಸಂತ್ರಸ್ತೆ

ಇದಕ್ಕೂ ಮೊದಲು ನಟ ದರ್ಶನ್ ಅವರಿಗೆ ಮಡೆನೂರು ಮನು ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಮಡೆನೂರು ಮನು, ದರ್ಶನ್​ ಅಭಿಮಾನಿಗಳು ನನಗೆ ಕಾಲ್​ ಹಾಗೂ ಮೆಸೇಜ್​ಗಳನ್ನು ಮಾಡಿದ್ದರು. ಕ್ಷಮೆ ಕೇಳಿದ್ರಾ, ಅವರನ್ನು ಭೇಟಿಯಾದ್ರಾ ಎಂದು ಕೇಳಿದ್ದಾರೆ. ಒಂದು ಸರಿ ಭೇಟಿಯಾಗಿ ಅಂತ ಸುಮಾರು ಜನ ಹೇಳಿದ್ದಾರೆ. ಆದರೆ ನಟ ದರ್ಶನ್ ಅವರು ಬ್ಯುಸಿಯಾಗಿದ್ದಾರೆ ಎಂದು ಗೊತ್ತಾಯ್ತು. ಡಿ ಬಾಸ್​ ನಾನೊಬ್ಬ ಪುಟ್ಟ ಕಲಾವಿದ. ಒಂದು ಸಂಘ, ಸಹವಾಸಗಳನ್ನು ಮಾಡಿ, ಜತೆಯಲ್ಲಿ ಇರುವವರನ್ನು ನಂಬಿ ಈ ಆಡಿಯೋದಿಂದ ನಾನು ಬಲಿಯಾಗಿದ್ದೇನೆ. ದಯವಿಟ್ಟು ನನ್ನ ಕ್ಷಮಿಸಿ. ಇಡೀ ಡಿ ಬಾಸ್​ ಅಭಿಮಾನಿಗಳು, ಕರ್ನಾಟಕದ ಜನತೆಗೆ ನನಗೆ ಒಂದು ಜೀವದಾನ ಕೊಟ್ಟಿದ್ದೀರಿ. ನನ್ನ ಉಸಿರು ಇರುವವರೆಗೂ ನಿಮ್ಮನ್ನು ಮರೆಯೋದಿಲ್ಲ. ಈ ಪುಟ್ಟ ಕಲಾವಿದನನ್ನು ಕ್ಷಮಿಸಿ ಅಂತ ಅಂಗಲಾಚಿ ಬೇಡಿಕೊಂಡಿದ್ದರು.

ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆ ಹೊತ್ತಲ್ಲಿ ನಟ ಮಡೆನೂರು ಮನು ಅವರ ಆಡಿಯೋ ವೈರಲ್‌ ಆಗಿತ್ತು. ಜತೆಗೆ ಸಹನಟಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿ ಬಂಧನವಾಗಿದ್ದರು. ಅಷ್ಟೇ ಅಲ್ಲದೇ ಸ್ಟಾರ್ ನಟರಾದ ಶಿವಣ್ಣ, ದರ್ಶನ್‌ ಹಾಗೂ ಧ್ರುವ ಸರ್ಜಾ ಬಗ್ಗೆ ಮಾತನಾಡಿದ್ದ ಮಾತುಗಳು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಮಡೆನೂರು ಮನು ಕ್ಷಮೆಯಾಚಿಸಿದ್ದರು.