ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madenur Manu: ಮಡೆನೂರು‌ ಮನುಗೆ ಬಿಗ್ ರಿಲೀಫ್; ಅತ್ಯಾಚಾರ ಕೇಸ್‌ ವಾಪಸ್‌ ತೆಗೆದುಕೊಂಡ ಸಂತ್ರಸ್ತೆ

ನಟಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪ ಎದುರಿಸುತ್ತಿರುವ ಮಡೆನೂರು ಮನುಗೆ ಇದೀಗ ರಿಲೀಫ್‌ ಸಿಕ್ಕಂತಾಗಿದೆ. ಸಂತ್ರಸ್ತೆ ಕೇಸ್‌ ವಾಪಸ್‌ ತೆಗೆದುಕೊಂಡಿದ್ದಾಳೆ. ಈ ಹಿಂದೆ ಮನು ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದ ಸಂತ್ರಸ್ತೆ, ಮನು ಜೊತೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಳು.

ಮಡೆನೂರು‌ ಮನುಗೆ ಬಿಗ್ ರಿಲೀಫ್; ಸಂತ್ರಸ್ತೆಯಿಂದ ಕೇಸ್‌ ವಾಪಸ್‌

Vishakha Bhat Vishakha Bhat Aug 7, 2025 4:32 PM

ಕಿರುತೆರೆ ನಟಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ನಟ ಮಡೆನೂರು ಮನುಗೆ (Madenuru Manu) ಇದೀಗ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ. ಅತ್ಯಾಚಾರ ಕೇಸ್‌ ಹಾಕಿದ್ದ ಸಂತ್ರಸ್ತೆ ಇದೀಗ ಕೇಸ್‌ ವಾಪಸ್‌ ಪಡೆದುಕೊಂಡಿದ್ದಾಳೆ. ಮಾತುಕತೆ ಮೂಲಕ ಇತ್ಯರ್ಥಕ್ಕೆ ಒಪ್ಪಿದ್ದು, ಮನು ಮೇಲಿನ ಕೇಸ್‌ ವಾಪಸ್‌ ತೆಗೆದುಕೊಂಡಿದ್ದಾಳೆ. ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಗುರುತಿಸಿಕೊಂಡ ನಟ ಮಡೆನೂರು ಮನು ಅದೇ ಶೋನಲ್ಲಿ ಪ್ರತಿಸ್ಪರ್ಧಿಯಾಗಿದ್ದ ಯುವತಿ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಮನು ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ರಿಲೀಸ್‌ ಕೂಡ ಆಗಿದ್ದರು.

ಮನು ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದ ಸಂತ್ರಸ್ತೆ, ಮನು ಜೊತೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಳು. ಮನುಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ. , ಧಾರವಾಡ ಹೈಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ಆಗಬೇಕಿತ್ತು. ಇದೀಗ ಕೇಸ್‌ ಹಿಂಪಡೆದ ಸಂತ್ರಸ್ತೆ ವಕೀಲರ ಸಾಕ್ಷಿಯಾಗಿ ಮಡೆನೂರು ಮನು ಮುಂದೆಯೇ “ನಾನು ಖುಷಿಯಿಂದ ಕೇಸ್‌ ಹಿಂಪಡೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.

ದರ್ಶನ್‌, ಶಿವಣ್ಣ ಹಾಗೂ ಧ್ರುವ ಸರ್ಜಾ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂಬ ಕಾರಣಕ್ಕೆ ಈ ಹಿಂದೆ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡಲಾಗಿತ್ತು. ಮನು ನಟನೆಯ ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ರಿಲೀಸ್‌ಗೆ ಒಂದು ದಿನ ಮುಂಚೆ ಅವರು ಜೈಲು ಸೇರಿದ್ದರು. ಈ ಮೂಲಕ ಅವರ ವರ್ಷಗಳ ಕನಸು ಕಮರಿತ್ತು. ಕೆಲ ದಿನಗಳ ಕಾಲ ಜೈಲಿನಲ್ಲಿದ್ದು, ಆ ಬಳಿಕ ಹೊರಬಂದ ಅವರು ಸುದ್ದಿಗೋಷ್ಠಿ ಕರೆದು, “ ನನ್ನ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರಿಲೀಸ್‌ಗಿಂತ ಮುಂಚೆಯೇ ನಾನು ಜೈಲಿಗೆ ಹೋದೆ. ಆಮೇಲೆ ಏನೇನು ಆಯ್ತು ಅನ್ನೋದು ನಾನು ಜೈಲಿನಿಂದ ಹೊರಗಡೆ ಬಂದಮೇಲೆ ಗೊತ್ತಾಯ್ತು. ನಮ್ಮ ಸಿನಿಮಾ ಚೆನ್ನಾಗಿದೆ ಅಂತ ನನ್ನ ಬಗ್ಗೆ ಆಡಿಯೋ ರಿಲೀಸ್‌ ಮಾಡ್ತಾರೆ. ನನಗೆ ಮದ್ಯ ಕುಡಿಸಿ ಆಡಿಯೋ ಮಾಡಿದ್ದಾರೆ. ಇದು ನನ್ನ ಅರಿವಿಗೆ ಬಂದಿಲ್ಲ, ನಾನು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೀನಿ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: ಅತ್ಯಾಚಾರ ಪ್ರಕರಣ; ಆರ್‌ಸಿಬಿ ವೇಗಿ ಯಶ್ ದಯಾಳ್‌ಗೆ ಬಂಧನ ಭೀತಿ

ಚಿತ್ರರಂಗದವರ ಬಳಿ ಕ್ಷಮೆ ಕೇಳಿದ ಬಳಿಕ ಅವರ ಮೇಲಿದ್ದ ನಿಷೇಧವನ್ನು ತೆರವು ಮಾಡಲಾಗಿತ್ತು. ಆದರೆ ಅತ್ಯಾಚಾರ ಕೇಸ್‌ ಮನು ಮೇಲಿತ್ತು, ಆದರೆ ಇದೀಗ ಅದರಿಂದಲೂ ಮನುಗೆ ಮುಕ್ತಿ ದೊರಕಂತಾಗಿದೆ. ಸದ್ಯ ಚಿತ್ರರಂಗದಲ್ಲಿ ಮನು ಸಕ್ರಿಯವಾಗಿ ತೊಡಗಿಕೊಳ್ಳುವ ಯೋಚನೆಯಲ್ಲಿದ್ದಾರೆ.