Akansha Ranjan: ನಟಿ ಆಕಾಂಶಾ ರಂಜನ್ ಕಪೂರ್ ಬಿಕಿನಿ ಫೋಟೊಶೂಟ್ಗೆ ಫ್ಯಾನ್ಸ್ ಫುಲ್ ಫಿದಾ
ನಟಿ ಆಕಾಂಶಾ ರಂಜನ್ ಕಪೂರ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ವೆಕೇಷನ್ ಮೂಡ್ನಲ್ಲಿದ್ದು, ತಮ್ಮ ರಜಾದಿನಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ಫ್ಯಾನ್ಸ್ ಕಮೆಂಟ್ ಲೈಕ್ ನೀಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Akansha Ranjan


ಫೋಟೊಗಳಲ್ಲಿ ಆಕಾಂಶಾ ರಂಜನ್ ಕಪೂರ್ ನೀಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಅವರು ತಮ್ಮ ರಜಾದಿನಗಳ ಫೋಟೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಫೋಟೋಗಳಲ್ಲಿ ಅವರು ತಮ್ಮ ಫಿಟ್ ಫಿಗರ್ ಅನ್ನು ಪ್ರದರ್ಶಿಸುತ್ತಿದ್ದಾರೆ. ನೀಲಿ ಬಿಕಿನಿ ಧರಿಸಿ ಬೋಲ್ಡ್ ಪೋಸ್ ನೀಡಿದ್ದಾರೆ. ಸ್ಟೈಲಿಸ್ ಆಗಿ ಸನ್ಗ್ಲಾಸ್ಗಳನ್ನು ಧರಿಸಿ, ಫೋಟೊಗಳಿಗೆ ಮತ್ತಷ್ಟು ಮೆರುಗು ನೀಡಿದ್ದಾರೆ.

ಆಕಾಂಶಾ ರಂಜನ್ ಕಪೂರ್ ಮೂಲತಃ ಅಮೇರಿಕನ್ ನಟಿಯಾಗಿದ್ದು, ಅವರು ಮುಖ್ಯವಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2020ರಲ್ಲಿ ತೆರೆಕಂಡ ʼಕರೀನಾ ಗಿಲ್ಟಿʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

2020ರಲ್ಲಿ ರಿಲೀಸ್ ಆದ ʼಗಿಲ್ಟಿʼ ಚಿತ್ರದ ನಂತರ ಅವರು 2021ರಲ್ಲಿ ನೆಟ್ಫ್ಲಿಕ್ಸ್ನ ʼರೇʼ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲದೆ ರಾಜ್ಕುಮಾರ್ ರಾವ್, ರಾಧಿಕಾ ಆಪ್ಟೆ ಮತ್ತು ಹುಮಾ ಖುರೇಷಿ ಅವರೊಂದಿಗೆ ʼಮೋನಿಕಾ, ಓ ಮೈ ಡಾರ್ಲಿಂಗ್ʼ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ.

ಆಕಾಂಶಾ ಅವರ ತಂದೆ ಶಶಿ ರಂಜನ್ ಹಿರಿಯ ನಟ ಮತ್ತು ನಿರ್ದೇಶಕ. ಅವರ ತಾಯಿ ಅನು ರಂಜನ್ ಕೂಡ ನಿರ್ದೇಶಕಿ. ಆಕಾಂಶಾ ರಂಜನ್ ಸಿನಿಮಾ ಜತೆ ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದು, ಅವರು ಆಗಾಗ ಫೋಟೊಶೂಟ್ ಮಾಡಿಸುತ್ತಿರುತ್ತಾರೆ.