ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salman Khan: ನಟ ರಣಬೀರ್ ಕಪೂರ್‌ಗೂ ಮೊದಲೇ ರಾಮನ ಪಾತ್ರಕ್ಕೆ ಸಲ್ಮಾನ್ ಖಾನ್ ಆಯ್ಕೆ ಆಗಿದ್ರಾ?

Ramayana Movie: ನಿತೀಶ್ ತಿವಾರಿ ಅವರ ನಿರ್ದೇಶನದ ರಾಮಾಯಣ ಸಿನಿಮಾ ಬಗ್ಗೆ ಹೊಸ ಹೊಸ ಅಪ್ಡೇಟ್ ಮಾಹಿತಿಗಳು ಕೇಳಿ ಬರುತ್ತಲೆ ಇದೆ. ಈ ಸಿನಿಮಾದಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರವನ್ನು ರಾಕಿಂಗ್ ಸ್ಟಾರ್ ಯಶ್ ನಿರ್ವಹಿಸುತ್ತಿದ್ದು ಉಳಿದಂತೆ ಸನ್ನಿ ಡಿಯೋಲ್, ಕಾಜಲ್ ಅಗರ್ವಾಲ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿ ಇರಲಿದೆ.

ರಾಮನ ಪಾತ್ರಕ್ಕೆ ಮೊದಲೇ ಸಲ್ಮಾನ್‌ ಖಾನ್‌ ಆ‍ಯ್ಕೆ ಆಗಿದ್ರಾ?

Profile Pushpa Kumari Jul 21, 2025 4:09 PM

ಮುಂಬೈ: ನಿತೀಶ್ ತಿವಾರಿ ಅವರ ನಿರ್ದೇಶನದ ರಾಮಾಯಣ (Ramayana) ಸಿನಿಮಾ ಬಗ್ಗೆ ಹೊಸ ಹೊಸ ಅಪ್ಡೇಟ್ ಮಾಹಿತಿಗಳು ಕೇಳಿ ಬರುತ್ತಲೆ ಇದೆ. ಈ ಸಿನಿಮಾದಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರವನ್ನು ರಾಕಿಂಗ್ ಸ್ಟಾರ್ ಯಶ್ ನಿರ್ವಹಿಸುತ್ತಿದ್ದು ಉಳಿದಂತೆ ಸನ್ನಿಡಿಯೋಲ್ , ಕಾಜಲ್ ಅಗರ್ವಾಲ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿ ಇರಲಿದೆ. ಹೀಗಾಗಿ ಸಿನಿಮಾ ಇನ್ನು ಶೂಟಿಂಗ್ ಹಂತದಲ್ಲಿದ್ದರೂ ಅಭಿಮಾನಿಗಳಿಗೆ ಮಾತ್ರ ನಿರೀಕ್ಷೆಗೂ ಮೀರಿ ಕುತೂಹಲ ಹುಟ್ಟಿಸುತ್ತಿದೆ. ಅಂತೆಯೇ ಈ ಹಿಂದೆ ನಟ ರಣಬೀರ್ ಕಪೂರ್ ಗೂ ಮೊದಲೇ ರಾಮನ ಪಾತ್ರವನ್ನು ನಟ ಸಲ್ಮಾನ್ ಖಾನ್ ಅವರು ಒಂದು ಸಿನಿಮಾದಲ್ಲಿ ನಿರ್ವಹಿಸಿದ್ದು, ಈ ಕುರಿತಾದ ವಿಚಾರವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಈ ಹಿಂದೆಯೇ ರಾಮನ ಪಾತ್ರದಲ್ಲಿ ನಟಿಸುವ ಆಫರ್ ಬಂದಿತ್ತಂತೆ‌. ನಟ ಸಲ್ಮಾನ್ ಖಾನ್ ಅವರ ಸಹೋದರ ಸೊಹೈಲ್ ಖಾನ್ ನಿರ್ದೇಶನದಲ್ಲಿ ರಾಮಾಯಣ ಸಿನಿಮಾ ಮಾಡಲು 1990ರ ದಶಕದಲ್ಲಿಯೇ ಪ್ಲ್ಯಾನ್ ಮಾಡಿದ್ದ ರಂತೆ. ಹೀಗಾಗಿ ನಟ ಸಲ್ಮಾನ್ ಖಾನ್ ಅವರನ್ನೇ ರಾಮನಾಗಿ ನಟಿಸಲು ಕೇಳಿಕೊಂಡಿದ್ದು ಸೋನಾಲಿ ಬೇಂದ್ರೆ ಸೀತೆಯ ಪಾತ್ರದಲ್ಲಿ ಆಯ್ಕೆ ಮಾಡಲಾಗಿತ್ತು.

ಇದನ್ನು ಓದಿ:Jockey 42 Movie: ಕಿರಣ್ ರಾಜ್ ಅಭಿನಯದ ʼಜಾಕಿ-42ʼ ಚಿತ್ರಕ್ಕೆ ಹೃತಿಕಾ ಶ್ರೀನಿವಾಸ್ ನಾಯಕಿ

ನಟಿ-ಚಲನಚಿತ್ರ ನಿರ್ಮಾಪಕಿ ಪೂಜಾ ಭಟ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಈ ಸಿನಿಮಾ 40ಭಾಗದಷ್ಟು ಚಿತ್ರೀಕರಣ ಪೂರ್ಣಗೊಂಡಿತ್ತು. ಆದರೆ ಚಿತ್ರೀಕರಣದ ಸಮಯದಲ್ಲಿ ಸೊಹೈಲ್ ಖಾನ್ ಮತ್ತು ಪೂಜಾ ಭಟ್ ನಡುವೆ ಲಿವ್ ಇನ್ ಸಂಬಂಧ ಇದೆ ಎನ್ನುವ ಗಾಸಿಪ್ ಹರಿದಾಡಿದ ಕಾರಣ ಈ ಸಿನಿಮದ ಚಿತ್ರೀಕರಣ ಪೂರ್ತಿ ಆಗಿಲ್ಲ ಎನ್ನಲಾಗುತ್ತಿದೆ‌.

1995ರಲ್ಲಿ ನಟಿ , ನಿರ್ಮಾಪಕಿ ಪೂಜಾ ಭಟ್ ಅವರು ನೀಡಿದ್ದ ಸಂದರ್ಶನದಲ್ಲಿ ತಮ್ಮ ರಿಲೇಶನ್ ಶಿಪ್ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರಂತೆ. ಇದನ್ನು ತಿಳಿದ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರು ಹೇಗಾದರೂ ತಮ್ಮ ಮಗ ಸೊಹೈಲ್ ನಿಂದ ಪೂಜಾ ಅವರನ್ನು ದೂರ ಮಾಡಬೇಕು ಎಂದು ಯೋಜಿಸಿ ಪೂಜಾ ಅವರಿಗೆ ತನ್ನ ಮಗನಿಂದ ದೂರಾಗುವಂತೆ ಸಲಹೆ ನೀಡಿದ್ದರಂತೆ.

ಇದೇ ವಿಚಾರಕ್ಕೆ ಸಲ್ಮಾನ್ ಖಾನ್ ಕುಟುಂಬದಲ್ಲಿಯೂ ಕೆಲವು ವೈಮನಸ್ಸು ಮೂಡಿ ಅಂತಿ ಮಾವಾಗಿ ನಟ ಸಲ್ಮಾನ್ ಖಾನ್ ಅವರು ರಾಮಾಯಣ ಸಿನಿಮಾ ಮಾಡುವ ಯೋಜನೆಯಿಂದ ನಿರ್ಗಮಿಸಿದರು‌. ಹೀಗಾಗಿ ಅಂದು ತೆರೆ ಕಾಣಬೇಕಿದ್ದ ಸಿನಿಮಾ ಅರ್ಧಕ್ಕೆ ನಿಂತುಬಿಟ್ಟಿತ್ತು. ಈ ವಿಚಾರವು ಇದೀಗ ಮತ್ತೆ ಸುದ್ದಿಯಲ್ಲಿದ್ದು ನಟ ಸಲ್ಮಾನ್ ಖಾನ್ ರಾಮನ ಪಾತ್ರದಲ್ಲಿ ಹೇಗೆ ಕಾಣುತ್ತಿದ್ದರು ಎಂಬ ಬಗ್ಗೆ ಚರ್ಚೆಗಳು ಸೋಶಿಯಲ್ ಮಿಡಿಯಾದಲ್ಲಿ ಏರ್ಪಟ್ಟಿದೆ. ಇದೀಗ ಮೂರು ದಶಕದ ಬಳಿಕ ರಾಮಾಯಣ ಸಿನಿಮಾ ತೆರೆ ಕಾಣಲಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಾಗುವಂತೆ ಮಾಡಿದೆ.