Amit Shah: ಅಬುಜ್‌ಮರ್ ಅರಣ್ಯ ಈಗ ನಕ್ಸಲ್ ಮುಕ್ತ: ಅಮಿತ್ ಶಾ ಘೋಷಣೆ
ಛತ್ತೀಸ್‌ಗಢದ ಉತ್ತರ ಬಸ್ತಾರ್‌ನಲ್ಲಿರುವ ಅಬುಜ್‌ಮರ್ ಅರಣ್ಯ ಪ್ರದೇಶ ನಕ್ಸಲ್ ಮುಕ್ತ ಎಂದು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಛತ್ತೀಸ್‌ಗಢದ ಒಟ್ಟು 170 ಮಾವೋವಾದಿಗಳು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ ಎಂದ ಶಾ, ನಕ್ಸಲರು ಈ ಮೂಲಕ ಹಿಂಸಾಚಾರವನ್ನು ತ್ಯಜಿಸಿ ಭಾರತದ ಸಂವಿಧಾನದಲ್ಲಿ ನಂಬಿಕೆ ಇಡುವ ನಿರ್ಧಾರ ಮಾಡಿದ್ದಾರೆ. ಇದು ಶ್ಲಾಘನೀಯ ಎಂದರು.

-

ನವದೆಹಲಿ: 170 ಮಾವೋವಾದಿಗಳು ಶರಣಾದ ಬಳಿಕ ಛತ್ತೀಸ್‌ಗಢದ (Chhattisgarh) ಉತ್ತರ ಬಸ್ತಾರ್‌ನಲ್ಲಿರುವ (North Bastar) ಅಬುಜ್‌ಮರ್ ಗುಡ್ಡಗಾಡು ಅರಣ್ಯ ಪ್ರದೇಶ (Abujhmarh hilly) ನಕ್ಸಲ್ ಮುಕ್ತ (Naxal-free) ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಘೋಷಿಸಿದ್ದಾರೆ. ಈ ಕುರಿತು ಗುರುವಾರ ಮಾತನಾಡಿದ ಅವರು, ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಭದ್ರತಾ ಪಡೆಗಳ ಮುಂದೆ ಶರಣಾದ ಮಾವೋವಾದಿಗಳು ಹಿಂಸಾಚಾರವನ್ನು ತ್ಯಜಿಸುವ ಮತ್ತು ಭಾರತದ ಸಂವಿಧಾನದಲ್ಲಿ ನಂಬಿಕೆ ಇಡುವ ನಿರ್ಧಾರ ಮಾಡಿದ್ದಾರೆ. ಇದು ಶ್ಲಾಘನೀಯ ಎಂದು ಹೇಳಿದರು.
ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಬರೆದಿರುವ ಅವರು, ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 10 ಮಹಿಳೆಯರು ಸೇರಿದಂತೆ 27 ಮಾವೋವಾದಿಗಳು ಬುಧವಾರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ. ಇವರಲ್ಲಿ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್- 01 ರ ಇಬ್ಬರು ಹಾರ್ಡ್‌ಕೋರ್ ಕೇಡರ್‌ಗಳು ಕೂಡಾ ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಛತ್ತೀಸ್‌ಗಢದಲ್ಲಿ 170 ನಕ್ಸಲರು ಶರಣಾಗಿದ್ದಾರೆ. ಬುಧವಾರ ರಾಜ್ಯದಲ್ಲಿ 27 ಮಂದಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು. ಮಹಾರಾಷ್ಟ್ರದಲ್ಲಿ 61 ಮಂದಿ ಮುಖ್ಯವಾಹಿನಿಗೆ ಮರಳಿದ್ದಾರೆ. ಒಟ್ಟಾರೆಯಾಗಿ ಕಳೆದ ಎರಡು ದಿನಗಳಲ್ಲಿ 258 ಮಂದಿ ಮಾವೋವಾದಿಗಳು ಹಿಂಸಾಚಾರವನ್ನು ತ್ಯಜಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಕ್ಸಲಿಸಂ ಅನ್ನು ಕೊನೆಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. 2026ರ ಮಾರ್ಚ್ 31ರೊಳಗೆ ಭಾರತದಲ್ಲಿ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಅವರು ಹೇಳಿದ್ದಾರೆ.
ಮಾವೋವಾದಿಗಳ ಶರಣಾಗತಿ ಕುರಿತು ಬುಧವಾರ ಮಾಹಿತಿ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಹಿರಿಯ ಮಾವೋವಾದಿ ನಾಯಕ ಮತ್ತು ಸಿಪಿಐ (ಮಾವೋವಾದಿ) ಪೊಲಿಟ್‌ಬ್ಯೂರೋ ಸದಸ್ಯ ಭೂಪತಿ ಅಥವಾ ಸೋನು ಎಂದೂ ಕರೆಯಲ್ಪಡುವ ಮಲ್ಲೊಜುಲ ವೇಣುಗೋಪಾಲ್ ರಾವ್ ಹಾಗೂ ಗಡ್ಚಿರೋಲಿಯಲ್ಲಿ ಇತರ 60 ಕಾರ್ಯಕರ್ತರು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮಾವೋವಾದಿಗಳ ನಿಯಂತ್ರಣದಲ್ಲಿದ್ದ ಜಿಲ್ಲೆಗಳಲ್ಲಿ ಈಗ ಮೂರು ಸಂಪೂರ್ಣ ಮುಕ್ತವಾಗಿದೆ. ಇಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲು ರಾಷ್ಟ್ರೀಯ ಕ್ರಿಯಾ ಯೋಜನೆ ಅಡಿಯಲ್ಲಿ ಸರ್ಕಾರ ಸಮಗ್ರ ಕಾರ್ಯತಂತ್ರವನ್ನು ರೂಪಿಸಿ ಜಾರಿಗೆ ಗೊಳಿಸಿದ್ದರಿಂದ ಇದು ಸಾಧ್ಯವಾಗಿದೆ. ಛತ್ತೀಸ್‌ಗಢದ ಬಿಜಾಪುರ, ಸುಕ್ಮಾ ಮತ್ತು ನಾರಾಯಣಪುರ ಜಿಲ್ಲೆಗಳಲ್ಲಿ ಮಾತ್ರ ಈಗ ನಕ್ಸಲ್ ಚಟುವಟಿಕೆಗಳು ಕಂಡು ಬರುತ್ತಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Konda Surekha: ತೆಲಂಗಾಣದಲ್ಲಿ ಹೈಡ್ರಾಮಾ! ರಾಜ್ಯ ಸರ್ಕಾರ ಕೊಲೆ ಯತ್ನ ಮಾಡುತ್ತಿದೆ ಎಂದು ಕಿರುಚಿದ ಸಚಿವೆಯ ಪುತ್ರಿ
ಅಧಿಕೃತ ಮಾಹಿತಿಯ ಪ್ರಕಾರ ಈವರೆಗೆ 836 ಮಾವೋವಾದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅದರಲ್ಲಿ 1,639 ಜನರು ಶರಣಾಗಿದ್ದಾರೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿದವರಲ್ಲಿ ಸಿಪಿಐ (ಮಾವೋವಾದಿ) ನ ಪೊಲಿಟ್‌ಬ್ಯೂರೋ ಸದಸ್ಯರು ಮತ್ತು ಕೇಂದ್ರ ಸಮಿತಿ ಸದಸ್ಯರು ಸೇರಿದ್ದಾರೆ.