Stock Market: 10,000r ರೂ. SIP ಹೂಡಿಕೆ; 1.50 ಕೋಟಿ ಸಂಪತ್ತು ಗಳಿಕೆ! ಸಂಪೂರ್ಣ ಡಿಟೇಲ್ಸ್ ಇಲ್ಲಿದೆ
ಪ್ರತಿ ತಿಂಗಳು 10,000 ರುಪಾಯಿ ಹೂಡಿಕೆಯಿಂದ 20 ವರ್ಷಗಳಲ್ಲಿ 1.50 ಕೋಟಿ ಆದಾಯವನ್ನು ನೀಡಿರುವ 15 ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳ ಪಟ್ಟಿಯನ್ನು ನೋಡೋಣ. ಭಾರತದಲ್ಲಿ 76 ಮ್ಯೂಚುವಲ್ ಫಂಡ್‌ಗಳು 20 ವರ್ಷಗಳನ್ನು ಪೂರ್ಣಗೊಳಿಸಿವೆ. ಹೀಗಾಗಿ ಇವುಗಳ ಅಧ್ಯಯನ ನಿಮಗೆ ವಿಶೇಷ ಒಳನೋಟವನ್ನು ಖಂಡಿತವಾಗಿಯೂ ನೀಡುತ್ತವೆ.


ಕೇಶವಪ್ರಸಾದ.ಬಿ
ಮುಂಬೈ: ಪ್ರತಿ ತಿಂಗಳು 10,000 ರುಪಾಯಿ ಹೂಡಿಕೆಯಿಂದ 20 ವರ್ಷಗಳಲ್ಲಿ 1.50 ಕೋಟಿ ಆದಾಯವನ್ನು ನೀಡಿರುವ 15 ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳ ಪಟ್ಟಿಯನ್ನು ನೋಡೋಣ. ಈ 15 ಮ್ಯೂಚುವಲ್ ಫಂಡ್‌ಗಳಲ್ಲಿ ಕಳೆದ 20 ವರ್ಷಗಳಿಂದ ಪ್ರತಿ ತಿಂಗಳು 10,000 ರುಪಾಯಿಗಳನ್ನು ಹೂಡಿಕೆ ಮಾಡಿದವರು ಈಗ ಒಂದೂವರೆ ಕೋಟಿ ರುಪಾಯಿ ಸಂಪತ್ತಿಗೆ ಒಡೆಯರಾಗಿದ್ದಾರೆ! ಇದು ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ವಾಸ್ತವ.
ಭಾರತದಲ್ಲಿ 76 ಮ್ಯೂಚುವಲ್ ಫಂಡ್‌ಗಳು 20 ವರ್ಷಗಳನ್ನು ಪೂರ್ಣಗೊಳಿಸಿವೆ. ಹೀಗಾಗಿ ಇವುಗಳ ಅಧ್ಯಯನ ನಿಮಗೆ ವಿಶೇಷ ಒಳನೋಟವನ್ನು ಖಂಡಿತವಾಗಿಯೂ ನೀಡುತ್ತವೆ. ನಾವು ಇತಿಹಾಸವನ್ನು ಅಧ್ಯಯನ ಮಾಡುವುದರ ಬಹಳ ದೊಡ್ಡ ಪ್ರಯೋಜನ ಏನೆಂದರೆ, ನಮ್ಮ ಭವಿಷ್ಯವನ್ನು ಸುಭದ್ರವಾಗಿ ಕಟ್ಟಿಕೊಳ್ಳಲು ಇದರಿಂದ ಸಹಾಯಕವಾಗುತ್ತದೆ.
ಕೆನರಾ ರೋಬ್ ಲಾರ್ಜ್ ಆಂಡ್ ಮಿಡ್ ಕ್ಯಾಪ್ ಫಂಡ್
Canara Rob Large and Mid Cap Fund:
ಈ ಮ್ಯೂಚುವಲ್ ಫಂಡ್ ಅನ್ನು ಮೊದಲು ಕೆನರಾ ರೊಬೆಕೊ ಎಮರ್ಜಿಂಗ್ ಈಕ್ವಿಟೀಸ್ ಎದು ಕರೆಯುತ್ತಿದ್ದರು. ಇದು 20 ವರ್ಷಗಳನ್ನು ಪೂರೈಸಿದೆ. 20 ವರ್ಷಗಳ ಹಿಂದೆ ಪ್ರತಿ ತಿಂಗಳು 10,000 ಸಿಪ್ ಹೂಡಿಕೆ ಮಾಡಿದವರಿಗೆ ಉತ್ತಮ ಲಾಭ ಸಿಕ್ಕಿದೆ. ಅವರ ಹೂಡಿಕೆ 20 ವರ್ಷಗಳಲ್ಲಿ 1 ಕೋಟಿ 89 ಲಕ್ಷ ರುಪಾಯಿಗೆ ಬೆಳೆದಿದೆ.
ಐಸಿಐಸಿಐ ಪ್ರು ವಾಲ್ಯೂ ಫಂಡ್:
ICICI Pru Value Fund:
ಈ ಮ್ಯೂಚುವಲ್ ಫಂಡ್ ಅನ್ನು ಈ ಮೊದಲು ಐಸಿಐಸಿಐ ಪ್ರುಡೆನ್ಷಿಯಲ್ ವಾಲ್ಯೂ ಡಿಸ್ಕವರಿ ಫಂಡ್ ಎಂದು ಕರೆಯುತ್ತಿದ್ದರು. ಕಳೆದ 20 ವರ್ಷಗಳಲ್ಲಿ ಮಾಸಿಕ 10,000/- ಸಿಪ್ ಹೂಡಿಕೆ ಮಾಡಿದವರ ಸಂಪತ್ತು 1 ಕೋಟಿ 87 ಲಕ್ಷ ರುಪಾಯಿಗೆ ವೃದ್ಧಿಸಿದೆ. ಇದು ವಾರ್ಷಿಕ ಸರಾಸರಿ 17.82% ಆದಾಯವನ್ನು ಹೂಡಿಕೆದಾರರಿಗೆ ನೀಡಿದೆ.
ಎರಡು ಮಿಡ್ ಕ್ಯಾಪ್ ಫಂಡ್‌ಗಳು:
ನಿಪ್ಪೋನ್ ಇಂಡಿಯಾ ಮಿಡ್ ಕ್ಯಾಪ್ ಫಂಡ್
Nippon India Growth Mid Cap Fund:
ಇದನ್ನು ಈ ಮೊದಲು ನಿಪ್ಪೋನ್ ಇಂಡಿಯಾ ಗ್ರೋತ್ ಫಂಡ್ ಎಂದು ಕರೆಯುತ್ತಿದ್ದರು. ಇದರಲ್ಲಿ 30 ವರ್ಷಗಳ ಅವಧಿಯಲ್ಲಿ ಮಾಸಿಕ 10,000/- ಹೂಡಿಕೆ ಮಾಡಿದವರಿಗೆ 1 ಕೋಟಿ 74 ಲಕ್ಷ ರುಪಾಯಿ ಸಂಪತ್ತು ಲಭಿಸಿದೆ.
ಎಚ್‌ಎಸ್‌ಬಿಸಿ ಮಿಡ್ ಕ್ಯಾಪ್ ಫಂಡ್:
HSBC Midcap Fund
ಇದನ್ನು ಈ ಮೊದಲು ಎಲ್ &ಟಿ ಮಿಡ್ ಕ್ಯಾಪ್ ಫಂಡ್ ಎಂದು ಕರೆಯುತ್ತಿದ್ದರು. ಇದರಲ್ಲಿ 21 ವರ್ಷಗಳ ಅವಧಿಯಲ್ಲಿ ಮಾಸಿಕ 10,000/- ಸಿಪ್ ಹೂಡಿಕೆ ಮಾಡಿದವರ ಸಂಪತ್ತು 1 ಕೋಟಿ 73 ಲಕ್ಷ ರುಪಾಯಿಗೆ ಏರಿಕೆಯಾಗಿದೆ.
ಕೋಟಕ್ ಸ್ಮಾಲ್ ಕ್ಯಾಪ್ ಫಂಡ್ ಮತ್ತು ಸುಂದರಮ್ ಮಿಡ್ ಕ್ಯಾಪ್ ಫಂಡ್:
ಕೋಟಕ್ ಸ್ಮಾಲ್ ಕ್ಯಾಪ್ ಫಂಡ್ 21 ವರ್ಷದಲ್ಲಿ ಮಾಸಿಕ 10,000/- ಸಿಪ್ ಹೂಡಿಕೆಗೆ ಪ್ರತಿಯಾಗಿ 1 ಕೋಟಿ 72 ಲಕ್ಷ ಸಂಪತ್ತು ನೀಡಿದೆ. ಸುಂದರಮ್ ಮಿಡ್ ಕ್ಯಾಪ್ ಫಂಡ್ 23 ವರ್ಷಗಳಲ್ಲಿ 10,000/- SIP ಗೆ 1 ಕೋಟಿ 72 ಲಕ್ಷ ಸಂಪತ್ತು ಸೃಷ್ಟಿಸಿದೆ.
ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್:
ಇದನ್ನು ಈ ಹಿಂದೆ ಕ್ವಾಂಟ್ ಇನ್ ಕಮ್ ಬಾಂಡ್ ಎಂದು ಕರೆಯುತ್ತಿದ್ದರು. ಇದು ಕ್ವಾಂಟ್ ಮ್ಯೂಚುವಲ್ ಫಂಡ್ ನಿರ್ವಹಿಸುವ ದೊಡ್ಡ ಮ್ಯೂಚುವಲ್ ಫಂಡ್ ಆಗಿದೆ. 20 ವರ್ಷಗಳಲ್ಲಿ ಮಾಸಿಕ 10,000 ಸಿಪ್ ಹೂಡಿಕೆಗೆ ಪ್ರತಿಯಾಗಿ 1 ಕೋಟಿ 65 ಲಕ್ಷ ಸಂಪತ್ತು ಸೃಷ್ಟಿಯಾಗಿದೆ. ಇದು ವಾರ್ಷಿಕ ಸರಾಸರಿ 16.82% ಸಂಪತ್ತು ಕೊಟ್ಟಿದೆ.
ನಿಪ್ಪೋನ್ ಇಂಡಿಯಾ ಮಲ್ಟಿ ಕ್ಯಾಪ್ ಫಂಡ್:
Nippon India Multi Cap Fund:
ನಿಪ್ಪೋನ್ ಇಂಡಿಯಾ ಮಲ್ಟಿ ಕ್ಯಾಪ್ ಫಂಡ್ ಅನ್ನು ಈ ಹಿಂದೆ ರಿಲಯನ್ಸ್ ಈಕ್ವಿಟಿ ಅಪಾರ್ಚುನಿಟೀಸ್ ಫಂಡ್ ಎಂದು ಕರೆಯುತ್ತಿದ್ದರು. ಇದರಲ್ಲಿ 20 ವರ್ಷ 10,000 ಸಿಪ್ ಹೂಡಿಕೆಗೆ ಪ್ರತಿಯಾಗಿ 1 ಕೋಟಿ 64 ಲಕ್ಷ ಸಂಪತ್ತನ್ನು ಹೂಡಿಕೆದಾರರು ಗಳಿಸಿದ್ದಾರೆ. ವಾರ್ಷಿಕ ಸರಾಸರಿ 16.77% ಆದಾಯ ಇಲ್ಲಿ ಲಭಿಸಿದೆ.
4 ಮಿಡ್ ಕ್ಯಾಪ್ ಫಂಡ್‌ಗಳು:
ಫ್ರಾಂಕ್ಲಿನ್ ಇಂಡಿಯಾ ಮಿಡ್ ಕ್ಯಾಪ್ ಫಂಡ್
ಟಾಟಾ ಮಿಡ್ ಕ್ಯಾಪ್ ಫಂಡ್
ಯುಟಿಐ ಮಿಡ್ ಕ್ಯಾಪ್ ಫಂಡ್
ಐಸಿಐಸಿಐ ಪ್ರು ಮಿಡ್ ಕ್ಯಾಪ್ ಫಂಡ್
ಈ ನಾಲ್ಕು ಮ್ಯೂಚುವಲ್ ಪಂಡ್‌ಗಳಲ್ಲಿ ಕಳೆದ 20 ವರ್ಷಗಳಲ್ಲಿ ಮಾಸಿಕ 10,000/- ಸಿಪ್ ಹೂಡಿಕೆ ಮಾಡಿದವರಿಗೆ 1 ಕೋಟಿ 52 ಲಕ್ಷದಿಂದ 1 ಕೋಟಿ 64 ಲಕ್ಷ ರುಪಾಯಿ ತನಕ ಸಂಪತ್ತು ಲಭಿಸಿದೆ.
ವಾರ್ಷಿಕ ಸರಾಸರಿ 16.17%ರಿಂದ 16.75% ತನಕ ಸಂಪತ್ತು ಸೃಷ್ಟಿಯಾಗಿದೆ.
ಎಚ್‌ಡಿಎಫ್‌ಸಿ ಫ್ಲೆಕ್ಸಿ ಕ್ಯಾಪ್ ಫಂಡ್
HDFC Flexi Cap Fund:
ಈ ಮ್ಯೂಚುವಲ್ ಫಂಡ್‌ನಲ್ಲಿ ಕಳೆದ 20 ವರ್ಷಗಳಲ್ಲಿ ಮಾಸಿಕ 10,000/- ಸಿಪ್ ಹೂಡಿಕೆ ಮಾಡಿದವರಿಗೆ 1 ಕೋಟಿ 51 ಲಕ್ಷ ರುಪಾಯಿ ಸಂಪತ್ತು ಲಭಿಸಿದೆ. ಈ ಫಂಡ್‌ಗೆ 30 ವರ್ಷ ಭರ್ತಿಯಾಗಿದ್ದು, ವಾರಷಿಕ ಸರಾಸರಿ 16.09% ಆದಾಯ ನೀಡಿದೆ.
ಈ ಸುದ್ದಿಯನ್ನೂ ಓದಿ: Stock Market: ಟಾಟಾ ಸ್ಟಾಕ್ ವಿಭಜನೆ, 1ಕ್ಕೆ ಸಿಗಲಿದೆ 10 ಸ್ಟಾಕ್ಸ್; ಸೆನ್ಸೆಕ್ಸ್ 418 ಅಂಕ ಜಿಗಿತ
ಕೋಟಿ ಸಂಪತ್ತು ಕೊಟ್ಟಿರುವ ಇತರ ಎರಡು ಫಂಡ್‌ಗಳು:
ಎಸ್‌ಬಿಐ ಮಿಡ್ ಕ್ಯಾಪ್ ಫಂಡ್ ಮತ್ತು ನಿಪ್ಪೋನ್ ಇಂಡಿಯಾ ವಾಲ್ಯೂ ಫಂಡ್ 20 ವರ್ಷಗಲ್ಲಿ ಮಾಸಿಕ 10,000/- ಸಿಪ್ ಹೂಡಿಕೆಗೆ 1.50 ಕೋಟಿ ಸಂಪತ್ತನ್ನು ನೀಡಿವೆ.