Stock Market: ಜಿಯೊ ಫೈನಾನ್ಷಿಯಲ್ ಸ್ಟಾಕ್ 1 ತಿಂಗಳಿನಲ್ಲಿ 18% ಹೈ ಜಂಪ್
Share Market: ಮುಕೇಶ್ ಅಂಬಾನಿ ನೇತೃತ್ವದ ಜಿಯೊ ಫೈನಾನ್ಷಿಯ್ ಸರ್ವೀಸ್ ಲಿಮಿಟೆಡ್ Jio Financial Services Ltd (JFSL) ಕಂಪನಿಯ ಷೇರಿನ ದರ ಕಳೆದ ಒಂದು ತಿಂಗಳಿನ ಅವಧಿಯಲ್ಲಿ 18% ಏರಿಕೆಯಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.


ಕೇಶವ ಪ್ರಸಾದ್ ಬಿ.
ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ಜಿಯೊ ಫೈನಾನ್ಷಿಯ್ ಸರ್ವೀಸ್ ಲಿಮಿಟೆಡ್ Jio Financial Services Ltd (JFSL) ಕಂಪನಿಯ ಷೇರಿನ ದರ ಕಳೆದ ಒಂದು ತಿಂಗಳಿನ ಅವಧಿಯಲ್ಲಿ 18% ಏರಿಕೆಯಾಗಿದೆ.
ಜಿಯೊ ಫೈನಾನ್ಷಿಯಲ್ ಸರ್ವೀಸ್ ಲಿಮಿಟೆಡ್ Jio Financial Services Ltd
ಷೇರಿನ ಈಗಿನ ದರ 296/-
ಟಾರ್ಗೆಟ್ ದರ: 350/-
1 ತಿಂಗಳಿನ ಹಿಂದಿನ ದರ: 251/-
ಏರಿಕೆ ಎಷ್ಟು: 18%
Mkt cap: 1.89 ಲಕ್ಷ ಕೋಟಿ ರುಪಾಯಿ.
52 wk high: 368/-
52 wk low: 198/-
ಕಳೆದ ಒಂದು ತಿಂಗಳಿನಿಂದ ಜಿಯೊ ಫೈನಾನ್ಷಿಯಲ್ ಷೇರಿನ ದರ ಏರುಗತಿಯಲ್ಲಿದೆ. ಆದರೆ 6 ತಿಂಗಳಿನ ಹಿಂದೆ 13% ನಷ್ಟದಲ್ಲಿತ್ತು. 338/- ಮಟ್ಟದಲ್ಲಿತ್ತು. ಲಾಂಗ್ ಟರ್ಮ್‌ನಲ್ಲಿ ಷೇರಿನ ದರ 400-415/- ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಸ್ಟಾಕ್ ಮಾರ್ಕೆಟ್ ನಿಯಂತ್ರಕ ಸೆಬಿಯು ಇತ್ತೀಚೆಗೆ ಜಿಯೊ ಫೈನಾನ್ಷಿಯಲ್ ಸರ್ವೀಸ್ ಲಿಮಿಟೆಡ್ ಮತ್ತು ಅಮೆರಿಕ ಮೂಲದ ಬ್ಲ್ಯಾಕ್ ರಾಕ್ ಕಂಪನಿಯ ಸಹಭಾಗಿತ್ವದಲ್ಲಿ ಜಿಯೊ ಬ್ಲಾಕ್ ರಾಕ್ ಅಸೆಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪನೆಗೆ ಅನುಮತಿ ನೀಡಿದೆ. ಇದು ಭಾರತದಲ್ಲಿ ಮ್ಯೂಚುವಲ್ ಫಂಡ್ ಸೇವೆಯನ್ನು ಆರಂಭಿಸಲಿದೆ.
ಜಿಯೊ ಫೈನಾನ್ಷಿಯಲ್ ಸರ್ವೀಸ್ ಲಿಮಿಟೆಡ್ ಕಂಪನಿ ಕುರಿತು ಒಂದಷ್ಟು ಮಾಹಿತಿ:
ಜಿಯೊ ಫೈನಾನ್ಷಿಯಲ್ ಸರ್ವೀಸ್ ಲಿಮಿಟೆಡ್ ಮುಂಬಯಿ ಮೂಲದ ಹಣಕಾಸು ಸೇವಾ ವಲಯದ ಕಂಪನಿಯಾಗಿದ್ದು, ಮುಕೇಶ್ ಅಂಬಾನಿ ಇದರ ಸ್ಥಾಪಕರು. 2023ರ ಆಗಸ್ಟ್‌ನಲ್ಲಿ ಸ್ವತಂತ್ರ ಕಂಪನಿಯಾಗಿ ಅಸ್ತಿತ್ವಕ್ಕೆ ಬಂದಿತು. ಜಿಯೊ ಫೈನಾನ್ಸ್, ಜಿಯೊ ಇನ್ಷೂರೆನ್ಸ್ ಬ್ರೋಕಿಂಗ್, ಜಿಯೊ ಪೇಮೆಂಟ್ ಸಲ್ಯೂಷನ್ಸ್, ಜಿಯೊ ಲೀಸಿಂಗ್ ಸರ್ವೀಸ್ ಇದರ ಅಧೀನ ಸಂಸ್ಥೆಗಳಾಗಿವೆ.
ಜಿಯೊ ಫೈನಾನ್ಸಿಯಲ್ ಸರ್ವೀಸ್ ಅನ್ನು ಸ್ವತಂತ್ರ ಸಂಸ್ಥೆಯಾಗಿಸುವ ಸಲುವಾಗಿ ರಿಲಯನ್ಸ್ ಇಂಡಸ್ಟ್ರೀಸ್ 15,500 ಕೋಟಿ ರುಪಾಯಿಗಳ ಹೂಡಿಕೆಯನ್ನು ಮಾಡಿತ್ತು. ಜಿಯೊಜಿತ್ ಫೈನಾನ್ಷಿಯಲ್‌ನ ಹಿರಿಯ ಉಪಾಧ್ಯಕ್ಷ ಗೌರಾಂಗ್ ಷಾ ಅವರ ಪ್ರಕಾರ ಲಾಂಗ್ ಟರ್ಮ್ ಹೂಡಿಕೆಗೆ ಇದು ಉತ್ತಮ ಷೇರಾಗಿದೆ. 350/- ಮಟ್ಟಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.
ಜಿಯೊ ಫೈನಾನ್ಷಿಯಲ್ ಸರ್ವೀಸ್ ಲಿಮಿಟೆಡ್ ಕಂಪನಿಯು ಜಿಯೊ ಫೈನಾನ್ಷಿಯಲ್ ಆಪ್ ಮೂಲಕ ಸಾಲ, ಸೇವಿಂಗ್ಸ್ ಅಕೌಂಟ್, ಯುಪಿಐ ಬಿಲ್ ಪೇಮೆಂಟ್ಸ್, ರಿಚಾರ್ಜ್, ಡಿಜಿಟಲ್ ಇನ್ಷೂರೆನ್ಸ್, ಫೈನಾನ್ಷಿಯಲ್ ಟ್ರ್ಯಾಕಿಂಗ್, ಮ್ಯಾನೇಜ್‌ಮೆಂಟ್ ಟೂಲ್ಸ್‌ಗಳನ್ನು ನೀಡುತ್ತದೆ. 2023ರ ಆಗಸ್ಟ್ 21ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಲಿಸ್ಟ್ ಆಗಿದೆ.
ಸಿಡಿಎಸ್‌ಎಲ್ Central Depository Services (India) Ltd
ಷೇರಿನ ಈಗಿನ ದರ: 1,788/-
1 ತಿಂಗಳಿನ ಹಿಂದಿನ ದರ: 1260/-
1 ತಿಂಗಳಿನಲ್ಲಿ ಏರಿಕೆ ಎಷ್ಟು: 42%
2026ಕ್ಕೆ ಟಾರ್ಗೆಟ್ ದರ: 2,433/-
ಸೆಂಟ್ರಲ್ ಡೆಪಾಸಿಟರಿ ಸರ್ವೀಸ್ ಲಿಮಿಟೆಡ್ 1999ರಲ್ಲಿ ಸ್ಥಾಪನೆಯಾದ ಕಂಪನಿ. ಡೆಪಾಸಿಟರಿ ಸೇವೆಯನ್ನು ಇದು ನೀಡುತ್ತದೆ. ಅಂದರೆ ಡಿಮ್ಯಾಟ್ ಸೇವೆಯನ್ನು ನೀಡುತ್ತದೆ. ಡಿಮಾಟ್ ಖಾತೆಗಳ ದೃಷ್ಟಿಯಿಂದ ಭಾರತದ ಅತಿ ದೊಡ್ಡ ಡೆಪಾಸಿಟರಿಯಾಗಿದೆ.
2024ರಲ್ಲಿ ಕಂಪನಿಯು 812 ಕೋಟಿ ರುಪಾಯಿ ಆದಾಯವನ್ನು ಗಳಿಸಿದೆ. ಆರಂಭದಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್, CDSL ನ ಪ್ರಮೋಟರ್ ಆಗಿತ್ತು. ಬಳಿಕ ಬಿಎಸ್‌ಇ ಲಿಮಿಟೆಡ್ ಜತೆಗೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಲ್‌ಐಸಿ ಷೇರು ಪಾಲನ್ನು ಹೊಂದಿದೆ. CDSL ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ 103 ಕೋಟಿ ರುಪಾಯಿ ನಿವ್ಚಳ ಲಾಭ ಗಳಿಸಿತ್ತು. 2024ರ ಇದೇ ಅವಧಿಗೆ ಹೋಲಿಸಿದರೆ 22% ಇಳಿಕೆಯಾಗಿದೆ. ಹೀಗಿದ್ದರೂ ಸಂಸ್ಥೆಯು ಪ್ರತಿ ಷೇರಿಗೆ 12.50 ರುಪಾಯಿಗಳ ಡಿವಿಡೆಂಡ್ ಪ್ರಕಟಿಸಿತ್ತು.
ಜನವರಿ-ಮಾರ್ಚ್ ತ್ರೈಮಾಸಿಕ ಫಲಿತಾಂಶ ಪೂರಕವಾಗಿ ಇರದಿದ್ದರೂ, ಸಿಡಿಎಸ್‌ಎಲ್‌ನ ಸ್ಟ್ರಾಟಜಿಕ್ ರೋಲ್ ಅನ್ನು ಗಮನಿಸಬಹುದು. ಐಪಿಒಗೆ ಸಜ್ಜಾಗುತ್ತಿರುವ ಎನ್‌ಎಸ್‌ಡಿಎಲ್ ಹೊರತುಪಡಿಸಿದರೆ ಸಿಡಿಎಸ್‌ಎಲ್ ಏಕೈಕ ಡೆಪಾಸಿಟರಿ ಸರ್ವೀಸ್ ಸಂಸ್ಥೆಯಾಗಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಸಿಡಿಎಸ್‌ಎಲ್ ಷೇರುಗಳ ದರ ಭವಿಷ್ಯದಲ್ಲಿ ಉತ್ತಮ ಏರಿಕೆ ದಾಖಲಿಸಲಿದೆ. 2026ರಲ್ಲಿ 2,433/-ಕ್ಕೆ ಟಾರ್ಗೆಟ್ ದರ ನಿಗದಿಪಡಿಸಲಾಗಿದೆ. 2030ಕ್ಕೆ 3,445/-ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.
ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾದ ಗವರ್ನರ್ ಸಂಜೀವ್ ಮಲ್ಹೋತ್ರಾ ಅವರು ಚಿನ್ನದ ಸಾಲದ ನಿಯಮಗಳನ್ನು ಸುಧಾರಣೆಗೊಳಿಸಿದ ಬಳಿಕ ಗೋಲ್ಡ್ ಲೋನ್ ಸ್ಟಾಕ್ಸ್‌ಗಳು ಲಾಭ ಗಳಿಸಿವೆ. ಆರ್‌ಬಿಐ ಚಿನ್ನದ ಸಾಲದಲ್ಲಿ ಲೋನ್-ಟು-ವಾಲ್ಯೂ ಅನುಪಾತವನ್ನು 75% ರಿಂದ 85% ಕ್ಕೆ ಏರಿಕೆ ಮಾಡಿದೆ. 2.5 ಲಕ್ಷ ರುಪಾಯಿ ತನಕದ ಚಿನ್ನದ ಸಾಲಕ್ಕೆ ಇದು ಅನ್ವಯವಾಗಲಿದೆ.
ಉದಾಹರಣೆಗೆ ಒಬ್ಬ ಸಾಲಗಾರ 1 ಲಕ್ಷ ರುಪಾಯಿ ಮೌಲ್ಯದ ಬಂಗಾರವನ್ನು ಅಡಮಾನ ಇಟ್ಟರೆ, 85,000 /- ಸಾಲ ಪಡೆಯಲಿದ್ದಾನೆ. ಈ ಹಿಂದೆ 75,000/- ಸಾಲ ಸಿಗುತ್ತಿತ್ತು. ಅಂದರೆ ಹೆಚ್ಚಿನ ಸಾಲದ ಪ್ರಮಾಣ ಸಿಗಲಿದ್ದು, ಸಣ್ಣ ಪುಟ್ಟ ಸಾಲ ಪಡೆಯುವವರಿಗೆ ಅನುಕೂಲವಾಗಲಿದೆ. ಗೃಹಿಣಿಯರಿಗೆ, ಸಣ್ಣ ಪುಟ್ಟ ಬಿಸಿನೆಸ್ ಮಾಡುವವರಿಗೆ ಪ್ರಯೋಜನ ಸಿಗಲಿದೆ. ಆರ್‌ಬಿಐನ ಈ ಘೋಷಣೆ ಹಿನ್ನೆಲೆಯಲ್ಲಿ IIFL Finannce ಷೇರು ದರದಲ್ಲಿ ಶುಕ್ರವಾರ 5% ಏರಿಕೆಯಾಯಿತು. ಮುತ್ತೂಟ್ ಫೈನಾನ್ಸ್ ಷೇರು ದರ 6% ಹೆಚ್ಚಳವಾಯಿತು.
ಈ 7 ಡಿಫೆನ್ಸ್ ಸ್ಟಾಕ್ಸ್‌ಗಳು ಈ ವರ್ಷ ಕೇವಲ 5 ತಿಂಗಳುಗಳಲ್ಲಿ 50-100% ತನಕ ಏರಿಕೆಯಾಗಿವೆ. ಹಾಗಾದರೆ ಆ 7 ಷೇರುಗಳು ಯಾವುದು?
ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆಂಡ್ ಎಂಜಿನೀರ್ಸ್ Garden Reach Shipbuilders & Engineers
ಷೇರಿನ ಈಗಿನ ದರ: 3,267/-
ಈ ಷೇರು ಈ ವರ್ಷ ಇದುವರೆಗೆ 111% ಏರಿಕೆಯಾಗಿದ್ದು, 1616/-ರಿಂದ 3,406/- ಕ್ಕೆ ವೃದ್ಧಿಸಿದೆ.
ಭಾರತ್ ಡೈನಾಮಿಕ್ಸ್ Bharat Dynamics
2025ರಲ್ಲಿ ಇದುವರೆಗೆ ಷೇರಿನ ದರ 75% ಏರಿಕೆಯಾಗಿದ್ದು, 1,123/-ಗಳಿಂದ 1969/-ಕ್ಕೆ ಹೆಚ್ಚಳವಾಗಿದೆ.
ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ Solar Industries India
2025ರಲ್ಲಿ ಇದುವರೆಗೆ ಷೇರಿನ ದರದಲ್ಲಿ 74% ಹೆಚ್ಚಳವಾಗಿದ್ದು, 9,783/-ರಿಂದ 17023/-ಕ್ಕೆ ಹೆಚ್ಚಳವಾಗಿದೆ.
ಪಾರಸ್ ಡಿಫೆನ್ಸ್ ಆಂಡ್ ಸ್ಪೇಸ್ ಟೆಕ್ನಾಲಜೀಸ್ Paras Defence And Space Technologies
2025ರಲ್ಲಿ ಇದುವರೆಗೆ ಷೇರಿನ ದರದಲ್ಲಿ 71% ಹೆಚ್ಚಳವಾಗಿದ್ದು, 1,008/-ರಿಂದ 1725/-ಕ್ಕೆ ಹೆಚ್ಚಳವಾಗಿದೆ.
ಮಝಗಾನ್ ಡಕ್ ಶಿಪ್ ಬಿಲ್ಡರ್ಸ್ Mazagon Dock Shipbuilders
ಈ ವರ್ಷ ಇದುವರೆಗೆ ಷೇರಿನ ದರದಲ್ಲಿ 54% ಹೆಚ್ಚಳವಾಗಿದ್ದು, 2228/-ರಿಂದ 3,430/-ಕ್ಕೆ ಹೆಚ್ಚಳವಾಗಿದೆ.
ಅಸ್ತ್ರ ಮೈಕ್ರೊವೇವ್ ಪ್ರಾಡಕ್ಟ್ಸ್ Astra Microwave Products
ಈ ವರ್ಷ ಇದುವರೆಗೆ ಷೇರಿನ ದರದಲ್ಲಿ 54% ಹೆಚ್ಚಳವಾಗಿದ್ದು, 768/-ರಿಂದ 1,179/-ಕ್ಕೆ ಹೆಚ್ಚಳವಾಗಿದೆ.
ಕೊಚ್ಚಿನ್ ಶಿಪ್ ಯಾರ್ಡ್ Cochin Shipyard
ಈ ವರ್ಷ ಇದುವರೆಗೆ ಷೇರಿನ ದರದಲ್ಲಿ 53% ಹೆಚ್ಚಳವಾಗಿದ್ದು, 1539/-ರಿಂದ 2,351/-ಕ್ಕೆ ಹೆಚ್ಚಳವಾಗಿದೆ.
ಈ ಸುದ್ದಿಯನ್ನೂ ಓದಿ | Mango Production Countries: ವಿಶ್ವದೆಲ್ಲೆಡೆ ಹರಡಿದೆ ಭಾರತದ ಮಾವಿನ ಘಮ; ಉತ್ಪಾದನೆಯಲ್ಲಿಯೂ ನಾವೇ ನಂ. 1