ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್‌ 368 ಅಂಕ ಕುಸಿತ; ಆದಾಯದಲ್ಲಿ ಚಿನ್ನವನ್ನು ಹಿಂದಿಕ್ಕಿದ ಸ್ಟಾಕ್ಸ್‌ ‌

ಸೆನ್ಸೆಕ್ಸ್‌ ಮತ್ತು ನಿಫ್ಟಿ 50 ಎರಡೂ ಸೂಚ್ಯಂಕಗಳು ಇಂದು ಮಂದಗತಿಯಲ್ಲಿತ್ತು. ಲಾಭ-ನಷ್ಟದ ನಡುವೆ ತೂಗುಯ್ಯಾಲೆಯಂತೆ ಏರಿಳಿತ ದಾಖಲಿಸಿತು. ಬ್ಯಾಂಕಿಂಗ್‌ ಷೇರುಗಳು ಒತ್ತಡದಲ್ಲಿತ್ತು. ಏಷ್ಯನ್‌ ಮಾರ್ಕೆಟ್‌ನಲ್ಲಿ ಹೂಡಿಕೆದಾರರು ಜುಲೈ ತಿಂಗಳಿನ ಹಣದುಬ್ಬರದ ಅಂಕಿ ಅಂಶಗಳನ್ನು ಎದುರು ನೋಡುತ್ತಿದ್ದಾರೆ. ಅಮೆರಿಕದ ಹಣದುಬ್ಬರ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಸೆನ್ಸೆಕ್ಸ್‌ 368 ಅಂಕ ಕುಸಿತ, ಆದಾಯದಲ್ಲಿ ಚಿನ್ನ ಹಿಂದಿಕ್ಕಿದ ಸ್ಟಾಕ್ಸ್‌ ‌

ಸಾಂದರ್ಭಿಕ ಚಿತ್ರ.

Profile Siddalinga Swamy Aug 12, 2025 10:37 PM

ಮುಂಬಯಿ: ಸೆನ್ಸೆಕ್ಸ್‌ ಮತ್ತು ನಿಫ್ಟಿ 50 ಎರಡೂ ಸೂಚ್ಯಂಕಗಳು ಇಂದು ಮಂದಗತಿಯಲ್ಲಿತ್ತು. ಲಾಭ-ನಷ್ಟದ ನಡುವೆ ತೂಗುಯ್ಯಾಲೆಯಂತೆ ಏರಿಳಿತ ದಾಖಲಿಸಿತು (Stock Market). ಬ್ಯಾಂಕಿಂಗ್‌ ಷೇರುಗಳು ಒತ್ತಡದಲ್ಲಿದ್ದವು. ಏಷ್ಯನ್‌ ಮಾರ್ಕೆಟ್‌ನಲ್ಲಿ ಹೂಡಿಕೆದಾರರು ಜುಲೈಯ ಹಣದುಬ್ಬರದ ಅಂಕಿ ಅಂಶಗಳನ್ನು ಎದುರು ನೋಡುತ್ತಿದ್ದಾರೆ. ಅಮೆರಿಕದ ಹಣದುಬ್ಬರ ವರದಿಯ ನಿರೀಕ್ಷೆಯಲ್ಲಿದ್ದಾರೆ. ಇದು ಸದ್ಯದ ಭವಿಷ್ಯದ ಬಡ್ಡಿ ದರದ ಟ್ರೆಂಡ್‌ ಅನ್ನು ನಿರ್ಧರಿಸಬಹುದು ಎಂಬ ನಿರೀಕ್ಷೆ ಸ್ಟಾಕ್‌ ಮಾರ್ಕೆಟ್‌ನಲ್ಲಿದೆ.‌

ಮಧ್ಯಾಹ್ನ 2.30ರ ವೇಳೆಗೆ ಸೆನ್ಸೆಕ್ಸ್ 186 ಅಂಕ ಕಲೆದುಕೊಂಡು 80,415ರಲ್ಲಿತ್ತು. ನಿಫ್ಟಿ 40 ಅಂಕ ನಷ್ಟದಲ್ಲಿ 24,544ರಲ್ಲಿತ್ತು. ಅಂತಿಮವಾಗಿ ಸೆನ್ಸೆಕ್ಸ್‌ 368 ಅಂಕ ನಷ್ಟದಲ್ಲಿ 80,235ಕ್ಕೆ ಸ್ಥಿರವಾಯಿತು. ನಿಫ್ಟಿ 98 ಅಂಕ ಕಳೆದುಕೊಂಡು 24,487ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.



ಸೆಕ್ಟರ್‌ಗಳ ವಹಿವಾಟುಗಳ ಕುರಿತು ವಿವರ

ಇವತ್ತು ನಿಫ್ಟಿ ಬ್ಯಾಂಕ್‌ ಇಳಿಕೆಯಾಯಿತು. ಖಾಸಗಿ ಬ್ಯಾಂಕ್‌ಗಳಿಗೆ ಒಂದಷ್ಟು ನಷ್ಟ ಆಗಿರುವುದು ಇದಕ್ಕೆ ಕಾರಣ. ರಿಯಾಲ್ಟಿ ಷೇರುಗಳೂ ಮಾರಾಟದ ಒತ್ತಡದಲ್ಲಿತ್ತು. ಆದರೆ ನಿಫ್ಟಿ ಐಟಿ ಮತ್ತು ಮೀಡಿಯಾ ಕೌಂಟರ್‌ನಲ್ಲಿ ಖರೀದಿಯ ಉತ್ಸಾಹ ಇತ್ತು.

ಟಾಪ್‌ ಟ್ರೇಡ್ಸ್‌ ಕುರಿತ ವಿವರ

ತಿಲಕ್‌ ನಗರ್‌ ಇಂಡಸ್ಟ್ರೀಸ್‌

ಷೇರಿನ ದರ: 490/-

1 ವರ್ಷದ ಹಿಂದಿನ ದರ: 240/-

1 ವರ್ಷದಲ್ಲಿ ಏರಿಕೆ: 105%

ತಿಲಕ್‌ ನಗರ್‌ ಇಂಡಸ್ಟ್ರೀಸ್‌ ಷೇರು ದರ ಇಂಟ್ರಾ ಡೇ ಟ್ರೇಡ್‌ನಲ್ಲಿ 8.45% ಏರಿಕೆ ದಾಖಲಿಸಿತು. ಬಿಎಸ್‌ಇನಲ್ಲಿ ಷೇರಿನ ದರ 490/- ಇತ್ತು.

ಈ ತಿಲಕ್‌ ನಗರ್‌ ಇಂಡಸ್ಟ್ರೀಸ್‌ ಎಂದರೆ, ಇಂಡಿಯನ್‌ ಮೇಡ್‌ ಫಾರಿನ್‌ ಲಿಕ್ಕರ್‌ ಕಂಪನಿಯಾಗಿದೆ. ಅಂದರೆ ವಿದೇಶಿ ಮೂಲದ ಮದ್ಯಗಳಾದ ವಿಸ್ಕಿ, ವೊಡ್ಕಾ, ರಮ್‌, ಜಿನ್‌ ಇತ್ಯಾದಿಗಳನ್ನು ಭಾರತದಲ್ಲಿಯೇ ತಯಾರಿಸುವ ಕಂಪನಿಯಾಗಿದೆ. ವಿದೇಶಿ ಮದ್ಯಗಳನ್ನು ಉತ್ಪಾದಿಸುವ ಭಾರತೀಯ ಕಂಪನಿ ಎನ್ನಬಹುದು. ಅಂತಾರಾಷ್ಟ್ರೀಯ ದರ್ಜೆಯಲ್ಲಿ ಮದ್ಯದ ಉತ್ಪನ್ನಗಳನ್ನು ಇಂಥ ಕಂಪನಿಯಲ್ಲಿ ತಯಾರಿಸಲಾಗುತ್ತದೆ. ಇವುಗಳಿಗೆ ಸಂಕ್ಷಿಪ್ತವಾಗಿ, IMFL ಎಂದು ಕರೆಯುತ್ತಾರೆ.

ಈ ತಿಲಕ್‌ ನಗರ್‌ ಇಂಡಸ್ಟ್ರಿ ಕಂಪನಿಯು ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 88 ಕೋಟಿ 50 ಲಕ್ಷ ನಿವ್ವಳ ಲಾಭವನ್ನು ಗಳಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ 40 ಕೋಟಿ ಲಾಭ ಗಳಿಸಿತ್ತು. ಅಂದ್ರೆ 121% ಏರಿಕೆ ದಾಖಲಿಸಿದೆ.

ಅಸ್ಟ್ರಾಲ್‌ ಲಿಮಿಟೆಡ್

ಷೇರಿನ ದರ: 1,280/-

1 ವರ್ಷದ ಹಿಂದಿನ ದರ: 1937

1 ವರ್ಷದಲ್ಲಿಇಳಿಕೆ: 33%

ಕಟ್ಟಡ ನಿರ್ಮಾಣಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಪೂರೈಸುವ ಅಸಟ್ರಾಲ್‌ ಲಿಮಿಟೆಡ್‌, ಅಹಮದಾಬಾದ್‌ ಮೂಲದ ಕಂಪನಿಯಾಗಿದೆ. ಇಂಟ್ರಾ ಡೇನಲ್ಲಿ ಷೇರಿನ ದರ 5.8% ಇಳಿಯಿತು. ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ನಿವ್ವಳ ಲಾಭ 81 ಕೋಟಿ ರುಪಾಯಿಗೆ ಇಳಿಕೆ ಆಗಿರುವುದು ಕಾರಣ. ಕಂಪನಿಯ ಆದಾಯವು ಕೂಡ 1,381 ಕೋಟಿ ರುಪಾಯಿಗೆ ತಗ್ಗಿದೆ.

ಪ್ರಜ್‌ ಇಂಡಸ್ಟ್ರೀಸ್‌ Praj Industries

ಷೇರಿನ ದರ: 415/-

1 ವರ್ಷದ ಹಿಂದಿನ ದರ: 706/-

1 ವರ್ಷದಲ್ಲಿ ಇಳಿಕೆ: 41%

ಪ್ರಜ್‌ ಇಂಡಸ್ಟ್ರೀಸ್‌ ಬಹು ರಾಷ್ಟ್ರೀಯ ಪ್ರಾಜೆಕ್ಟ್‌ ಎಂಜಿನಿಯರಿಂಗ್‌ ಕಂಪನಿಯಾಗಿದೆ. ಪುಣೆಯಲ್ಲಿ ಪ್ರಧಾನ ಕಚೇರಿಯನ್ನು ಒಳಗೊಂಡಿದೆ. ಇವತ್ತು ಷೇರಿನ ದರದಲ್ಲಿ ಮಧ್ಯಂತರದಲ್ಲಿ 8.8% ಇಳಿಯಿತು. ಕಂಪನಿಯ ತ್ರೈಮಾಸಿಕ ಲಾಭ ಕಳೆದ ಏಪ್ರಿಲ್-ಜೂನ್‌ ಅವಧಿಯಲ್ಲಿ 6 ಕೋಟಿಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ 85 ಕೋಟಿ ರೂ. ಲಾಭ ಗಳಿಸಿತ್ತು. ಇದು ಷೇರಿನ ದರದ ಮೇಲೆ ಪ್ರಭಾವ ಬೀರಿದೆ.

ಮುತ್ತೂಟ್‌ ಮೈಕ್ರೊಫಿನ್‌ Muthoot Microfin

ಷೇರಿನ ದರ: 148/-

1 ವರ್ಷದ ಹಿಂದಿನ ದರ: 219/-

1 ವರ್ಷದಲ್ಲಿ ಇಳಿಕೆ: 32%

ಮುತ್ತೂಟ್‌ ಸಮೂಹದ ಅಧೀನದಲ್ಲಿರುವ ಮುತ್ತೂಟ್‌ ಮೈಕ್ರೊಫಿನ್‌ ಲಿಮಿಟೆಡ್‌ ಕಂಪನಿಯು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕಿರು ಸಾಲಗಳನ್ನು ನೀಡುತ್ತದೆ. ಕೊಚ್ಚಿನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಳೆದ ಏಪ್ರಿಲ್-ಜೂನ್‌ ಅವಧಿಯಲ್ಲಿ ಈ ಫೈನಾನ್ಸ್‌ ಸಂಸ್ಥೆಯು ಕೇವಲ 6 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯು 113 ಕೋಟಿ ರೂ. ಲಾಭ ಗಳಿಸಿತ್ತು. ಅಂದರೆ ಲಾಭದಲ್ಲಿ ಬರೋಬ್ಬರಿ 95% ಇಳಿಕೆಯಾಗಿದೆ.

ಹೈ ವೇ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪನಿಯ ಐಪಿಒ ಭರ್ಜರಿ ಯಶಸ್ವಿಯಾಗಿದೆ. ಕಂಪನಿಯ ಷೇರು ಸ್ಟಾಕ್‌ ಮಾರ್ಕೆಟ್‌ನಲ್ಲಿ ಉನ್ನತ ಮಟ್ಟದ ದರದಲ್ಲಿ ಲಿಸ್ಟ್‌ ಆಗಿದೆ. ಹೀಗಾಗಿ ಐಪಿಒದಲ್ಲಿ ಷೇರು ಖರೀದಿಸಿದವರಿಗೆ ಲಾಭವಾಗಿದೆ. ಐಪಿಒ ದರ 70 ರೂ. ಆಗಿದ್ದರೆ, ಬಿಎಸ್‌ಇನಲ್ಲಿ ಲಿಸ್ಟ್‌ ಆದ ಬಳಿಕ ದರವು 117/- ಕ್ಕೆ ಏರಿಕೆಯಾಗಿದೆ. ಎನ್‌ಎಸ್‌ಇನಲ್ಲಿ 115/-ಕ್ಕೆ ಏರಿಕೆಯಾಗಿದೆ. ಈ 130 ಕೋಟಿ ರೂ. ಗಾತ್ರದ ಐಪಿಒ ಭರ್ಜರಿ ರೆಸ್ಪಾನ್ಸ್‌ ಗಳಿಸಿದೆ.

ನಿಫ್ಟಿ 50ರಲ್ಲಿ ಮಧ್ಯಂತರದಲ್ಲಿ ಲಾಭ ಗಳಿಸಿದ ಷೇರುಗಳ ಪಟ್ಟಿ

ಮಾರುತಿ ಸುಜುಕಿ: 12,930/- (2.51%)

ಟೆಕ್‌ ಮಹೀಂದ್ರಾ: 1,514/- (2.03%)

ಮಹೀಂದ್ರಾ & ಮಹೀಂದ್ರಾ: 3,248/- (1.93%)

ಹೀರೊ ಮೊಟೊ ಕಾರ್ಪ್:‌ 4,641/- (1.72%)

ಟಾಟಾ ಸ್ಟೀಲ್:‌ 160/- (1.51%)

ಎನ್‌ ಟಿಪಿಸಿ : 340/- (4.36%)

ಎಚ್‌ಸಿಎಲ್‌ ಟೆಕ್:‌ 1,507/- (1.27%)

ನಿಫ್ಟಿ 50ರಲ್ಲಿ ಮಧ್ಯಂತರದಲ್ಲಿ ನಷ್ಟಕ್ಕೀಡಾದ ಷೇರುಗಳ ಪಟ್ಟಿ

ಬಜಾಜ್‌ ಫೈನಾನ್ಸ್‌: 867/- (1.24%)

ಗ್ರಾಸಿಮ್‌ ಇಂಡಸ್ಟ್ರೀಸ್: 2,728/-‌ (1.13%)

ಎಟರ್ನಲ್:‌ 306/- (1.04%)

ಎಚ್‌ಯುಎಲ್:‌ 2,437/- ( 0.84%)

ಎಚ್‌ಡಿಎಫ್‌ ಸಿ ಬ್ಯಾಂಕ್: 1,985/- ( 0.53%)‌

ಬಿಇಎಲ್:‌ 381/- (0.57%)

ಐಸಿಐಸಿಐ ಬ್ಯಾಂಕ್:‌ 1,429/- ( 0.56%)

ಯಸ್‌ ಬ್ಯಾಂಕ್‌ ಷೇರಿನ ದರ ತನ್ನ ಉನ್ನತ ಮಟ್ಟದಿಂದ 20% ಇಳಿಕೆ ದಾಖಲಿಸಿದ್ದು, ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ. ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಉತ್ತಮ ಪರ್ಫಾಮೆನ್ಸ್‌ ಕೊಟ್ಟಿದ್ದರೂ, ಯಸ್‌ ಬ್ಯಾಂಕ್‌ ಷೇರಿನ ದರದಲ್ಲಿ 20% ಇಳಿಕೆ ಆಗಿರುವುದು ಗಮನಾರ್ಹ. ಇದು ವೀಕ್‌ ಟ್ರೆಂಡ್‌ ಅನ್ನು ಬಿಂಬಿಸಿದೆ. ಷೇರಿನ ಈಗಿನ ದರ 19 ರುಪಾಯಿ ಆಗಿದೆ. 1 ವರ್ಷದ ಹಿಂದೆ 24/- ಇತ್ತು.

ಟೈರ್‌ ಉತ್ಪಾದಕ ಎಂಆರ್‌ಎಫ್‌ ತನ್ನ ಏಪ್ರಿಲ್-ಜೂನ್‌ ತ್ರೈಮಾಸಿಕ ರಿಸಲ್ಟ್‌ ಅನ್ನು ಪ್ರಕಟಿಸಿದೆ. ಈ ಅವಧಿಯಲ್ಲಿ ಕಂಪನಿಯು 484 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 14% ಇಳಿಕೆಯಾಗಿದೆ. ಕಳೆದ ವರ್ಷ 563 ಕೋಟಿ ತ್ರೈಮಾಸಿಕ ಲಾಭ ಗಳಿಸಿತ್ತು. ಹೀಗಿದ್ದರೂ ಆದಾಯವು 7,650 ಕೋಟಿ ರುಪಾಯಿಗೆ ಏರಿಕೆಯಾಗಿದೆ.

MRF ಷೇರಿನ ಈಗಿನ ದರ: 1,40,225/-

ಚಿನ್ನಕ್ಕಿಂತ ಹೆಚ್ಚು ಆದಾಯ ನೀಡಿದ ಷೇರು ಮಾರುಕಟ್ಟೆ ಹೂಡಿಕೆ

2019-2025 ಆಗಸ್ಟ್‌ ಅವಧಿಯಲ್ಲಿ ಷೇರು ಮಾರುಕಟ್ಟೆಯು ಹೂಡಿಕೆದಾರರಿಗೆ 124% ಆದಾಯ ನೀಡಿದ್ದರೆ, ಬಂಗಾರ 117% ಆದಾಯ ಕೊಟ್ಟಿದೆ.

ಸಿಎಲ್‌ಎಸ್‌ಎ ವರದಿಯ ಪ್ರಕಾರ 2019-2025 ಆಗಸ್ಟ್‌ ಅವಧಿಯಲ್ಲಿ ಹೆಚ್ಚು ಆದಾಯ ನೀಡಿದ ಆಸ್ತಿಗಳು:

ಬಂಗಾರ : 117%

ಬೆಳ್ಳಿ: 124%

ಈಕ್ವಿಟಿ/ ಗ್ಲೋಬಲ್:‌ MSCI Wrold Index : 74%

Magnificent 7 Index : 766%

Nvidia ಷೇರು ದರ: 4,225%

ಈಕ್ವಿಟಿ (ಏಷ್ಯಾ)

ಚೀನಾ: 6%

ಭಾರತ-ನಿಫ್ಟಿ 124%

ಕ್ರಿಪ್ಟೊ: ಬಿಟ್‌ ಕಾಯಿನ್:‌ 1,001%

ಬಾಂಡ್‌

ಬ್ಲೂಮ್‌ ಬರ್ಗ್‌ ಬಾರ್‌ಕ್ಲೇಸ್‌ ಗ್ಲೋಬಲ್‌ ಅಗ್ರೆಗೇಟ್‌ ಬಾಂಡ್‌ ಇಂಡೆಕ್ಸ್: -2%

ಜುಲೈನಲ್ಲಿ ಸ್ಟಾಕ್‌ ಮಾರುಕಟ್ಟೆ ವಹಿವಾಟುಗಳು ಮಂದಗತಿಯಲ್ಲಿದ್ದರೂ, ಹೂಡಿಕೆದಾರರು ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಫಂಡ್‌ಗಳಿಗೆ 12,000 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | SBI Recruitment 2025: ಪದವಿ ಹೊಂದಿದವರಿಗೆ ಗುಡ್‌ನ್ಯೂಸ್‌; ಬರೋಬ್ಬರಿ 5,180 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ