ನಿಸ್ಸಾನ್ ಮ್ಯಾಗ್ನೈಟ್‌ಗೆ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆ ಪರಿಚಯಿಸಿದ ನಿಸ್ಸಾನ್
ಈ ಯೋಜನೆಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಹೊಂದಿದ್ದು, ಇದನ್ನು 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯವರೆಗೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ 10 ವರ್ಷಗಳು/2 ಲಕ್ಷ ಕಿಮೀ ವರೆಗಿನ ರಕ್ಷಣೆಯನ್ನು ಒದಗಿಸಲಾಗುತ್ತಿದ್ದು, ಕೇವಲ ಕಿಮೀಗೆ 22 ಪೈಸೆ ಅಥವಾ ಪ್ರತಿ ದಿನಕ್ಕೆ 12 ರೂ. ಬೆಲೆಯಲ್ಲಿ ಸಂಪೂರ್ಣ ರಕ್ಷಣೆ ದೊರೆಯುತ್ತದೆ.


ಭಾರತದಲ್ಲಿ ವಿಭಾಗದಲ್ಲಿಯೇ ಮೊದಲ ಬಾರಿಗೆ ಜಿಎನ್‌ಸಿಎಪಿ 5-ಸ್ಟಾರ್ ರೇಟಿಂಗ್ ಪಡೆದಿರುವ ಹೊಸ ನಿಸ್ಸಾನ್ ಮ್ಯಾಗ್ನೈಟ್‌ಗೆ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆ ಪರಿಚಯಿಸಿದ ನಿಸ್ಸಾನ್. ನಿಸ್ಸಾನ್ ಮ್ಯಾಗ್ನೈಟ್ ಭಾರತದ ಅತ್ಯಂತ ಸುರಕ್ಷಿತ ಬಿ-ಎಸ್‌ಯುವಿಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ
- 7 ವರ್ಷಗಳವರೆಗೆ ಸಂಪೂರ್ಣ ರಕ್ಷಣೆ ಒದಗಿಸಲಾಗುತ್ತಿದ್ದು, 8ನೇ, 9ನೇ ಮತ್ತು 10ನೇ ವರ್ಷದಲ್ಲಿ ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ಕವರೇಜ್ ಒದಗಿಸಲಾಗುತ್ತದೆ.
ಬೆಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ಭಾರತದ ಬಿ-ಎಸ್‌ಯುವಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯನ್ನು ಪರಿಚಯಿಸಿದ್ದು, ತನ್ನ ಹೊಸ ನಿಸ್ಸಾನ್ ಮ್ಯಾಗ್ನೈಟ್ ಮೇಲೆ ಈ ಸೌಲಭ್ಯ ಒದಗಿಸುತ್ತಿದೆ.
ಹೊಸ ನಿಸ್ಸಾನ್ ಮ್ಯಾಗ್ನೈಟ್ ಪ್ರಯಾಣಿಕರ ಸುರಕ್ಷತೆಗೆ 5-ಸ್ಟಾರ್ ರೇಟಿಂಗ್ ಮತ್ತು ಎಓಪಿ (ವಯಸ್ಕ ಪ್ರಯಾಣಿಕರ ಸುರಕ್ಷತೆ) ವಿಭಾಗದಲ್ಲಿ ಪರಿಪೂರ್ಣ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದ್ದು, ಈ ವಾಹನಕ್ಕೆ ಹೊಸ ಸೌಲಭ್ಯ ಒದಗಿಸುತ್ತಿರುವುದು ಗಮನಾರ್ಹವಾಗಿದೆ.
ಈ ಯೋಜನೆಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಹೊಂದಿದ್ದು, ಇದನ್ನು 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯವರೆಗೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ 10 ವರ್ಷಗಳು/2 ಲಕ್ಷ ಕಿಮೀ ವರೆಗಿನ ರಕ್ಷಣೆಯನ್ನು ಒದಗಿಸಲಾಗುತ್ತಿದ್ದು, ಕೇವಲ ಕಿಮೀಗೆ 22 ಪೈಸೆ ಅಥವಾ ಪ್ರತಿ ದಿನಕ್ಕೆ 12 ರೂ. ಬೆಲೆಯಲ್ಲಿ ಸಂಪೂರ್ಣ ರಕ್ಷಣೆ ದೊರೆಯುತ್ತದೆ. ಈ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯೊಂದಿಗೆ ಲಭ್ಯವಿರುವ ವಾಹನಗಳಿಗೆ ಮಾತ್ರ ಅನ್ವಯವಾಗುತ್ತದೆ. ಅಕ್ಟೋಬರ್ 2024ರಲ್ಲಿ ಬಿಡುಗಡೆಯಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ ಮೇಲೆ ದೊರೆಯುತ್ತದೆ. ವಿಸ್ತೃತ ವಾರಂಟಿ ಯೋಜನೆಯಲ್ಲಿ ಗ್ರಾಹಕರು ತಮ್ಮ ಅಗತ್ಯ ಮತ್ತು ಆದ್ಯತೆಗಳಿಗೆ ತಕ್ಕಂತೆ 3+4, 3+3, 3+2 ಮತ್ತು 3+1 ವರ್ಷಗಳ ಆಯ್ಕೆಗಳನ್ನು ಆಯ್ಕೆ ಮಾಡಬಹುದು.
ಇದನ್ನೂ ಓದಿ:Bengaluru News: ಫಿಟ್ನೆಸ್ ಸೆಂಟರ್ನ 3ನೇ ಮಹಡಿಯಿಂದ ಬಿದ್ದು ಯುವತಿ ಸಾವು
ಈ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯನ್ನು ಗ್ರಾಹಕರಿಗೆ ಹೆಚ್ಚಿನ ಆತ್ಮವಿಶ್ವಾಸ ಮತ್ತು ಮಾನಸಿಕ ಶಾಂತಿಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಲ್ಲಿ ದೇಶಾದ್ಯಂತ ಸಂಪೂರ್ಣ ಕವರೇಜ್ ಲಭ್ಯವಿದ್ದು, ನಿಸ್ಸಾನ್ ನ ಯಾವುದೇ ಅಧಿಕೃತ ಸೇವಾ ಕೇಂದ್ರಗಳಲ್ಲಿ ಕ್ಯಾಶ್ ಲೆಸ್ ರಿಪೇರಿ ಸೌಲಭ್ಯ ಹೊಂದಬಹುದು. ಕ್ಲೈಮ್ ಗಳಿಗೆ ಸಂಖ್ಯೆ ಅಥವಾ ಮೌಲ್ಯದ ಮೇಲೆ ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ. ಹಾಗಾಗಿ ರಿಪೇರಿ ವೆಚ್ಚಗಳಲ್ಲಿ ಗಣನೀಯ ಉಳಿತಾಯ ಮಾಡಬಹುದು. ವಿಶೇಷವಾಗಿ ರಿಪೇರಿಗೆ ನಿಸ್ಸಾನ್ ನ ಒರಿಜಿನಲ್ ಸ್ಪೇರ್ ಪಾರ್ಟ್ಸ್ ಬಳಸಿಕೊಂಡು ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲಾಗುತ್ತದೆ. ವಿಸ್ತೃತ ವಾರಂಟಿ ಯೋಜನೆಯನ್ನು ನಿಸ್ಸಾನ್ ಫೈನಾನ್ಸ್ ಮೂಲಕ ಖರೀದಿಸಬಹುದು.
ಈ ಕುರಿತು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಅವರು, “ನಮ್ಮ ಹೊಸ ನಿಸ್ಸಾನ್ ಮ್ಯಾಗ್ನೈಟ್ ಗೆ ಗ್ಲೋಬಲ್ ಎನ್‌ಸಿಎಪಿನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಭಾರತದ ಅತ್ಯಂತ ಸುರಕ್ಷಿತ ಬಿ-ಎಸ್‌ಯುವಿಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಒಂದಾಗಿದೆ ಎಂದು ಹೇಳಲು ನಮಗೆ ಸಂತೋಷವಿದೆ. ಈಗ ಈ ವಾಹನದ ಮೇಲೆ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯನ್ನು ಒದಗಿಸಲಾಗುತ್ತಿದ್ದು, ಗ್ರಾಹಕರಿಗೆ ಒಂದು ದಶಕಗಳವರೆಗೆ ಯಾವುದೇ ಚಿಂತೆ ಇಲ್ಲದೆ ವಾಹನ ಮಾಲೀಕತ್ವ ಹೊಂದಲು ಅನುವು ಮಾಡಿಕೊಡುತ್ತಿದ್ದೇವೆ” ಎಂದು ಹೇಳಿದರು.
ಹೊಸ ನಿಸ್ಸಾನ್ ಮ್ಯಾಗ್ನೈಟ್ ಇತ್ತೀಚೆಗೆ ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಪ್ಯಾಸೆಂಜರ್ ಸೇಫ್ಟಿ ರೇಟಿಂಗ್ ಪಡೆದಿದ್ದು, ಈ ಮೂಲಕ ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ದೊರೆಯುವ ಅತ್ಯಂತ ಸುರಕ್ಷಿತ ಎಸ್‌ಯುವಿಗಳಲ್ಲಿ ಒಂದು ಎಂಬ ಹೆಗ್ಗಳಿಗೆ ಪಡೆದಿದೆ. ಅತ್ಯಾಧುನಿಕ ಸಿಎಂಎಫ್ ಎ+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿತವಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ ಅನ್ನು 2014ರಲ್ಲಿ ಬಿಡುಗಡೆಯಾಗಿತ್ತು. ಈ ವಾಹನವು 6 ಏರ್‌ಬ್ಯಾಗ್‌ಗಳು, 67% ಹೈ ಟೆನ್ಸೈಲ್ ಸ್ಟ್ರೆಂಗ್ತ್ ಸ್ಟೀಲ್, ಎಬಿಎಸ್ + ಇಬಿಡಿ, ಇ.ಎಸ್.ಸಿ, ಟಿಸಿಎಸ್, ಎಚ್ಎಸ್ಎ, ಬ್ರೇಕ್ ಅಸಿಸ್ಟ್, ಟಿಪಿಎಂಎಸ್ ಸೇರಿದಂತೆ 40ಕ್ಕೂ ಹೆಚ್ಚು ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ.
ನಿಸ್ಸಾನ್ ಮೋಟಾರ್ ಇಂಡಿಯಾ ಇತ್ತೀಚೆಗೆ ತನ್ನ ಬಹುನೀರಿಕ್ಷಿತ ನ್ಯೂ ನಿಸ್ಸಾನ್ ಮ್ಯಾಗ್ನೈಟ್ ಕುರೊ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಿದ್ದು, ಗಾಢ ಕಪ್ಪು ಬಣ್ಣದ ಈ ಆವೃದತ್ತಿಯು 8.30 ಲಕ್ಷ ರೂ. (ಎಕ್ಸ್-ಶೋರೂಮ್, ದೆಹಲಿ) ಆರಂಭಿಕ ಬೆಲೆಯಲ್ಲಿ ದೊರೆಯುತ್ತದೆ. ಕಪ್ಪು ಥೀಮ್ ನ ಒಳಾಂಗಣ ಮತ್ತು ಹೊರಾಂಗಣವನ್ನು ಹೊಂದಿದೆ.