ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trump tariffs: ಭಾರತಕ್ಕೆ ಹೆಚ್ಚು, ಪಾಕ್‌ಗೆ ಕಡಿಮೆ ಸುಂಕ ವಿಧಿಸಿದ ಡೊನಾಲ್ಡ್‌ ಟ್ರಂಪ್

Donald Trump: ಅಮೆರಿಕ ವ್ಯವಹಾರಗಳನ್ನು ಜಾಗತಿಕವಾಗಿ ಮರು ರೂಪಿಸುವ ಸಲುವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವ್ಯಾಪಾರ ಒಪ್ಪಂದದ ಗಡುವಿಗೆ ಮೊದಲೇ 12ಕ್ಕೂ ಹೆಚ್ಚು ವ್ಯಾಪಾರ ಪಾಲುದಾರ ರಾಷ್ಟ್ರಗಳಿಗೆ ಹೆಚ್ಚಿನ ಸುಂಕಗಳನ್ನು ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಭಾರತದ ಸರಕುಗಳಿಗೆ ತೆರಿಗೆಯನ್ನು ಹೆಚ್ಚಿಸಿದ್ದರೆ ಪಾಕಿಸ್ತಾನದ ಸರಕುಗಳಿಗೆ ತೆರಿಗೆ ದರವನ್ನು ಇಳಿಸಲಾಗಿದೆ. ಉಳಿದಂತೆ ಯಾವ ದೇಶಗಳಿಗೆ ಎಷ್ಟು ತೆರಿಗೆ ವಿಧಿಸಲಾಗಿದೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಭಾರತಕ್ಕೆ ಹೆಚ್ಚು, ಪಾಕ್‌ಗೆ ಕಡಿಮೆ ಸುಂಕ ವಿಧಿಸಿದ ಟ್ರಂಪ್

ವಾಷಿಂಗ್ಟನ್: ವ್ಯಾಪಾರ ಒಪ್ಪಂದದ (Trade deal) ಗಡುವಿಗೆ (Trade deal deadline) ಮೊದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು 69 ವ್ಯಾಪಾರ ಪಾಲುದಾರರಿಗೆ ಸುಂಕಗಳನ್ನು (US Tariff) ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಪರಿಷ್ಕೃತ ತೆರಿಗೆಗಳ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಅವರು ಇದರಲ್ಲಿ ಭಾರತಕ್ಕೆ ಶೇ. 25 ಸುಂಕ ವಿಧಿಸಿದ್ದರೆ ಪಾಕಿಸ್ತಾನದ ಸುಂಕ ದರ ಇಳಿಕೆಯಾಗಿರುವುದಾಗಿ ಘೋಷಿಸಿದ್ದಾರೆ. ಪಾಕ್‌ನ ದರ ಕಡಿತಗೊಂಡಿದೆ. ಬಹುತೇಕ ರಾಷ್ಟ್ರಗಳು ಶೇ 10ರಿಂದ 15ರಷ್ಟು ಯುಎಸ್ ಸುಂಕ ದರಕ್ಕೆ ಒಳಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷರ ಆದೇಶದಲ್ಲಿ ತಿಳಿಸಲಾಗಿದೆ.

ಅಮೆರಿಕ ವ್ಯವಹಾರಗಳನ್ನು ಜಾಗತಿಕವಾಗಿ ಮರು ರೂಪಿಸುವ ಸಲುವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವ್ಯಾಪಾರ ಒಪ್ಪಂದದ ಗಡುವಿಗೆ ಮೊದಲೇ 12ಕ್ಕೂ ಹೆಚ್ಚು ವ್ಯಾಪಾರ ಪಾಲುದಾರ ರಾಷ್ಟ್ರಗಳಿಗೆ ಹೆಚ್ಚಿನ ಸುಂಕಗಳನ್ನು ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ 69 ವ್ಯಾಪಾರ ಪಾಲುದಾರರಿಗೆ ಶೇ. 10 ರಿಂದ 41ರಷ್ಟು ಹೆಚ್ಚಿನ ಆಮದು ಸುಂಕ ದರಗಳು ಮುಂದಿನ ಏಳು ದಿನಗಳಲ್ಲಿ ಪ್ರಾರಂಭವಾಗಲಿವೆ ಎಂದು ತಿಳಿಸಿದೆ.

ಸಿರಿಯಾದ ಮೇಲೆ ಶೇ. 41, ಕೆನಡಾದ ಅನೇಕ ಸರಕುಗಳ ಮೇಲೆ ಶೇ. 35, ಬ್ರೆಜಿಲ್‌ಗೆ ಶೇ. 50, ಭಾರತಕ್ಕೆ ಶೇ. 25, ತೈವಾನ್‌ಗೆ ಶೇ. 20 ಮತ್ತು ಸ್ವಿಟ್ಜರ್‌ಲ್ಯಾಂಡ್‌ಗೆ ಶೇ. 39ರಷ್ಟು ತೆರಿಗೆ ವಿಧಿಸಿರುವ ಅಮೆರಿಕ ಪಾಕಿಸ್ತಾನದ ಆಮದುಗಳ ಮೇಲಿನ ಸುಂಕಗಳನ್ನು ಶೇ. 29 ರಿಂದ 19ಕ್ಕೆ ಇಳಿಕೆ ಮಾಡಿರುವುದು ಈಗ ವಿಶ್ವದ ಗಮನ ಸೆಳೆದಿದೆ.

ಕೆಲವು ವ್ಯಾಪಾರ ಪಾಲುದಾರ ರಾಷ್ಟ್ರಗಳು ಇನ್ನೂ ಮಾತುಕತೆಯನ್ನು ಮುಂದುವರಿಸಿವೆ. ಆದರೆ ಇದು ವ್ಯಾಪಾರ ಸಂಬಂಧದಲ್ಲಿ ಹೆಚ್ಚಿನ ಬದಲಾವಣೆ ಮಾಡುವುದಿಲ್ಲ. ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ ಹೆಚ್ಚಿನ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಬಹುತೇಕ ರಾಷ್ಟ್ರಗಳು ಹೆಚ್ಚಿನ ಸುಂಕ ದರವನ್ನು ಒಪ್ಪಿಕೊಂಡಿವೆ. ಇನ್ನು ಕೆಲವು ರಾಷ್ಟ್ರಗಳು ವ್ಯಾಪಾರ ಒಪ್ಪಂದಕ್ಕೆ ಸಿದ್ಧವಾಗಿವೆ. ಹೀಗಾಗಿ ನಾವು ಈಗ ಹೊಸ ಸುಂಕ ದರಗಳನ್ನು ಘೋಷಿಸಬೇಕಾಗಿದೆ. ನಮಗೆ ಕೆಲವು ಒಪ್ಪಂದಗಳಿವೆ. ಆ ಒಪ್ಪಂದಗಳನ್ನು ಘೋಷಿಸುವಲ್ಲಿ ನಾನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಿಗಿಂತ ಮುಂದೆ ಹೋಗಲು ಬಯಸುವುದಿಲ್ಲ ಎಂದು ಟ್ರಂಪ್ ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ

ಕೆನಡಾ, ಮೆಕ್ಸಿಕೋಗೆ ವಿನಾಯಿತಿ

ಉತ್ತರ ಅಮೆರಿಕಾದ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಕೆನಡಾ ಮತ್ತು ಮೆಕ್ಸಿಕನ್ ಸರಕುಗಳಿಗೆ ವಿನಾಯಿತಿ ಜಾರಿಯಲ್ಲಿದೆ ಎಂದು ಶ್ವೇತಭವನ ತಿಳಿಸಿದೆ. ತೆರಿಗೆಗೆ ಸಂಬಂಧಿಸಿ ಕೆನಡಾಕ್ಕೆ ಪ್ರತ್ಯೇಕ ಆದೇಶವನ್ನು ಹೊರಡಿಸಿರುವ ಟ್ರಂಪ್ ಆಡಳಿತವು ಫೆಂಟನಿಲ್ ಸಂಬಂಧಿತ ಸುಂಕಗಳಿಗೆ ಒಳಪಟ್ಟಿರುವ ಕೆನಡಾದ ಸರಕುಗಳ ಮೇಲಿನ ದರವನ್ನು ಶೇ. 25 ರಿಂದ 35ಕ್ಕೆ ಹೆಚ್ಚಿಸಿದೆ. ಮೆಕ್ಸಿಕೊ ಬಳಿಕ ಎರಡನೇ ಅತಿದೊಡ್ಡ ಯುಎಸ್ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವ ಕೆನಡಾವು ಯುಎಸ್‌ಗೆ ಫೆಂಟನಿಲ್ ಹರಿವನ್ನು ತಡೆಯಲು ಸಹಕರಿಸಲು ವಿಫಲವಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಮೆಕ್ಸಿಕೊದ ಅನೇಕ ಸರಕುಗಳ ಮೇಲೆ ಶೇ. 30ರಷ್ಟು ಯುಎಸ್ ಸುಂಕ ವಿಧಿಸಿದೆ. ಹೆಚ್ಚಿನ ಮೆಕ್ಸಿಕನ್ ಆಟೋಮೋಟಿವ್ ಮತ್ತು ಲೋಹವಲ್ಲದ ಸರಕುಗಳ ಮೇಲೆ ಈ ಸುಂಕವಿರುವುದಿಲ್ಲ. ಮೆಕ್ಸಿಕನ್ ಉಕ್ಕು, ಅಲ್ಯೂಮಿನಿಯಂ ಮತ್ತು ತಾಮ್ರದ ಮೇಲೆ ಶೇ. 50 ರಷ್ಟು ಮತ್ತು ಮೆಕ್ಸಿಕನ್ ಆಟೋ ಸರಕುಗಳ ಮೇಲೆ ಶೇ. 25 ರಷ್ಟು ಸುಂಕವನ್ನು ವಿಧಿಸಲಾಗಿದೆ. ಫೆಂಟನಿಲ್ ಬಿಕ್ಕಟ್ಟಿಗೆ ಸಂಬಂಧಿಸಿ ಈ ಸುಂಕಗಳನ್ನು ವಿಧಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.

ಬ್ರೆಜಿಲ್‌ಗೆ ಕೆಲವು ವಿನಾಯಿತಿ

ಬ್ರೆಜಿಲ್‌ಗೆ ಶೇ. 50ರಷ್ಟು ಸುಂಕ ವಿಧಿಸಿರುವ ಟ್ರಂಪ್ ವಿಮಾನ, ಇಂಧನ ಮತ್ತು ಕಿತ್ತಳೆ ರಸದಂತಹ ವಲಯಗಳನ್ನು ಭಾರೀ ಸುಂಕಗಳಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾ ಮತ್ತು ಭಾರತ

ದಕ್ಷಿಣ ಕೊರಿಯಾವು ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲಿನ ಶೇ. 15 ರಷ್ಟು ಸುಂಕವನ್ನು ಸ್ವೀಕರಿಸಲು ಒಪ್ಪಿಕೊಂಡಿತು. ಇದರಲ್ಲಿ ಆಟೋಗಳು ಸೇರಿವೆ. ಭಾರತದ ಸರಕುಗಳು ಶೇ. 25 ರಷ್ಟು ಸುಂಕ ವಿಧಿಸಿರುವ ಅಮೆರಿಕ ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಗೆ ದಂಡವನ್ನು ಇದರಲ್ಲಿ ಸೇರಿಸಿದೆ. ಭಾರತದೊಂದಿಗಿನ ಮಾತುಕತೆಗಳು ಮುಂದುವರೆದಿದ್ದು, ದೇಶದ ಕಾರ್ಮಿಕ, ಕೃಷಿ ವಲಯಕ್ಕೆ ಇದರಿಂದ ಯಾವುದೇ ಹೊಡೆತ ಬೀಳದಂತೆ ತಡೆಯುವುದಾಗಿ ಭಾರತ ಹೇಳಿದೆ.

ಚೀನಾ

ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸ್ಮರ ಮುಂದುವರಿದಿದೆ. ಚೀನಾಕ್ಕೆ ಅಮೆರಿಕ ಸುಂಕ ಒಪ್ಪಂದಕ್ಕೆ ಆಗಸ್ಟ್ 12 ರ ಗಡುವನ್ನು ವಿಧಿಸಿದೆ.

ಇದನ್ನೂ ಓದಿ: Prajwal Revanna Case: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ದೋಷಿ ಎಂದು‌ ಕೋರ್ಟ್ ತೀರ್ಪು; ನಾಳೆ ಶಿಕ್ಷೆ ಪ್ರಕಟ

ಹೊಸ ಸುಂಕ ದರಗಳು

ಅಫ್ಘಾನಿಸ್ತಾನಕ್ಕೆ ಶೇ. 15, ಅಲ್ಜೀರಿಯಾ ಶೇ. 30, ಅಂಗೋಲಾ ಶೇ. 15, ಬಾಂಗ್ಲಾದೇಶ ಶೇ. 20, ಬೊಲಿವಿಯಾ ಶೇ. 15, ಬೋಸ್ನಿಯಾ ಮತ್ತು ಹರ್ಜೆಗೋವಿನಾ ಶೇ. 30, ಬೋಟ್ಸ್ವಾನಾ ಶೇ. 15, ಬ್ರೆಜಿಲ್ ಶೇ. 10, ಬ್ರೂನಿ ಶೇ. 25, ಕಾಂಬೋಡಿಯಾ ಶೇ. 19, ಕ್ಯಾಮರೂನ್ ಶೇ. 15, ಚಾಡ್ ಶೇ. 15, ಕೋಸ್ಟಾ ರಿಕಾ ಶೇ. 15, ಕೋಟ್ ಡಿ`ಐವೊಯಿರ್ ಶೇ. 15, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಶೇ. 15, ಈಕ್ವೆಡಾರ್ ಶೇ. 15, ಈಕ್ವಟೋರಿಯಲ್ ಗಿನಿಯಾ ಶೇ. 15, ಯುರೋಪಿಯನ್ ಯೂನಿಯನ್ ಶೇ. 15, ಫಾಕ್ಲ್ಯಾಂಡ್ ದ್ವೀಪಗಳು ಶೇ. 10, ಫಿಜಿ ಶೇ. 15, ಘಾನಾ ಶೇ. 15, ಗಯಾನಾ ಶೇ. 15, ಐಸ್ಲ್ಯಾಂಡ್ ಶೇ. 15, ಭಾರತ ಶೇ. 25, ಇಂಡೋನೇಷ್ಯಾ ಶೇ. 19, ಇರಾಕ್ ಶೇ. 35, ಇಸ್ರೇಲ್ ಶೇ. 15, ಜಪಾನ್ ಶೇ. 15, ಜೋರ್ಡಾನ್ ಶೇ. 15, ಕಝಾಕಿಸ್ತಾನ್ ಶೇ. 25, ಲಾವೋಸ್ ಶೇ. 40, ಲೆಸೊಥೊ ಶೇ. 15, ಲಿಬಿಯಾ ಶೇ. 30, ಲಿಚ್ಟೆನ್‌ಸ್ಟೈನ್ ಶೇ. 15, ಮಡಗಾಸ್ಕರ್ ಶೇ. 15, ಮಲಾವಿ ಶೇ. 15, ಮಲೇಷ್ಯಾ ಶೇ. 19, ಮಾರಿಷಸ್ ಶೇ. 15, ಮೊಲ್ಡೊವಾ ಶೇ. 25, ಮ್ಯಾನ್ಮಾರ್ (ಬರ್ಮಾ) ಶೇ. 40, ಮೊಜಾಂಬಿಕ್ ಶೇ. 15, ನಮೀಬಿಯಾ ಶೇ. 15, ನೌರು ಶೇ. 15, ನ್ಯೂಜಿಲೆಂಡ್ ಶೇ. 15, ನಿಕರಾಗುವಾ ಶೇ. 18, ನೈಜೀರಿಯಾ ಶೇ. 15, ಉತ್ತರ ಮ್ಯಾಸಿಡೋನಿಯಾ ಶೇ. 15, ನಾರ್ವೆ ಶೇ. 15, ಪಾಕಿಸ್ತಾನ ಶೇ. 19, ಪಪುವಾ ನ್ಯೂಗಿನಿಯಾ ಶೇ. 15, ಫಿಲಿಪೈನ್ಸ್ ಶೇ. 19, ಸೆರ್ಬಿಯಾ ಶೇ. 35, ದಕ್ಷಿಣ ಆಫ್ರಿಕಾ ಶೇ. 30, ದಕ್ಷಿಣ ಕೊರಿಯಾ ಶೇ. 15, ಶ್ರೀಲಂಕಾ ಶೇ. 20, ಸ್ವಿಟ್ಜರ್ಲೆಂಡ್ ಶೇ. 39, ಸಿರಿಯಾ ಶೇ. 41, ತೈವಾನ್ ಶೇ. 20, ಥೈಲ್ಯಾಂಡ್ ಶೇ. 19, ಟ್ರಿನಿಡಾಡ್ ಮತ್ತು ಟೊಬಾಗೊ ಶೇ. 15, ಟುನೀಶಿಯಾ ಶೇ. 25, ಟರ್ಕಿ ಶೇ. 15, ಉಗಾಂಡಾ ಶೇ. 15, ಯುನೈಟೆಡ್ ಕಿಂಗ್‌ಡಮ್ ಶೇ. 10, ವನವಾಟು ಶೇ. 15, ವೆನೆಜುವೆಲಾ ಶೇ. 15, ವಿಯೆಟ್ನಾಂ ಶೇ. 20, ಜಾಂಬಿಯಾ ಶೇ. 15, ಜಿಂಬಾಬ್ವೆ ಶೇ. 15.