ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶ್ರೀನಿವಾಸ ಸಾಗರದಲ್ಲಿ ಮುಳುಗಿ 12 ವರ್ಷದ ಪ್ರವಾಸಿ ಸಬಿಹಾ ಸಾವು

ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕಿನಿಂದ ಆಗಮಿಸಿದ್ದ ಹಜರತ್ ಅಲಿ ಮಾತನಾಡಿ ನಾವು 15 ಮಂದಿ ಚಿಂತಾಮಣಿ ತಾಲೂಕಿನ ಪುರಾಣಪ್ರಸಿದ್ಧ ಸ್ಥಳಗಳನ್ನು ನೋಡಿಕೊಂಡು ಹೋಗಲು ಪ್ರವಾಸಕ್ಕೆ ಬಂದಿದ್ದೆವು. ಇದೇ ವೇಳೆ ಹತ್ತಿರದಲ್ಲಿ ಯಾವುದಾದರೂ ಜಲಾಶಯಗಳಿಗೆ ಭೇಟಿ ನೀಡೋಣ ಎಂದು ಹೆಣ್ಣು ಮಕ್ಕಳು ಒತ್ತಾಯ ಮಾಡಿದರು.

ಶ್ರೀನಿವಾಸ ಸಾಗರದಲ್ಲಿ ಮುಳುಗಿ 12 ವರ್ಷದ ಪ್ರವಾಸಿ ಸಬಿಹಾ ಸಾವು

-

Profile
Ashok Nayak May 4, 2026 9:00 PM

ಚಿಕ್ಕಬಳ್ಳಾಪುರ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ತಳದ ಗ್ರಾಮದ ವಾಸಿ 12 ವರ್ಷದ ಸಬಿಹಾ ಶ್ರೀನಿವಾಸ ಸಾಗರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಶ್ರೀನಿವಾಸ ಸಾಗರಕ್ಕೆ ದೂರದ ಗದಗ ಹಾವೇರಿ ಜಿಲ್ಲೆಯಿಂದ ಪ್ರವಾಸಕ್ಕೆಂದು ಬಂದಿದ್ದ 10 ಮಂದಿ ಪ್ರವಾಸಿಗರ ಪೈಕಿ 12 ವರ್ಷದ ಸಬೀಹಾ ಈಜಾಡುತ್ತಾ ಆಳದ ಮಡುವಿಗೆ ಇಳಿದಾಗ ಈ ಸಾವು ಸಂಭವಿಸಿದೆ.

ಇದನ್ನೂ ಓದಿ: Bengaluru Crime news: ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ

ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕಿನಿಂದ ಆಗಮಿಸಿದ್ದ ಹಜರತ್ ಅಲಿ ಮಾತನಾಡಿ, ನಾವು 15 ಮಂದಿ ಚಿಂತಾಮಣಿ ತಾಲೂಕಿನ ಪುರಾಣಪ್ರಸಿದ್ಧ ಸ್ಥಳಗಳನ್ನು ನೋಡಿಕೊಂಡು ಹೋಗಲು ಪ್ರವಾಸಕ್ಕೆ ಬಂದಿದ್ದೆವು.ಇದೇ ವೇಳೆ ಹತ್ತಿರದಲ್ಲಿ ಯಾವುದಾದರೂ ಜಲಾಶಯಗಳಿಗೆ ಭೇಟಿ ನೀಡೋಣ ಎಂದು ಹೆಣ್ಣು ಮಕ್ಕಳು ಒತ್ತಾಯ ಮಾಡಿದರು. ಆಗ ಗೂಗಲ್‌ನಲ್ಲಿ ಹುಡುಕಾಟ ಮಾಡಿದಾಗ ಶ್ರೀನಿವಾಸ ಸಾಗರದ ಮಾಹಿತಿ ಪಡೆದು ಇಲ್ಲಿಗೆ ಬಂದೆವು. ಬಿಸಿಲು ಹೆಚ್ಚಿದ್ದ ಕಾರಣ ನೀರಲ್ಲಿ ಈಜಾಡಲು ತೆರಳಿ ದಾಗ ಈ ಅವಘಡ ನಡೆದಿದೆ. ಮೂರು ಮಂದಿ ಹೆಣ್ಣುಮಕ್ಕಳನ್ನು ನಾನು ಕಾಪಾಡಿದೆ. ಆದರೆ ಈ ಸಬಿಹಾ ಎಂಬ ಹೆಣ್ಣು ಮಗಳನ್ನು ಕಾಪಾಡಲು ಆಗಲಿಲ್ಲ ಎಂದು ದುಃಖಿತರಾದರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಹುಡುಕಾಟದ ನಂತರ ನೀರಿನಲ್ಲಿ ಮುಳುಗಿದ್ದ ಸಬಿಹಾಳ ಮೃತದೇಹ ಪತ್ತೆಯಾಗಿದೆ. ಈವೇಳೆ ಸಬಿಹಾ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.