ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 3 ವರ್ಷದ ಮಗು ಸಾವು; ಬಿಹಾರ ಕಾರ್ಮಿಕನ ಬಂಧನ

ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಘಟನೆ ಬಳಿಕ ಬಾಲಕಿ ಮೃತಪಟ್ಟಿದ್ದಾಳೆ. ಪೈಶಾಚಿಕ ಕೃತ್ಯ ಎಸಗಿದವನ್ನು ಬಿಹಾರದ ವಲಸೆ ಕಾರ್ಮಿಕ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 3 ವರ್ಷದ ಮಗು ಸಾವು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 15, 2026 11:47 AM

ಚೆನ್ನೈ: ತಮಿಳುನಾಡಿನ (Tamil Nadu) ತಿರುವಲ್ಲೂರು ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Physical Assault) ಎಸಗಿದ ಘಟನೆ ನಡೆದಿದೆ. ಘಟನೆ ಬಳಿಕ ಬಾಲಕಿ ಮೃತಪಟ್ಟಿದ್ದಾಳೆ. ಪೈಶಾಚಿಕ ಕೃತ್ಯ ಎಸಗಿದವನ್ನು ಬಿಹಾರದ ವಲಸೆ ಕಾರ್ಮಿಕ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಮಗುವಿನ ಕುಟುಂಬವೂ ಬಿಹಾರದವರಾಗಿದ್ದು, ಗುಮ್ಮಿಡಿಪೂಂಡಿಯ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನೆಲೆಸಿತ್ತು. ನಿನ್ನೆ ಪೊದೆ ಪ್ರದೇಶದಲ್ಲಿ ಗಂಭೀರ ಗಾಯಗಳೊಂದಿಗೆ ಆಕೆಯನ್ನು ಬಿಟ್ಟು ಹೋಗಲಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಇಂದು ಚಿಕಿತ್ಸೆಯ ಸಮಯದಲ್ಲಿ ಆಕೆ ಸಾವನ್ನಪ್ಪಿದ್ದಾಳೆ.

ಬಾಲಕಿಗೆ ಆರೋಪಿಯ ಪರಿಚಯವಿದ್ದು, ಬಿಸ್ಕತ್ತು ಕೊಡಿಸುವುದಾಗಿ ಆಮಿಷವೊಡ್ಡಿದ್ದ ಎನ್ನಲಾಗಿದೆ. ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆ ಪ್ರದೇಶದ ನಿವಾಸಿ ಇಂದುಮತಿ ಮಾತನಾಡಿ, ಮಗು ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಆರೋಪಿ ಆಕೆಗೆ ಬಿಸ್ಕತ್ತು ನೀಡುವುದಾಗಿ ಕರೆದಿದ್ದಾನೆ. ನಂತರ ಆಕೆಯನ್ನು ಪೊದೆಗಳಲ್ಲಿ ಬಿಟ್ಟು ಹೋಗಿದ್ದು, ಸ್ನಾನ ಮಾಡಲು ಅಲ್ಲಿಗೆ ಹೋಗಿದ್ದ ಮಹಿಳೆಯೊಬ್ಬರು ಕಂಡು ಮಾಹಿತಿ ನೀಡಿದರು ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಲ್ಲಿ ಇತ್ತೀಚೆಗೆ ಏರಿಕೆಯಾಗುತ್ತಿರುವ ಬಗ್ಗೆ ಹೆಚ್ಚುತ್ತಿರುವ ಕಳವಳದ ಮಧ್ಯೆ ಈ ಘಟನೆ ನಡೆದಿದೆ. ವಿಪಕ್ಷಗಳು ಸರ್ಕಾರದ ವೈಫಲ್ಯತೆ ಕುರಿತು ಕಿಡಿ ಕಾರಿದರು. ಈ ಘಟನೆಗಳ ಬಗ್ಗೆ ಸರ್ಕಾರ ಕಟ್ಟುನಿಟ್ಟಾಗಿರಬೇಕು. ಶಿಕ್ಷೆ ಕಠಿಣವಾಗಿರಬೇಕು. ಇದು ಸಾಮಾಜಿಕ ಸಮಸ್ಯೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು" ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅಧಿಕಾರ ವಹಿಸಿಕೊಂಡ ಕೂಡಲೇ, ಮಹಿಳೆಯರು ಮತ್ತು ಹುಡುಗಿಯರ ರಕ್ಷಣೆಗಾಗಿ ಕ್ರಮಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ "ಸಿಂಗಪೆನ್" ಎಂಬ ವಿಶೇಷ ಮಹಿಳಾ ಸುರಕ್ಷತಾ ಪಡೆಯನ್ನು ಘೋಷಿಸಿದ್ದಾರೆ.

ನಿವೃತಿಯ ಅಂಚಿನಲ್ಲಿರುವ ವಿಶೇಷ ಚೇತನ ಶಿಕ್ಷಕನಿಂದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ

ಇತ್ತೀಚಿನ ಅಪರಾಧ ದಾಖಲೆಗಳ ಪ್ರಕಾರ, 2023 ರಲ್ಲಿ ಮಾತ್ರ ದೇಶಾದ್ಯಂತ ಮಕ್ಕಳ ವಿರುದ್ಧದ ಅಪರಾಧಗಳ 1.77 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 67,000 ಕ್ಕೂ ಹೆಚ್ಚು ಪ್ರಕರಣಗಳು ಅಥವಾ 38.2% ರಷ್ಟು ಕಠಿಣ ಪೋಕ್ಸೊ ಕಾಯ್ದೆಯಡಿ ದಾಖಲಾಗಿವೆ.