ಶಾಲೆಯಲ್ಲೇ ಹರಿಯಿತು ನೆತ್ತರು; ಶಿಕ್ಷಕಿಯನ್ನು ಕ್ಲಾಸ್‌ನಿಂದ ಹೊರಗೆಳೆದು 20 ಬಾರಿ ಇರಿದು ಕೊಂದ ಪಾಪಿ
Viral News: ಮುಸುಕುಧಾರಿ ವ್ಯಕ್ತಿಯೊಬ್ಬ ಶಾಲೆಗೆ ನುಗ್ಗಿ ಹಾಡಹಗಲೇ ತರಗತಿಯಿಂದ ಶಿಕ್ಷಕಿಯನ್ನು ಹೊರಗೆಳೆದು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಶಿಕ್ಷಕಿಗೆ 18ರಿಂದ 20 ಇರಿತದ ಗಾಯಗಳಾಗಿದ್ದು, ದುಷ್ಕರ್ಮಿ ಆಕೆಯ ಕುತ್ತಿಗೆ ಮತ್ತು ಎದೆಯನ್ನು ಗುರಿಯಾಗಿಸಿಕೊಂಡು ಪದೇ ಪದೆ ಇರಿದಿದ್ದಾನೆ. ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹರಿಯಾಣದಲ್ಲಿ ಶಿಕ್ಷಕಿಯನ್ನು ಭೀಕರವಾಗಿ ಕೊಲೆಗೈದ ದುಷ್ಕರ್ಮಿ -
ಚಂಡೀಗಢ, ಆ. 3: ಹರಿಯಾಣದ ಫರಿದಾಬಾದ್‌ನ ಖಾಸಗಿ ಶಾಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಮುಸುಕುಧಾರಿ ವ್ಯಕ್ತಿಯೊಬ್ಬ ಹಾಡಹಗಲೇ ಶಾಲೆಗೆ ನುಗ್ಗಿ ತರಗತಿಯಿಂದ ಶಿಕ್ಷಕಿಯನ್ನು ಹೊರಗೆಳೆದು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಶಿಕ್ಷಕಿಗೆ 18ರಿಂದ 20 ಇರಿತದ ಗಾಯವಾಗಿದ್ದು, ದಾಳಿಕೋರನು ಅವರ ಕುತ್ತಿಗೆ ಮತ್ತು ಎದೆಯನ್ನು ಗುರಿಯಾಗಿಸಿಕೊಂಡು ಪದೇ ಪದೆ ಇರಿದಿದ್ದಾನೆ. ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಪೊಲೀಸರ ಪ್ರಕಾರ, ಬೆಳಗ್ಗೆ 9:30ರಿಂದ 9:40 ರ ನಡುವೆ ಮುಖ್ಯ ದ್ವಾರದ ಮೂಲಕ ಶಾಲಾ ಆವರಣಕ್ಕೆ ದುಷ್ಕರ್ಮಿ ಪ್ರವೇಶಿಸಿದ್ದು, ಬಿಳಿ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಂಡಿದ್ದ. ಸ್ವಲ್ಪ ಸಮಯದವರೆಗೆ ಕ್ಯಾಂಪಸ್ ಒಳಗೆ ಕಾದು ನಂತರ ಶಾಲಾ ಸಿಬ್ಬಂದಿಯ ಬಗ್ಗೆ ವಿಚಾರಣೆ ನಡೆಸಿದ್ದಾನೆ. ಬಳಿಕ ಶಿಕ್ಷಕಿಯನ್ನು ತರಗತಿಯಿಂದ ಹೊರಗೆಳೆದು ಒಮ್ಮಿದೊಮ್ಮಲೆ ಮುಗಿಬಿದ್ದು ಅವರನ್ನು ಎಳೆದಾಡಿ ಚಾಕುವಿನಿಂದ 20 ಬಾರಿ ಇರಿದಿದ್ದಾನೆ.
ವಿಡಿಯೊ ನೋಡಿ:
Woman teacher stabbed to death inside school in Faridabad, Haryana. pic.twitter.com/sB7RhohoM4
— News Arena India (@NewsArenaIndia) August 3, 2026
ಶಿಕ್ಷಕಿಯ ಕುತ್ತಿಗೆ ಮತ್ತು ಎದೆ ಭಾಗವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾನೆ. ಆಕೆಯ ಕಿರುಚಾಟ ಕೇಳಿ ಸಹೋದ್ಯೋಗಿಗಳು ಸಹಾಯ ಮಾಡಲು ಧಾವಿಸಿದಾಗಲೂ ಪಾಪಿ ಚುಚ್ಚುತ್ತಲೇ ಇದ್ದ. ಆಕೆ ತೀವ್ರವಾಗಿ ಗಾಯಗೊಂಡಿದ್ದು, ಆಕೆ ಕೆಳಗೆ ಬೀಳುವವರೆಗೂ ಮತ್ತೆ ಮತ್ತೆ ಇರಿದು ವಿಕೃತಿ ಮೆರೆದಿದ್ದಾನೆ. ನಂತರ ಪರಾರಿಯಾಗಿದ್ದಾನೆ.
ಆಟೋ ಚಾಲಕನನ್ನು ನಿಂದಿಸಿದ ಹೋಮ್ ಗಾರ್ಡ್ ಸಿಬ್ಬಂದಿ ಅಮಾನತು
ಗಾಯಗೊಂಡ ಶಿಕ್ಷಕಿಯನ್ನು ತಕ್ಷಣ ಆಸ್ಪತ್ರೆಗೆ ಕರೆ ದೊಯ್ಯಲಾಯಿತು. ಪರಿಶೀಲಿಸಿದ ವೈದ್ಯರು ಶಿಕ್ಷಕಿ ಸಾವನ್ನಪ್ಪಿರುವುದಾಗಿ ಘೋಷಿಸಿದರು. ಸಂತ್ರಸ್ತೆಗೆ 30 ವರ್ಷ ವಯಸ್ಸಾಗಿತ್ತು ಮತ್ತು ಅವರು ಎರಡು ಮಕ್ಕಳ ತಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರ ಬಂದಿದ್ದು, ಅಪರಾಧಿಯನ್ನು ಗುರುತಿಸಲು ತನಿಖೆ ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಸರಿಯಾದ ಕಾರಣ ಇನ್ನಷ್ಟೇ ಪತ್ತೆಯಾಗಬೇಕಿದೆ.