ಸಾಲ ವಾಪಸ್ ಕೇಳಿದ್ದಕ್ಕೆ ದರ್ಪ; ಕಾರಿನ ಬಾನೆಟ್‌ನಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಸಾಲಗಾರ, ವಿಡಿಯೋ ವೈರಲ್
drags man on car bonnet: ಹಣ ಮರುಪಾವತಿ ವಿಚಾರದಲ್ಲಿ ಸಾಲಗಾರನ ಜೊತೆ ಜಗಳವಾಡಿದ ವ್ಯಕ್ತಿಯೊಬ್ಬರನ್ನು ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಸುಮಾರು 500 ಮೀಟರ್ ಎಳೆದೊಯ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದ ಇತರರು ಘಟನೆಯ ದೃಶ್ಯವನ್ನು ವಿಡಿಯೊ ಮಾಡಿದ್ದಾರೆ.
ಕಾರಿನ ಬಾನೆಟ್‌ನಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಸಾಲಗಾರ -
ಮೈಸೂರು, ಮೇ 21: ಹಣ ಮರುಪಾವತಿ ವಿಚಾರದಲ್ಲಿ ಸಾಲಗಾರನ ಜೊತೆ ಜಗಳವಾಡಿದ ವ್ಯಕ್ತಿಯೊಬ್ಬರನ್ನು ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಸುಮಾರು 500 ಮೀಟರ್ ಎಳೆದೊಯ್ದ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. ಆಂದೋಲನ ವೃತ್ತದ ಬಳಿಯ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ಕುವೆಂಪುನಗರ ಪೊಲೀಸ್ ಠಾಣೆ ರಸ್ತೆಯವರೆಗೆ ಜನನಿಬಿಡ ರಸ್ತೆ ಮೂಲಕ ವಾಹನವು ವೇಗವಾಗಿ ಚಲಿಸಿದೆ. ಕೆಂಪು ಮಾರುತಿ ಸುಜುಕಿ ಬಲೆನೊ ಕಾರಿನ ಬಾನೆಟ್‌ನಲ್ಲಿ ವ್ಯಕ್ತಿಯೊಬ್ಬರನ್ನು ಎಳೆದೊಯ್ಯುತ್ತಿರುವುದನ್ನು ಕಂಡು ಜನರು ದಂಗಾಗಿದ್ದಾರೆ .
ಧನಂಜಯ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಗೆ ಮಹಾದೇವ್ ಎಂಬುವವರು ಸಾಲ ನೀಡಿದ್ದರು. ಸಾಲ ವಾಪಸ್ ಕೊಡಲು ಆತನನ್ನು ಸಂಪರ್ಕಿಸಿದಾಗ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಜಗಳ ಜಾಸ್ತಿಯಾಗುತ್ತಿದ್ದಂತೆ, ಧನಂಜಯ್ ತನ್ನ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಅವನನ್ನು ತಡೆಯಲು ಮುಂದಾದ ಮಹಾದೇವ್, ಬಾನೆಟ್ ಮೇಲೆ ಹಾರಿ ಬಿಗಿಯಾಗಿ ಹಿಡಿದಿದ್ದರು ಎನ್ನಲಾಗಿದೆ. ಆದರೆ, ವಾಹನವನ್ನು ನಿಲ್ಲಿಸುವ ಬದಲು, ಚಾಲಕ ವೇಗವಾಗಿ ಚಲಾಯಿಸಿದ್ದಾನೆ. ಮಹಾದೇವ್ ಕಾರಿನ ಮುಂಭಾಗ ನೇತಾಡುತ್ತಿದ್ದರು.
ಇಲ್ಲಿದೆ ವಿಡಿಯೊ:
Mysuru Road Rage Horror: Man Dragged 500 Metres on Car Bonnet Over Loan Dispute pic.twitter.com/DA6cuek7Nu
— Republic (@republic) May 20, 2026
ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದ ಇತರರು ಘಟನೆಯ ದೃಶ್ಯವನ್ನು ವಿಡಿಯೊ ಮಾಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮರೆಯಾದ ಮಾನವೀಯತೆ: ಒಡಿಶಾದಲ್ಲಿ ಸಾರ್ವಜನಿಕರೆದುರೇ ಯುವ ದಂಪತಿ ಮೇಲೆ ಭೀಕರ ಹಲ್ಲೆ
ಐವರ ಮೇಲೆ ಕಾರು ಹರಿಸಿದ್ದ ಬಿಜೆಪಿ ಶಾಸಕರ ಪುತ್ರ
ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರ ಮಗ ತನ್ನ ಐಷಾರಾಮಿ ಥಾರ್ ಎಸ್‌ಯುವಿ ವಾಹನವನ್ನು ಐವರ ಮೇಲೆ ಹರಿಸಿದ್ದಲ್ಲದೆ, ರಸ್ತೆ ಬಿಟ್ಟು ಏಕೆ ಸರಿಯಲಿಲ್ಲ ಎಂದು ಸಂತ್ರಸ್ತರನ್ನೇ ಪ್ರಶ್ನಿಸಿ ದರ್ಪ ಮೆರೆದಿದ್ದ ಘಟನೆ ಶಿವಪುರಿಯಲ್ಲಿ ಇತ್ತೀಚೆಗೆ ಸಂಭವಿಸಿತ್ತು.
ಪಿಚ್ಹೋರ್ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಲೋಧಿ ಅವರ ಪುತ್ರ ದಿನೇಶ್ ಲೋಧಿ ಕೃತ್ಯ ಎಸಗಿದ್ದಾತ. ವೇಗವಾಗಿ ಬಂದ ಥಾರ್ ವಾಹನವು ಬೈಕ್‌ನಲ್ಲಿದ್ದ ಮೂವರು ಪುರುಷರು ಮತ್ತು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಹಿಳೆಯರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಸಂಜಯ್ ಪರಿಹಾರ್ ಆಶಿಶ್ ಪರಿಹಾರ್ ಅಂಶುಲ್ ಪರಿಹಾರ್ , ಸೀತಾ ವರ್ಮಾ ಮತ್ತು ಪೂಜಾ ಸೋನಿ ಎಂದು ಗುರುತಿಸಲಾಗಿದೆ.
ಅಪಘಾತದ ನಂತರ ಸ್ಥಳದಲ್ಲಿ ಜಮಾಯಿಸಿದ ಜನರೊಂದಿಗೆ ದಿನೇಶ್ ಲೋಧಿ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಂತ್ರಸ್ತರು ನೋವಿನಿಂದ ಕಿರುಚಾಡುತ್ತಿದ್ದರೂ ಕಿಂಚಿತ್ತೂ ಪಶ್ಚಾತ್ತಾಪ ಪಡದ ಆತ, ನಾನು ಸೈರನ್ ಹಾಕುತ್ತಾ ಬರುತ್ತಿದ್ದೆ, ನೀವು ದಾರಿ ಬಿಟ್ಟು ಏಕೆ ಸರಿಯಲಿಲ್ಲ? ಎಂದು ಉದ್ಧಟತನದಿಂದ ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದವರಿಗೆ ವಿಡಿಯೋ ಮಾಡಬೇಡಿ ಎಂದು ಧಮ್ಕಿ ಹಾಕಿದ್ದ.