ದೇವನಹಳ್ಳಿಯಲ್ಲಿ ಭಯಾನಕ ಘಟನೆ: ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಬಲವಂತವಾಗಿ ಮದ್ಯ ಕುಡಿಸಿದ ಪಾಪಿಗಳು
Crime News: ಬಾಲಕಿಯನ್ನು ಅಪಹರಿಸಿ, ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ, ಮರುದಿನ ಬೆಳಗ್ಗೆ ಆಕೆಯ ಮನೆಯ ಬಳಿ ಬಿಟ್ಟು ಹೋಗಿರುವ ಆಘಾತಕಾರಿ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ನೆಪದಲ್ಲಿ ಆಕೆಯನ್ನು ಹೊರಗೆ ಕರೆದೊಯ್ಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ದೇವನಹಳ್ಳಿ, ಜು. 21: 14 ವರ್ಷದ ಬಾಲಕಿಯನ್ನು ಅಪಹರಿಸಿ, ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು, ಸಾಮೂಹಿಕ ಅತ್ಯಾಚಾರ ಎಸಗಿ ಮರುದಿನ ಬೆಳಗ್ಗೆ ಆಕೆಯ ಮನೆಯ ಬಳಿ ಬಿಟ್ಟು ಹೋಗಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ದೇವನಹಳ್ಳಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ಮೂವರನ್ನು ಬಂಧಿಸಲಾಗಿದೆ (Crime News). ಬಂಧಿತರನ್ನು ನವೀನ್, ವೆಂಕಟರಮಣ ಮತ್ತು ರೇಣುಕಾ ಎಂದು ಗುರುತಿಸಲಾಗಿದೆ.
ಜುಲೈ 17ರಂದು ದೇವನಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡುವ ನೆಪದಲ್ಲಿ ರೇಣುಕಾ ಅಪ್ರಾಪ್ತ ಬಾಲಕಿಯನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಿಂದ ಆಚೆ ಬಂದ ಬಾಲಕಿಯನ್ನು ನವೀನ್ ಮತ್ತು ವೆಂಕಟರಮಣ ಆಟೋದಲ್ಲಿ ಬೇರೆ ಸ್ಥಳಕ್ಕೆ ಕರೆದೊಯ್ದರು. ದಾರಿಯಲ್ಲಿ,ಆರೋಪಿಗಳು ಆಕೆಗೆ ಬಲವಂತದಿಂದ ಮದ್ಯ ಕುಡಿಸಿದರು. ಒಂದು ಹಂತದಲ್ಲಿ ಆರೋಪಿಗಳು ಆಟೋವನ್ನು ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯ ಬಳಿ ನಿಲ್ಲಿಸಿದರು. ಆದರೆ, ಬಾಲಕಿ ಮದ್ಯದ ಅಮಲಿನಲ್ಲಿರುವುದನ್ನು ಗಮನಿಸಿದ ನಂತರ ಅವರು ತಮ್ಮ ಮನಸ್ಸನ್ನು ಬದಲಾಯಿಸಿದರು. ಅಲ್ಲಿಂದ ಆಕೆಯನ್ನು ಮತ್ತೆ ಕರೆದೊಯ್ದರು ಎಂದು ಮೂಲಗಳು ತಿಳಿಸಿವೆ.
4 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ: ಎನ್‌ಕೌಂಟರ್ ಮೂಲಕ ಪಾಪಿಯನ್ನು ಹೊಡೆದುರುಳಿಸಿದ ಖಾಕಿ ಪಡೆ
ಅಪಹರಣ
ಅಪರಿಚಿತರನು ಗಮನಿಸಿ ಬಾಲಕಿ ಮನೆಗೆ ಹೋಗಬೇಕೆಂದು ಹಠ ಹಿಸಿದಾಗ ಆರೋಪಿಗಳು, ʼʼನೀನು ಕುಡಿದಿದ್ದೀಯ. ನಾವು ನಿನ್ನನ್ನು ಈಗ ಮನೆಗೆ ಕರೆದುಕೊಂಡು ಹೋದರೆ, ನೀನು ಸಿಕ್ಕಿಬೀಳುತ್ತೀಯ. ನಿನ್ನ ತಂದೆ ಗದರಿಸುತ್ತಾರೆʼʼ ಎಂದು ಹೇಳಿದರು. ನಂತರ ಅವರು ಅವಳನ್ನು ಬೇರೆ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದರು.
ನಂತರ ಬಾಲಕಿಯನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕರೆದೊಯ್ದು ಅಲ್ಲಿ ಇಬ್ಬರು ರಾತ್ರಿಯಿಡೀ ಆಕೆಯ ಮೇಲೆ ಅತ್ಯಾಚಾರ ಎಸಗಿದರು ದೂರಿನಲ್ಲಿ ತಿಳಿಸಲಾಗಿದೆ. ಆಕೆಯ ಮೇಲೆ ಹಲ್ಲೆ ಕೂಡ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಮರುದಿನ ಬೆಳಗ್ಗೆ ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯ ಬಳಿ ಬಿಟ್ಟು ಹೋಗಲಾಯಿತು. ಹೊರಡುವ ಮೊದಲು, ಆರೋಪಿಗಳು ಹಲ್ಲೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಬೇರೆ ಹಾಕಿದ್ದರು.
ರಾತ್ರಿ ಇಡೀ ಬಾಲಕಿ ಮನೆಗೆ ಬರದ ಹಿನ್ನೆಲೆಯಲ್ಲಿ ಆತಂಕ ಮೂಡಿತ್ತು. ನಾಪತ್ತೆ ದೂರು ದಾಖಲಿಸಲು ಮುಂದಾದಾಗ ಆಕೆ ವಾಪಸಾಗಿದ್ದಳು. ಈ ಬಗ್ಗೆ ಪ್ರಶ್ನಿಸಿದಾಗ ಸಂತ್ರಸ್ತೆ ತಾಯಿ ಬಳಿ ತನ್ನ ಮೇಲಾದ ದೌರ್ಜನ್ಯವನ್ನು ವಿವರಿಸಿದಳು. ನಂತರ ಕುಟುಂಬವು ದೇವನಹಳ್ಳಿ ಪೊಲೀಸರಿಗೆ ದೂರು ನೀಡಿತು. ಅಪ್ರಾಪ್ತ ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.