ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Murder Case: ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರೇಯಸಿಯ ಗಂಡನನ್ನೇ ಕೊಂದು ಮೂಟೆಕಟ್ಟಿದ ಪಾಪಿ

ಕೊಲೆಯಾದ ಸುನೀಲ್ ನಾಯಕ್ ಪತ್ನಿಯೊಂದಿಗೆ ಆರೋಪಿ ಬಸುದೇವ್ ಮಲ್ಲಿಕ್ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ಸುನೀಲ್‌ಗೆ ತಿಳಿದು ಮನೆಯಲ್ಲಿ ದಂಪತಿಗಳ ನಡುವೆ ತೀವ್ರ ಗಲಾಟೆ ನಡೆದಿತ್ತು. ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಸುನೀಲ್‌ನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಸಂಚು ರೂಪಿಸಿದ್ದ ಬಸುದೇವ್.

ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರೇಯಸಿಯ ಗಂಡನನ್ನೇ ಕೊಂದು ಮೂಟೆಕಟ್ಟಿದ ಪಾಪಿ

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Apr 7, 2026 1:06 PM

ಬೆಂಗಳೂರು, ಏ. 07: ಅಕ್ರಮ ಸಂಬಂಧದ (Illicit relationship) ಹಿನ್ನೆಲೆಯಲ್ಲಿ ನಗರದಲ್ಲಿ (Bengaluru) ಭೀಕರ ಕೊಲೆಯೊಂದು (Murder Case) ನಡೆದಿದ್ದು, ತನ್ನ ಪ್ರೇಯಸಿಯ (lover) ಪತಿಯನ್ನೇ ಪ್ರಿಯಕರನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸುನೀಲ್ ನಾಯಕ್ ಕೊಲೆಯಾದ ದುರ್ದೈವಿ. ಈ ಸಂಬಂಧ ಆರೋಪಿ ಬಸುದೇವ್ ಮಲ್ಲಿಕ್ ಎಂಬಾತನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಸುನೀಲ್ ನಾಯಕ್ ಪತ್ನಿಯೊಂದಿಗೆ ಆರೋಪಿ ಬಸುದೇವ್ ಮಲ್ಲಿಕ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಷಯ ಸುನೀಲ್‌ಗೆ ತಿಳಿದು ಮನೆಯಲ್ಲಿ ದಂಪತಿಗಳ ನಡುವೆ ತೀವ್ರ ಗಲಾಟೆ ನಡೆದಿತ್ತು. ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಸುನೀಲ್‌ನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಸಂಚು ರೂಪಿಸಿದ್ದ ಬಸುದೇವ್, ಅಂತಿಮವಾಗಿ ಆತನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ.

ಆರೋಪಿ ಬಸುದೇವ್ ಅತ್ಯಂತ ಚಾಣಾಕ್ಷತನದಿಂದ ಸುನೀಲ್‌ನನ್ನು ಹತ್ಯೆ ಮಾಡಿದ್ದಾನೆ. ಮದ್ಯಪಾನ ಮಾಡುವ ನೆಪದಲ್ಲಿ ಸುನೀಲ್‌ನನ್ನು ಆರೋಪಿ ಹೊರಗೆ ಕರೆದೊಯ್ದಿದ್ದಾನೆ. ಸುನೀಲ್‌ಗೆ ಕಂಠಪೂರ್ತಿ ಕುಡಿಸಿ ಆತ ಪ್ರಜ್ಞೆ ತಪ್ಪುವ ಹಂತಕ್ಕೆ ತಲುಪಿದಾಗ, ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಒಂದು ಮೂಟೆಯಲ್ಲಿ ಕಟ್ಟಿ, ಬೊಮ್ಮಸಂದ್ರದ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದ.

ಕ್ರಿಕೆಟ್ ಪಂದ್ಯದ ವೇಳೆ ರನೌಟ್ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ; ಚಾಕು ಇರಿದು 21 ವರ್ಷದ ಅಂಪೈರ್‌ನ ಹತ್ಯೆ

ಬೊಮ್ಮಸಂದ್ರದ ನಿರ್ಜನ ಪ್ರದೇಶದಲ್ಲಿ ಮೂಟೆಯೊಳಗೆ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಬಂಡೇಪಾಳ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ತಾಂತ್ರಿಕ ಸಾಕ್ಷ್ಯಗಳು ಹಾಗೂ ವಿಚಾರಣೆಯ ಆಧಾರದ ಮೇಲೆ ಬಸುದೇವ್ ಮಲ್ಲಿಕ್‌ನನ್ನು ವಶಕ್ಕೆ ಪಡೆದಾಗ ಕೊಲೆಯ ಅಸಲಿ ಸತ್ಯ ಹೊರಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನನ್ನು ಕಠಿಣ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕೃತ್ಯದಲ್ಲಿ ಸುನೀಲ್ ಪತ್ನಿಯ ಪಾತ್ರವೇನಾದರೂ ಇದೆಯೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ.