ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Assault: ಅಪರಿಚಿತರ ವಾಹನ ಹತ್ತುವ ಮುನ್ನ ಎಚ್ಚರ; 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ

9ನೇ ತರಗತಿಯ ವಿದ್ಯಾರ್ಥಿನಿಯನ್ನು ಕಾರಿನೊಳಗೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿದ ಘಟನೆ ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ನಡೆದಿದೆ. ಅಪರಿಚಿತ ವಾಹನವೊಂದು ಬಂದು ಪಕ್ಕಕ್ಕೆ ನಿಂತಿತು, ಅದರಲ್ಲಿದ್ದ ಆರೋಪಿ ಡ್ರಾಪ್‌ ಕೊಡುತ್ತೇನೆ ಎಂದು ಬಾಲಕಿಯ ಬಳಿ ತನ್ನ ಕಾರನ್ನು ಹತ್ತುವಂತೆ ಹೇಳಿದ್ದಾನೆ.

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ

-

Vishakha Bhat Vishakha Bhat Sep 8, 2025 11:27 AM

ಭುವನೇಶ್ವರ್:‌ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಕಾರಿನೊಳಗೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿದ ಘಟನೆ ಒಡಿಶಾದ ಕಂಧಮಲ್ (Physical Assault) ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶುಕ್ರವಾರ ಸಂಜೆ ಬಾಲಕಿ ತನ್ನ ಅಕ್ಕನ ಮನೆಗೆ ಹೋಗಿ ನಂತರ ಗಣೇಶ ಪೂಜೆಯ ವಿಸರ್ಜನಾ ಮೆರವಣಿಗೆಯನ್ನು ವೀಕ್ಷಿಸಲು ದರಿಂಗ್‌ಬಾಡಿ ಮಾರುಕಟ್ಟೆಗೆ ಹೋಗಿ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ಪೊಲೀಸರು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ತನಿಖೆ ಆರಂಭಿಸಿದ್ದಾರೆ.

ಆಕೆ ಮನೆಗೆ ವಾಪಸ್ ಹೊರಟಿದ್ದಳು, ಅಪರಿಚಿತ ವಾಹನವೊಂದು ಬಂದು ಪಕ್ಕಕ್ಕೆ ನಿಂತಿತು, ಅದರಲ್ಲಿದ್ದ ಆರೋಪಿ ಡ್ರಾಪ್‌ ಕೊಡುತ್ತೇನೆ ಎಂದು ಬಾಲಕಿಯ ಬಳಿ ತನ್ನ ಕಾರನ್ನು ಹತ್ತುವಂತೆ ಹೇಳಿದ್ದಾನೆ. ದರಿಂಗ್‌ಬಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿವಾಹಿತನಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕಂಧಮಲ್ ಎಸ್ಪಿ ಹರೀಶ ಬಿ.ಸಿ. ಈ ವಿಷಯ ತನಿಖೆ ಹಂತದಲ್ಲಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದರು.

ಪ್ರತ್ಯೇಕ ಘಟನೆಯಲ್ಲಿ, ಹುಟ್ಟುಹಬ್ಬದ ದಿನದಂದೇ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೆ (Physical Abuse) ಒಳಗಾಗಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದಿದೆ. ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರವೆಂದು ಕರೆಯಲ್ಪಡುವ ಕೋಲ್ಕತಾ ನಗರದ ದಕ್ಷಿಣ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. 20 ವರ್ಷದ ಯುವತಿ ತನ್ನ ಹುಟ್ಟುಹಬ್ಬದಂದು ಇಬ್ಬರು ಪರಿಚಯಸ್ಥರು ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಪೊಲೀಸರಿಗೆ (Kolkata police) ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ: Brutal Murder Case: ಮದ್ವೆಗಿಂತ ಮುನ್ನ ಸೆಕ್ಸ್‌ಗೆ ಒಪ್ಪದ ಅಪ್ರಾಪ್ತ ವಧುವಿನ ಮೇಲೆ ಅತ್ಯಾಚಾರವೆಸಗಿ ಬರ್ಬರ ಕೊಲೆ

ದಕ್ಷಿಣ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಅಪರಾಧದ ಅನಂತರ ನಾಪತ್ತೆಯಾಗಿದ್ದ ಇಬ್ಬರು ಆರೋಪಿಗಳನ್ನು ಚಂದನ್ ಮಲಿಕ್ ಮತ್ತು ದೀಪ್ ಎಂದು ಗುರುತಿಸಲಾಗಿದೆ. ದೀಪ್ ಸರ್ಕಾರಿ ಉದ್ಯೋಗಿ ಎನ್ನಲಾಗಿದೆ. ಹುಟ್ಟುಹಬ್ಬವನ್ನು ಆಚರಿಸುವ ನೆಪದಲ್ಲಿ ಹರಿದೇವ್‌ಪುರದ ಯುವತಿಯನ್ನು ಚಂದನ್ ಎಂಬಾತ ದೀಪ್‌ನ ಮನೆಗೆ ಕರೆದೊಯ್ದಿದ್ದು, ಬಳಿಕ ಅಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು.