UP Horror: ಅಮ್ಮನನ್ನು ಹೊಡೆದು ಲೈಟರ್‌ನಿಂದ ಸುಟ್ರು...! ವರದಕ್ಷಿಣೆಕ್ಕಾಗಿ ಮಗನ ಎದುರೇ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪಾಪಿ ಪತಿ
Dowry Killing: ಬರೋಬ್ಬರಿ 35 ಲಕ್ಷ ರೂ.ಗೆ ವರದಕ್ಷಿಣೆಗಾಗಿ ಪತ್ನಿಯನ್ನ ಸಾಯುವಂತೆ ಹೊಡೆದು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಮಹಿಳೆಯನ್ನು ನಿಕ್ಕಿ ಎಂದು ಗುರುತಿಸಲಾಗಿದ್ದು, ಪಾಪಿ ಪತಿ ವಿಪಿನ್‌ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ನು ನಿಕ್ಕಿಯ ಅತ್ತೆ, ಮಾವ ಮತ್ತು ಸೋದರ ಮಾವ ಸೇರಿದಂತೆ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ನೋಯ್ಡಾ: ಇಡೀ ದೇಶವೇ ಬೆಚ್ಚಿ ಬೀಳಿಸೋ ಘಟನೆಯೊಂದು ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ವರದಕ್ಷಿಣೆಗಾಗಿ ಪತಿ ಮತ್ತು ಅತ್ತೆ-ಮಾವ ಬೆಂಕಿ ಹಚ್ಚಿದ(Woman Set Ablaze) ನಂತರ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ(Dowry case). ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಮಹಿಳೆಯನ್ನು ನಿಕ್ಕಿ ಎಂದು ಗುರುತಿಸಲಾಗಿದ್ದು, ಪಾಪಿ ಪತಿ ವಿಪಿನ್‌ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ನು ನಿಕ್ಕಿಯ ಅತ್ತೆ, ಮಾವ ಮತ್ತು ಸೋದರ ಮಾವ ಸೇರಿದಂತೆ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2016ರಲ್ಲಿ ಸಿರ್ಸಾದ ವಿಪಿನ್‌ನನ್ನು ವಿವಾಹವಾಗಿದ್ದ ನಿಕ್ಕಿ ಗುರುವಾರ ರಾತ್ರಿ ತೀವ್ರ ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿ ಗ್ರೇಟರ್ ನೋಯ್ಡಾದ ಫೋರ್ಟಿಸ್ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿಯಲ್ಲಿ ಸಾವನ್ನಪ್ಪಿದ್ದಳು. ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಇದರ ಬೆನ್ನಲ್ಲೇ ನಿಕ್ಕಿಯ ಅಕ್ಕ ಕಾಂಚನ್ ನಿಕ್ಕಿಯ ಪತಿ ಹಾಗೂ ಆತನ ಮನಯವರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರ ನೀಡಿದ್ದಾಳೆ. ನಿಕ್ಕಿಯನ್ನು ಆಕೆಯ ಪತಿ ವಿಪಿನ್ ಪ್ರಜ್ಞಾಹೀನಳಾಗಿ ಹೋಗುವಂತೆ ಹೊಡೆದು, ನಂತರ ಆಕೆಗೆ ಬೆಂಕಿ ಹಚ್ಚಿದ್ದಾರೆ. ಮದುವೆಯ ಸಮಯದಲ್ಲಿ ಅವರ ಕುಟುಂಬವು ಬ್ರಾಂಡೆಡ್ SUV ಮತ್ತು ಬೆಲೆಬಾಳುವ ವಸ್ತುಗಳನ್ನು ನೀಡಿದ್ದರೂ, ನಿಕ್ಕಿಯ ಅತ್ತೆ-ಮಾವಂದಿರು ಹೆಚ್ಚಿನ ವರದಕ್ಷಿಣೆಯನ್ನು ಒತ್ತಾಯಿಸುತ್ತಲೇ ಇದ್ದರು ಎಂದು ಕಾಂಚನ್ ಆರೋಪಿಸಿದ್ದಾರೆ.
ಆಘಾತಕಾರಿ ವಿಡಿಯೊ ಇಲ್ಲಿದೆ
Shocking case of Dowry harassment in Greater Noida- 28-year-old Nikki Payla was tortured and burnt alive by her husband & in-laws after 8 years of marriage following demands for a dowry of Rs 36 lakh. Watch video & listen to her little son tell what happened pic.twitter.com/PoaTWoaGu0
— Rosy (@rose_k01) August 24, 2025
ಮದುವೆಯ ನಂತರ, ಅವರು 35 ಲಕ್ಷ ರೂ.ಗಳನ್ನು ಕೇಳಿದರು. ನಾವು ಅವರಿಗೆ ಇನ್ನೊಂದು ಕಾರನ್ನು ಸಹ ನೀಡಿದ್ದೇವೆ, ಆದರೆ ಅವರ ಬೇಡಿಕೆಗಳು ಮತ್ತು ಕಿರುಕುಳ ನಿರಂತರವಾಗಿ ಮುಂದುವರೆದವು. ತಾನು ಸ್ಥಳದಲ್ಲಿದ್ದೆ ಆದರೆ ತನ್ನ ಸಹೋದರಿಯನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಕಾಂಚನ್ ಹೇಳಿಕೊಂಡಿದ್ದಾರೆ. ಇನ್ನು ಈ ಇಬ್ಬರೂ ಸಹೋದರಿಯರನ್ನು ಒಂದೇ ಕುಟುಂಬಕ್ಕೆ ವಿವಾಹ ಮಾಡಿಕೊಡಲಾಗಿತ್ತು. ನೆರೆಹೊರೆಯವರು ನಿಕ್ಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದರು, ಅಲ್ಲಿ ಅವಳು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದಳು.
ಈ ಸುದ್ದಿಯನ್ನೂ ಓದಿ: Digital Arrest: ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ
ಅಮ್ಮನನ್ನು ಹೊಡೆದು ಲೈಟರ್‌ನಿಂದ ಸುಟ್ರು...!
ಇನ್ನು ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಎನ್ನುವಂತೆ, ನಿಕ್ಕಿಯ ಚಿಕ್ಕ ಮಗುವಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಘಟನೆಯನ್ನು ಕಣ್ಣಾರೆ ಕಂಡಿದ್ದ ಪುಟ್ಟ ಹುಡುಗ "ಅಪ್ಪ ಅಮ್ಮನನ್ನು ಲೈಟರ್‌ನಿಂದ ಸುಟ್ಟು ಕೊಂದರು" ಎಂದು ಹೇಳುತ್ತಿರುವುದು ಕೇಳಿಬಂದಿದೆ. ಈ ಕ್ಲಿಪ್ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ವಿಪಿನ್ (ಪತಿ), ರೋಹಿತ್ (ಅಳಿಯ), ದಯಾ (ಅತ್ತೆ) ಮತ್ತು ಸತ್ವೀರ್ (ಮಾವ) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಕುಟುಂಬ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.