ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ: ಕಾರ್ಮಿಕರಿಬ್ಬರಿಗೆ ಗಾಯ

ಬೆಂಗಳೂರಿನ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಸ್ಫೋಟ ಉಂಟಾಗಿ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಬ್ಯಾಟರಿಯಂತಹ ವಸ್ತು ಸ್ಪೋಟಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಕುರಿತು ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ: ಇಬ್ಬರಿಗೆ ಗಾಯ

ಸಂಗ್ರಹ ಚಿತ್ರ -

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಮಂಗಳವಾರ ಸಂಜೆ ಸ್ಫೋಟ (Blast) ಉಂಟಾಗಿ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ (bengaluru crime) ನಡೆದಿದೆ. ಪುಲಿಕೇಶಿ ನಗರದ ಜೆರೆಮಿಯಾ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ( under construction building) ಸ್ಫೋಟ ಉಂಟಾಗಿದೆ. ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿ ಪತ್ತೆಯಾದ ವಸ್ತುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಾಥಮಿಕ ತನಿಖೆ ಮಾಹಿತಿ ಪ್ರಕಾರ ಬ್ಯಾಟರಿಯಂತಹ ವಸ್ತು ಸ್ಪೋಟಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು ಪೊಲೀಸರು ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ ಎಂದು ಹೇಳಿದ ಅವರು, ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಎಲ್ಲಾ ವಸ್ತುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ಅನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ ಕೇಸ್‌: ದೇವಸ್ಥಾನಕ್ಕೆ ಹೋದವನನ್ನು ಬಂಧಿಸಲಾಗಿದೆ ಎಂದು ಕಣ್ಣೀರಿಟ್ಟ ಆರೋಪಿ ತಾಯಿ

ಗಾಯಗೊಂಡ ಕಾರ್ಮಿಕರನ್ನು ಸೂರಜ್ ಮತ್ತು ಅಲ್ಲಾವುದ್ದೀನ್ ಎಂದು ಗುರುತಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ದುಲ್ ರೆಹಮಾನ್ ಎಂಬವರಿಗೆ ಸೇರಿದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬ್ಯಾಗ್ ಒಂದರಲ್ಲಿದ್ದ ಬ್ಯಾಟರಿಯಂತಹ ವಸ್ತು ಸ್ಫೋಟಗೊಂಡಿದೆ ಎನ್ನಲಾಗಿದೆ.

ಮನ್ಸೂರ್ ಎಂಬುವರು ಘಟನೆಯನ್ನು ಕಣ್ಣಾರೆ ನೋಡಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಜೋರಾದ ಸ್ಫೋಟದ ಶಬ್ದ ಕೇಳಿಸಿತು. ಏನಾಯಿತು ಎಂದು ನೋಡಲು ಅಲ್ಲಿಗೆ ಧಾವಿಸಿದಾಗ, ಕಟ್ಟಡದ ಒಳಗಿದ್ದ ಇಬ್ಬರು ವ್ಯಕ್ತಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಒಬ್ಬ ಕಾರ್ಮಿಕನ ಕಣ್ಣಿಗೆ ಗಂಭೀರ ಗಾಯವಾಗಿದ್ದರೆ, ಮತ್ತೊಬ್ಬ ಕಾರ್ಮಿಕನ ಕೈ ಕತ್ತರಿಸಿ ಹೋಗಿದೆ ಎಂದು ಅವರು ತಿಳಿಸಿದ್ದಾರೆ.

ಕೊನೆ ಕ್ಷಣದಲ್ಲಿ ಪ್ಲಾನ್‌ ಚೇಂಜ್‌; ಸಲ್ಮಾನ್‌ ಖಾನ್‌ ಮನೆ ಟಾರ್ಗೆಟ್‌ ಮಾಡಿದ್ದ ಹಂತಕರು ಟೈಗರ್‌ ಶ್ರಾಫ್‌ ಕಡೆ ತಿರುಗಿದ್ದೇಕೆ?

ಸ್ಫೋಟದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಸ್ಥಳ ಪರಿಶೀಲನೆ ನಡೆಸಿದವು. ಭಯೋತ್ಪಾದನಾ ನಿಗ್ರಹ ದಳ, ಆಂತರಿಕ ಭದ್ರತಾ ವಿಭಾಗ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಫೋಟಕ್ಕೆ ಕಾರಣವೇನು ಮತ್ತು ಉದ್ದೇಶಪೂರ್ವಕವಾಗಿ ನಡೆದ ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.