ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Golden Temple: ಗೋಲ್ಡನ್ ಟೆಂಪಲ್‌ಗೆ ಬಾಂಬ್ ಬೆದರಿಕೆ- ತಮಿಳುನಾಡು ಮೂಲದ ಇಬ್ಬರು ಅರೆಸ್ಟ್‌

Bomb Threat: ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಬಾಂಬ್ ಬೆದರಿಕೆ ಕಳುಹಿಸಿದ ಆರೋಪದಲ್ಲಿ ಪಂಜಾಬ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶಿರೋಮಣಿ ಗುರುದ್ವಾರ ಪರಬಂಧಕ ಸಮಿತಿಗೆ (SGPC) ಈ ಇಬ್ಬರು ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಾರ, SGPCಗೆ ಜುಲೈ 14 ರಿಂದ ಐದು ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ ಎಂದು SGPC ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ಬುಧವಾರ ತಿಳಿಸಿದ್ದಾರೆ.

ಸ್ವರ್ಣ ಮಂದಿರಕ್ಕೆ ಬಾಂಬ್‌ ಬೆದರಿಕೆ- ಇಬ್ಬರು ಅರೆಸ್ಟ್‌

Profile Sushmitha Jain Jul 18, 2025 4:24 PM

ಅಮೃತಸರ: ಅಮೃತಸರದ (Amritsar) ಗೋಲ್ಡನ್ ಟೆಂಪಲ್‌ಗೆ (Golden Temple) ಬಾಂಬ್ ಬೆದರಿಕೆ ಕಳುಹಿಸಿದ ಆರೋಪದಲ್ಲಿ ಪಂಜಾಬ್ ಪೊಲೀಸರು (Punjab Police) ಇಬ್ಬರನ್ನು ಬಂಧಿಸಿದ್ದಾರೆ. ಶಿರೋಮಣಿ ಗುರುದ್ವಾರ ಪರಬಂಧಕ ಸಮಿತಿಗೆ (SGPC) ಈ ಇಬ್ಬರು ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಾರ, SGPCಗೆ ಜುಲೈ 14 ರಿಂದ ಐದು ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ ಎಂದು SGPC ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ಬುಧವಾರ ತಿಳಿಸಿದ್ದಾರೆ. ಬುಧವಾರ ಮತ್ತೊಮ್ಮೆ ಗೋಲ್ಡನ್ ಟೆಂಪಲ್ ಸಂಕೀರ್ಣಕ್ಕೆ ಬೆದರಿಕೆ ಸಂದೇಶ ಬಂದಿದ್ದರಿಂದ, ಭದ್ರತಾ ತಪಾಸಣೆಗಾಗಿ ಶ್ವಾನ ದಳವನ್ನು ದೇವಾಲಯದ ಆವರಣದಲ್ಲಿ ನಿಯೋಜಿಸಲಾಯಿತು.

ಈ ಬೆದರಿಕೆಗಳಿಂದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಜನರಿಗೆ ಊಹಾಪೋಹಗಳ ಬಗ್ಗೆ ಎಚ್ಚರಿಕೆಯಿಂದಿರಲು ಮನವಿ ಮಾಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಪಂಜಾಬ್‌ನ ಭದ್ರತೆಯಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಭದ್ರತಾ ಸಂಸ್ಥೆಗಳು ಮತ್ತು ಪಂಜಾಬ್ ಪೊಲೀಸರು ಸಂಪೂರ್ಣ ಜಾಗೃತರಾಗಿದ್ದಾರೆ. ಎಲ್ಲ ಧಾರ್ಮಿಕ ಸ್ಥಳಗಳು ನಮಗೆ ಪವಿತ್ರ. ರಾಷ್ಟ್ರವಿರೋಧಿ ಮತ್ತು ಸಮಾಜವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.

ಈ ಸುದ್ದಿಯನ್ನು ಓದಿ: Accident: ಕುಡಿದ ಅಮಲಿನಲ್ಲಿ ಕಾರು ಚಲಾವಣೆ; BMW ಕಾರು ಬೈಕ್​ಗೆ ಡಿಕ್ಕಿ, ವ್ಯಕ್ತಿ ಸಾವು

ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಈ ಬೆದರಿಕೆಗಳು ಸಿಖ್ ಸಮುದಾಯ ಮತ್ತು ಶಾಂತಿಪ್ರಿಯ ಜನರಲ್ಲಿ ಆತಂಕವನ್ನುಂಟು ಮಾಡಿವೆ ಎಂದು ತಿಳಿಸಿದ್ದಾರೆ. “ಈ ಬೆದರಿಕೆಗಳು ಪಂಜಾಬ್‌ ಕಷ್ಟದಿಂದ ಗಳಿಸಿದ ಶಾಂತಿಯನ್ನು ಕದಡುವ ಯತ್ನವಾಗಿದೆ” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳು ಆರೋಪಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಶಿರೋಮಣಿ ಅಕಾಲಿ ದಳದ (SAD) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್, ಈ ಬೆದರಿಕೆ ಇಮೇಲ್‌ಗಳನ್ನು “ತೀವ್ರ ಗಂಭೀರ ವಿಷಯ” ಎಂದು ಹೇಳಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆಳವಾದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.