ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drunk & Drive Case: ಕುಡಿದ ಅಮಲಿನಲ್ಲಿ ಯದ್ವಾ-ತದ್ವಾ BMW ಕಾರು ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ- ವ್ಯಕ್ತಿ ದುರ್ಮರಣ

ಗುಜರಾತ್‌ನ ಗಾಂಧಿನಗರದಲ್ಲಿ ಗುರುವಾರ ಬೆಳಗ್ಗೆ ದಾರುಣ ಘಟನೆಯೊಂದು ಸಂಭವಿಸಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ BMW ಕಾರನ್ನು ಚಾಲನೆ ಮಾಡುತ್ತಿದ್ದಾಗ ಸ್ಕೂಟರ್‌ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಸವಾರ ಕಾರಿನ ಬಾನೆಟ್‌ ಮೇಲೆ ಬಿದ್ದು ಮೃತಪಟ್ಟಿದ್ದಾರೆ.

ಡ್ರಂಕ್‌ & ಡ್ರೈವ್‌ ಕೇಸ್‌;  BMW ಕಾರು ಚಾಲಕನ ಹುಚ್ಚಾಟಕ್ಕೆ ವ್ಯಕ್ತಿ ಬಲಿ

ಅಪಘಾತದ ದೃಶ್ಯ

Profile Sushmitha Jain Jul 18, 2025 4:05 PM

ಗಾಂಧಿನಗರ: ಗುಜರಾತ್‌ನ (Gujarat) ಗಾಂಧಿನಗರದಲ್ಲಿ (Gandhinagar) ಗುರುವಾರ ಬೆಳಗ್ಗೆ ದಾರುಣ ಘಟನೆಯೊಂದು ಸಂಭವಿಸಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ BMW ಕಾರನ್ನು ಚಾಲನೆ ಮಾಡುತ್ತಿದ್ದಾಗ ಸ್ಕೂಟರ್‌ಗೆ (Scooter) ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪಘಾತದ (Accident) ರಭಸಕ್ಕೆ ಸ್ಕೂಟರ್ ಸವಾರ ಕಾರಿನ ಬಾನೆಟ್‌ ಮೇಲೆ ಬಿದ್ದು ಮೃತಪಟ್ಟಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮದ್ಯಪಾನ ಮಾಡಿದ್ದ BMW ಕಾರು ಚಾಲಕ, ಸರ್ಕಾಲ್ ಬಳಿ ಸ್ಕೂಟರ್ ತಿರುಗುತ್ತಿದ್ದಾಗ ಡಿಕ್ಕಿಹೊಡೆದಿದ್ದಾನೆ. ಮೃತ ವ್ಯಕ್ತಿಯನ್ನು ಗಾಂಧಿನಗರದ ನಿವಾಸಿಯೆಂದು ಗುರುತಿಸಲಾಗಿದೆ. ಅಪಘಾತದಿಂದ BMW ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಆತನನ್ನು ಗಾಂಧಿನಗರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.



ಈ ಸುದ್ದಿಯನ್ನು ಓದಿ: Viral Video: ಬಂಗಲೆಯ ಛಾವಣಿಗೆ ಫೆರಾರಿ ಕಾರನ್ನು ಹ್ಯಾಂಗ್‌ ಮಾಡಿದ ಭೂಪ! ವಿಡಿಯೊ ಫುಲ್‌ ವೈರಲ್

ಘಟನೆಯ ವಿಡಿಯೋದಲ್ಲಿ, ಕಪ್ಪು BMW ಕಾರು ಚಾಲಕ ಸ್ಕೂಟರ್‌ಗೆ ಚೌಕವೊಂದರ ಬಳಿ ಡಿಕ್ಕಿಹೊಡೆದಿರುವುದು ಕಂಡುಬಂದಿದೆ. ಆ ಸಮಯದಲ್ಲಿ, ಮನೆಯ ಮುಂದೆ ಕುಳಿತಿದ್ದ ಬಿಳಿ ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಅಪಘಾತ ಆದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ್ದಾನೆ. ಸ್ಥಳೀಯರ ಪ್ರಕಾರ, ಚಾಲಕ ಘಟನೆಯ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದ. ಈ ಆರೋಪಗಳಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. BMW ಚಾಲಕನ ವಿರುದ್ಧ ಕಾನೂನು ಕ್ರಮ ಆರಂಭವಾಗಿದ್ದು, ಆತ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು CCTV ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ ಎಂದು ವರದಿಯಾಗಿದೆ.