ಸೀರೆಯಿಂದ ಬಯಲಾಯ್ತು ನಿಗೂಢ ಕೊಲೆಯ ರಹಸ್ಯ; ಇಲ್ಲಿದೆ ತನಿಖೆಯ ಇಂಚಿಂಚು ಮಾಹಿತಿ
ಮಹಿಳೆಯ ಕೊಲೆಯ ಪ್ರಕರಣವೊಂದನ್ನು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಶಂಕಿತ ಅಸ್ಥಿಪಂಜರವನ್ನು ಗುರುತಿಸಲು ಒಂದು ಸೀರೆ ಮಹತ್ವದ ಸುಳಿವಾಗಿ ಪರಿಣಮಿಸಿದೆ. ಅಸ್ಥಿಪಂಜರದ ಬಳಿ ಪತ್ತೆಯಾದ ಸೀರೆಯ ಲಕ್ಷಣಗಳು ಮತ್ತು ವಿವರಗಳು ಮಹಿಳೆಯ ಗುರುತು ದೃಢಪಡಿಸಲು ಸಹಾಯ ಮಾಡಿದ್ದು, ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿವೆ.
ಸಾಂದರ್ಭಿಕ ಚಿತ್ರ -
ಲಖನೌ, ಜ. 8: ಸುಮಾರು ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ 30 ವರ್ಷದ ಮಹಿಳೆಯದ್ದಾಗಿರಬಹುದು ಎಂದು ಶಂಕಿಸಲಾದ ಅಸ್ಥಿಪಂಜರವೊಂದು (skeleton) ಉತ್ತರ ಪ್ರದೇಶದ (Uttar Pradesh) ಲಖನೌನ ನಾಗ್ರಾಮ್ ಪ್ರದೇಶದ ಹೊಲವೊಂದರಲ್ಲಿ ಪತ್ತೆಯಾಗಿದೆ. ಕೊಳೆತ ಮತ್ತು ಛಿದ್ರಗೊಂಡ ಶವದ ಗುರುತು ಹಿಡಿಯುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಸ್ಥಳದಲ್ಲಿ ದೊರೆತ ಸೀರೆಯು ಆ ಮಹಿಳೆಯನ್ನು ಪಿತಾಂಬರ್ ಎಂಬವವರ ಪತ್ನಿ ಪೂನಂ ಎಂದು ಗುರುತಿಸಲು ಸಹಾಯ ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವಶೇಷಗಳು ಪತ್ತೆಯಾದ ಕುಬೆಹ್ರಾ ಗ್ರಾಮದ ಹೊಲವು ಮಹಿಳೆಯ ಮನೆಗೆ ಕೇವಲ 300 ಮೀಟರ್ ದೂರದಲ್ಲಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. ನಾಗರಮ್ ಠಾಣಾಧಿಕಾರಿ ವಿವೇಕ್ ಕೆ.ಆರ್. ಚೌಧರಿ ಮಾತನಾಡಿ, ʼʼಚಂದ್ರಪ್ರಕಾಶ್ ಎಂಬ ಗ್ರಾಮಸ್ಥ ಗೋಮತಿ ನದಿ ಪ್ರದೇಶದ ಹೊಲದಲ್ಲಿ ಅಸ್ಥಿಪಂಜರದ ಅವಶೇಷಗಳನ್ನು ನೋಡಿದ್ದಾ ಗಿ ವರದಿ ಮಾಡಿದ್ದರು. ಕೂಡಲೇ ಪೊಲೀಸರು ಸ್ತಳಕ್ಕೆ ಭೇಟಿ ನೀಡಿದರುʼʼ ಎಂದು ಹೇಳಿದ್ದಾರೆ.
ಮದುವೆ ಮಾಡಲಿಲ್ಲ ಎಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಲೆಗೈದ ಪುತ್ರ!
ಸ್ಥಳದಿಂದ ದೊರೆತ ಸೀರೆಯಿಂದ ಅವಶೇಷಗಳು ಮಹಿಳೆಯದ್ದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸೀರೆಯನ್ನು ಕುಟುಂಬ ಸದಸ್ಯರು ಪಿತಾಂಬರ್ ಎಂಬವರ ಪತ್ನಿ ಪೂನಂ ಅವರಿಗೆ ಸೇರಿದ್ದು, ಅವರಿಗೆ ಸುಮಾರು 30 ವರ್ಷ ವಯಸ್ಸಾಗಿದೆ ಎಂದು ಗುರುತಿಸಿದ್ದಾರೆ ಎಂದು ಠಾಣೆಯ ಉಸ್ತುವಾರಿ ಅಧಿಕಾರಿ ತಿಳಿಸಿದ್ದಾರೆ.
ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಲಖನೌ ದಕ್ಷಿಣ) ರಲ್ಲಪಲ್ಲಿ ವಸಂತ್ ಕುಮಾರ್ ಬಟ್ಟೆಗಳ ಸಹಾಯದಿಂದ ಶವವನ್ನು ಗುರುತಿಸಿದ್ದರೂ, ನಿಖರ ಮಾಹಿತಿಗಾಗಿ ಡಿಎನ್ಎ ವಿಶ್ಲೇಷಣೆಗೆ ಅವಶೇಷಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಡಿಎನ್ಎ ಪರೀಕ್ಷಾ ವರದಿ ಬಂದ ನಂತರ, ನಾವು ಅದರಂತೆ ಮುಂದುವರಿಯುತ್ತೇವೆ. ಈ ಮಧ್ಯೆ, ನಾವು ಈ ವಿಷಯವನ್ನು ಎಲ್ಲ ಕೋನಗಳಿಂದ ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ ಎಂದು ಕುಮಾರ್ ಹೇಳಿದರು. 2025ರ ಡಿಸೆಂಬರ್ 13ರಂದು ಪಿತಾಂಬರ್ ನಾಗರಾಮ್ ಪೊಲೀಸ್ ಠಾಣೆಯಲ್ಲಿ ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ದಿನದಲ್ಲಿ ಇಬ್ಬರು ಪೊಲೀಸ್ ಪೇದೆಗಳ ಆತ್ಮಹತ್ಯೆ, ಠಾಣೆಯಲ್ಲೇ ನೇಣು ಹಾಕಿಕೊಂಡ ಕಾನ್‌ಸ್ಟೇಬಲ್
ಇಬ್ಬರು ಮಕ್ಕಳನ್ನು ಹೊಂದಿದ್ದ ಮಹಿಳೆ ನೆರೆಹೊರೆಯ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಹೇಳಲಾಗಿದೆ. ಕರೆ ವಿವರಗಳ ದಾಖಲೆಗಳ ಆಧಾರದ ಮೇಲೆ, ಹಲವು ಗ್ರಾಮಸ್ಥರು ಮತ್ತು ಇತರ ಶಂಕಿತರನ್ನು ಈ ಹಿಂದೆ ವಿಚಾರಣೆ ನಡೆಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಆಕೆ ಕಣ್ಮರೆಯಾಗುವ ಸುಮಾರು ಎರಡು ತಿಂಗಳ ಮೊದಲು, ಈ ವಿಷಯಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಆಕೆಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ ಆಕೆ ಮನೆಯಿಂದ ಹೊರಟುಹೋದಳು ಎಂದು ಅವರು ಹೇಳಿದರು.
ಇದಲ್ಲದೆ, ಅಸ್ಥಿಪಂಜರದ ಅವಶೇಷಗಳು ಪತ್ತೆಯಾದ ನಂತರ, ಪೂನಂ ಅವರ ಕುಟುಂಬ ಸದಸ್ಯರು ಅವರ ಪತಿಯೇ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ಪ್ರತಿಭಟನೆ ನಡೆಸಿದ ನಂತರ ಪೊಲೀಸರು ಕುಟುಂಬವನ್ನು ಸಮಾಧಾನಪಡಿಸಬೇಕಾಯಿತು. ತನಿಖೆಯ ಭಾಗವಾಗಿ ಪತಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇತರ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.