Physical Assault: ಜನಾಂಗೀಯ ದ್ವೇಷ; ಬ್ರಿಟನ್‌ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಯುನೈಟೆಡ್ ಕಿಂಗ್‌ಡಮ್‌ನ (ಯುಕೆ) ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿ 20 ವರ್ಷದ ಭಾರತೀಯ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರ ಪ್ರಕಾರ, ಮಹಿಳೆಯ ಜನಾಂಗೀಯ ದ್ವೇಷದ ಹಿನ್ನಲೆ ಈ ದೌರ್ಜನ್ಯ ನಡೆಸಲಾಗಿದೆ.
-
Vishakha Bhat
Oct 27, 2025 8:43 AM
ಲಂಡನ್: ಯುನೈಟೆಡ್ ಕಿಂಗ್‌ಡಮ್‌ನ (ಯುಕೆ) ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿ 20 ವರ್ಷದ ಭಾರತೀಯ ಮೂಲದ ಮಹಿಳೆಯ (Physical Assault) ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರ ಪ್ರಕಾರ, ಮಹಿಳೆಯ ಜನಾಂಗೀಯ ದ್ವೇಷದ ಹಿನ್ನಲೆ ಈ ದೌರ್ಜನ್ಯ ನಡೆಸಲಾಗಿದೆ. ಇದು ಯುವತಿಯ ಮೇಲೆ ನಡೆದ ಅತ್ಯಂತ ಭಯಾನಕ ದಾಳಿಯಾಗಿದ್ದು, ಇದಕ್ಕೆ ಕಾರಣರಾದ ವ್ಯಕ್ತಿಯನ್ನು ಬಂಧಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರ ತನಿಖೆಯನ್ನು ನೋಡಿಕೊಳ್ಳುತ್ತಿರುವ ಪತ್ತೇದಾರಿ ಸೂಪರಿಂಟೆಂಡೆಂಟ್ (ಡಿಎಸ್) ರೊನಾನ್ ಟೈರರ್ ಭಾನುವಾರ ಹೇಳಿದ್ದಾರೆ.
ಮಾಹಿತಿಗಾಗಿ ಸಾರ್ವಜನಿಕ ಮನವಿಯ ಭಾಗವಾಗಿ ಪಡೆ ಶಂಕಿತನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಅಧಿಕಾರಿಗಳ ತಂಡಗಳು ಸಾಕ್ಷ್ಯಗಳನ್ನು ಪಡೆದುಕೊಳ್ಳುತ್ತಿವೆ ಮತ್ತು ದಾಳಿಕೋರನ ಪ್ರೊಫೈಲ್ ಅನ್ನು ನಿರ್ಮಿಸುತ್ತಿವೆ, ಇದರಿಂದ ಅವನನ್ನು ಸಾಧ್ಯವಾದಷ್ಟು ಬೇಗ ವಶಕ್ಕೆ ಪಡೆಯಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಅತ್ಯಾಚಾರ ಆರೋಪಿಯನ್ನು 30 ರ ವರ್ಷ ಆಸುಪಾಸಿನ ಬಿಳಿ ಬಣ್ಣದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸಂತ್ರಸ್ತೆಯನ್ನು ಪಂಜಾಬ್ ಮೂಲದ ಯುವತಿ ಎಂದು ಗುರುತಿಸಲಾಗಿದ್ದು, ಆಕೆ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಸ್ಥಳೀಯ ಸಮುದಾಯ ತಿಳಿಸಿದೆ. ಕಳೆದ ತಿಂಗಳು ಓಲ್ಡ್‌ಬರಿಯಲ್ಲಿ ಬ್ರಿಟಿಷ್ ಸಿಖ್ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು. ಓಲ್ಡ್‌ಬರಿ ಪಟ್ಟಣದಲ್ಲಿ ಇಪ್ಪತ್ತರ ಹರೆಯದ ಸಿಖ್ ಮಹಿಳೆಯೊಬ್ಬರ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿ ಜನಾಂಗೀಯ ನಿಂದನೆ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: ಒಡಿಶಾವನ್ನು ಬೆಚ್ಚಿಬೀಳಿಸಿದ ಅತ್ಯಾಚಾರ ಪ್ರಕರಣ: ಹತ್ತು ದಿನಗಳಲ್ಲಿ ಐದು ಸಾಮೂಹಿಕ ಅತ್ಯಾಚಾರ ದೂರು ದಾಖಲು
ಈ ಘಟನೆಯು ಸ್ಥಳೀಯ ಸಿಖ್ ಸಮುದಾಯವನ್ನು ಕೆರಳಿಸಿದೆ. ಬ್ರಿಟಿಷ್ ಸಂಸದೆ ಪ್ರೀತ್ ಕೌರ್ ಗಿಲ್ ಈ ಘಟನೆಯನ್ನು ಖಂಡಿಸಿದರು ಮತ್ತು ಇತ್ತೀಚಿನ ದಿನಗಳಲ್ಲಿ "ಬಹಿರಂಗ ಜನಾಂಗೀಯತೆ" ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಎಂದು ಹೇಳಿದರು. ನಮ್ಮ ಸಿಖ್ ಸಮುದಾಯ ಮತ್ತು ಪ್ರತಿಯೊಂದು ಸಮುದಾಯಕ್ಕೂ ಸುರಕ್ಷಿತ, ಗೌರವಾನ್ವಿತ ಮತ್ತು ಮೌಲ್ಯಯುತ ಭಾವನೆ ಹೊಂದುವ ಹಕ್ಕಿದೆ. ಓಲ್ಡ್‌ಬರಿಯಲ್ಲಿ ಅಥವಾ ಬ್ರಿಟನ್‌ನಲ್ಲಿ ಎಲ್ಲಿಯೂ ಜನಾಂಗೀಯತೆ ಮತ್ತು ಸ್ತ್ರೀದ್ವೇಷಕ್ಕೆ ಸ್ಥಾನವಿಲ್ಲ" ಎಂದು ಬರ್ಮಿಂಗ್‌ಹ್ಯಾಮ್ ಎಡ್ಜ್‌ಬಾಸ್ಟನ್‌ನ ಶಾಸಕರು ಹೇಳಿದ್ದಾರೆ.