BBK 12: ನಿನ್ನೆ ಕಿಚ್ಚನ ಚಪ್ಪಾಳೆ ಯಾರಿಗೂ ಸಿಕ್ಕಿಲ್ಲ ಏಕೆ?: ಸುದೀಪ್ ನೀಡಿದ ಕಾರಣ ಏನು?
ಮೂರನೇ ವಾರದಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ಅವರಿಗೆ ಕಿಚ್ಚನ ಚಪ್ಪಾಳೆ ನೀಡಿದರು. ರಕ್ಷಿತಾಗೆ ಅವಮಾನ ಆಗಿದ್ದಾಗ ಅವರ ಪರ ನಿಂತಿದ್ದಕ್ಕೆ ಮತ್ತು ವಾರದಲ್ಲಿ ಉತ್ತಮವಾಗಿ ಆಟವಾಡಿದ್ದಕ್ಕೆ ಈ ಚಪ್ಪಾಳೆ ಸುದೀಪ್ ನೀಡಿದರು. ನಿನ್ನೆ ಕೂಡ ಗಿಲ್ಲಿಗೆ ಕಳೆದ ವಾರ ನೀಡಿದ ಕಿಚ್ಚನ ಚಪ್ಪಾಳೆಗೆ ಗಿಫ್ಟ್ ಕಳುಹಿಸಿದರು.
Kichchana Chappale BBK 12 -
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಐದನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರದಲ್ಲಿ ಒಂದು ಸಣ್ಣ ಫಿನಾಲೆ ಕೂಡ ನಡೆಯಿತು. ಇದಾದ ಬಳಿಕ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟರು. ಸದ್ಯ ಮನೆ ಸೆಟಲ್ ಆಗಿದ್ದು ಅಸಲಿ ಆಟ ಶುರುವಾಗಲಿದೆ. ಪ್ರತಿ ಸೀಸನ್ನಲ್ಲಿ ಕಿಚ್ಚ ಸುದೀಪ್ ಅವರು ವಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಸದಸ್ಯನಿಗೆ ಕಿಚ್ಚನ ಚಪ್ಪಾಳೆ ಎಂದು ಘೋಷಿಸುತ್ತಾರೆ. ಸದ್ಯ ಈ ಸೀಸನ್ ಶುರುವಾಗಿ ನಾಲ್ಕು ವಾರ ಕಳೆದರೂ ಕಿಚ್ಚನ ಚಪ್ಪಾಳೆ ನೀಡಿರುವುದು ಒಬ್ಬರಿಗೆ ಮಾತ್ರ.
ಮೂರನೇ ವಾರದಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ಅವರಿಗೆ ಕಿಚ್ಚನ ಚಪ್ಪಾಳೆ ನೀಡಿದರು. ರಕ್ಷಿತಾಗೆ ಅವಮಾನ ಆಗಿದ್ದಾಗ ಅವರ ಪರ ನಿಂತಿದ್ದಕ್ಕೆ ಮತ್ತು ವಾರದಲ್ಲಿ ಉತ್ತಮವಾಗಿ ಆಟವಾಡಿದ್ದಕ್ಕೆ ಈ ಚಪ್ಪಾಳೆ ಸುದೀಪ್ ನೀಡಿದರು. ನಿನ್ನೆ ಕೂಡ ಗಿಲ್ಲಿಗೆ ಕಳೆದ ವಾರ ನೀಡಿದ ಕಿಚ್ಚನ ಚಪ್ಪಾಳೆಗೆ ಗಿಫ್ಟ್ ಕಳುಹಿಸಿದರು. ಇದರಲ್ಲಿ ಕಾಫಿ ಮಗ್, ಬಿಸ್ಕಟ್, ಕುಕ್ಕೀಸ್ ಜೊತೆಗೆ ಟಿ-ಶರ್ಟ್‌ನ ಉಡುಗೊರೆಯಾಗಿ ಗಿಲ್ಲಿ ನಟನಿಗೆ ಸುದೀಪ್ ನೀಡಿದರು. ಆದರೆ, ನಿನ್ನೆ ಕಿಚ್ಚನ ಚಪ್ಪಾಳೆ ಯಾರಿಗೂ ಸಿಗಲಿಲ್ಲ.
ಹೌದು, ನಿನ್ನೆ ಕೂಡ ಸುದೀಪ್ ಕಿಚ್ಚನ ಚಪ್ಪಾಳೆಯನ್ನ ಯಾರಿಗೂ ಕೊಡಲಿಲ್ಲ. ಇದಕ್ಕೆ ಕಾರಣವನ್ನೂ ತಿಳಿಸಿದ ಕಿಚ್ಚ, ‘‘ಈ ವಾರ ಅಂಥದ್ದೇನೂ ಕಾಣಲಿಲ್ಲ’’ ಎಂದು ನೇರವಾಗಿಯೇ ಹೇಳಿಬಿಟ್ಟರು. ಆ ಮೂಲಕ ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯ ನಿರೀಕ್ಷೆಯಲ್ಲಿದ್ದವರಿಗೆ ಭಾರೀ ನಿರಾಸೆ ಉಂಟಾಯಿತು. ಮುಖ್ಯವಾಗಿ ಅಶ್ವಿನಿ ಗೌಡ ಅವರು ನನಗೆ ಕಿಚ್ಚನ ಚಪ್ಪಾಳೆ ಸಿಗಬೇಕು ಅದಕ್ಕೋಸ್ಕರ ನಾನು ಉತ್ತಮವಾಗಿ ಆಡುತ್ತೇನೆ ಎಂದು ಕಳೆದ ವಾರದ ಆರಂಭದಲ್ಲಿ ಹೇಳಿದ್ದರು. ಆದರೆ, ಇದು ಸದ್ಯ ಕನಸಾಗಿಯೇ ಉಳಿದಿದೆ.
ಕಳೆದ ವಾರ ಕಿಚ್ಚ ಮೆಚ್ಚುಗೆಯ ಚಪ್ಪಾಳೆಗಾಗಿ ಅಶ್ವಿನಿ ಗೌಡ ಸಾಕಷ್ಟು ಪ್ರಯತ್ನ ಪಟ್ಟರು. ವೈಲ್ಡ್ ಕಾರ್ಡ್ ಸ್ಪರ್ಧಿ ರಘು ಮನೆಗೆ ಬಂದೊಡನೆ, ಏಕವಚನದಲ್ಲಿ ಮಾತನಾಡುವ ಹಾಗಿಲ್ಲ ಅಂತ ಧ್ವನಿ ಏರಿಸಿದರು. ರಘು ಇಂಗ್ಲೀಷ್ ಪದಗಳನ್ನ ಬಳಸಿದಾಗ, ಕನ್ನಡ ಭಾಷೆಯಲ್ಲೇ ಮಾತಾಡಿ ಅಂತ ಗುಡುಗಿದ್ದರು. ಕ್ಯಾಪ್ಟನ್ಸಿ ರೇಸ್‌ನಿಂದ ಹೊರಬಿದ್ದಾಗ ಕಣ್ಣೀರು ಸುರಿಸಿದ್ದರು. ತಂಡಗಳನ್ನ ಬಿಟ್ಟು ರಘು ಹಾಗೂ ರಿಷಾ ಪವರ್ ಕಾಯಿನ್ ಸ್ವೀಕರಿಸಿದಾಗ ಇಬ್ಬರ ವಿರುದ್ಧ ಅಶ್ವಿನಿ ಗೌಡ ಧ್ವನಿಯೆತ್ತಿದ್ದರು. ಆದರೆ, ಇದ್ಯಾವುದೂ ವರ್ಕೌಟ್ ಆಗಲಿಲ್ಲ.
BBK 12: ಅಶ್ವಿನಿ ಗೌಡ-ಜಾನ್ವಿ ಮಧ್ಯೆ ಕಿತ್ತಾಟ: ಬೇರೆ-ಬೇರೆಯಾದ ಜೋಡೆತ್ತುಗಳು
ವಾರದ ಕೊನೆಯಲ್ಲಿ ಅಶ್ವಿನಿಗೆ ಸಿಕ್ಕಿದ್ದು ಕಳಪೆ ಪಟ್ಟ. ಆದರೆ, ಇಲ್ಲೂ ಅಶ್ವಿನಿ ಮನೆಯ ರೂಲ್ಸ್ ಬ್ರೇಕ್ ಮಾಡಿ ಎಡವಿದರು. ತರಕಾರಿ ಕಟ್ ಮಾಡದೆ ಉದ್ಧಟತನ ಮೆರೆದರು. ಇನ್ನೊಬ್ಬರಿಗೆ ಏಕವಚನದ ಪಾಠ ಮಾಡಿದ ಅಶ್ವಿನಿ ಗೌಡ ತಾವೇ ಅದನ್ನ ಮರೆತು, ಗಿಲ್ಲಿಗೆ ಏಯ್.. ಮುಚ್ಕೊಂಡು ಹೋಗೋ ಎಂದೆಲ್ಲ ಹೇಳಿದರು. ಅಷ್ಟೇ ಅಲ್ಲದೆ ಕಾಕ್ರೋಚ್ ಸುಧಿ ರಕ್ಷಿತಾ ಶೆಟ್ಟಿಗೆ ಸೆಡೆ ಪದ ಬಳಸಿದಾಗ ಅದರ ವಿರುದ್ಧವೂ ಅಶ್ವಿನಿ ಧ್ವನಿ ಎತ್ತಲಿಲ್ಲ. ಸದ್ಯ ಈ ವಾರ ಯಾರು ಉತ್ತಮ ಪ್ರದರ್ಶನ ನೀಡುತ್ತಾರೆ?, ಕಿಚ್ಚನ ಚಪ್ಪಾಳೆ ಈ ವಾರವಾದ್ರೂ ಸಿಗುತ್ತ ಎಂಬುದು ನೋಡಬೇಕಿದೆ.