Viral News: ನಕಲಿ ಪೊಲೀಸ್ ಠಾಣೆ ತೆಗೆದು ಜನರಿಗೆ ವಂಚನೆ; ಫೇಕ್ ಆರಕ್ಷಕರು ಖೆಡ್ಡಾಗೆ ಬಿದ್ದಿದ್ದೇಗೆ?
ಅಂತರರಾಷ್ಟ್ರೀಯ ಪೊಲೀಸ್ ಮತ್ತು ಅಪರಾಧ ತನಿಖಾ ಬ್ಯೂರೋ" ಹೆಸರಿನಲ್ಲಿ ನಕಲಿ ಕಚೇರಿಯನ್ನು ನಡೆಸುತ್ತಿದ್ದ ಆರು ಮಂದಿ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗುಂಪು ಸಾರ್ವಜನಿಕರನ್ನು ದಾರಿ ತಪ್ಪಿಸುವ, ಸರ್ಕಾರಿ ಅಧಿಕಾರಿಗಳಂತೆ ನಟಿಸಿ ಮತ್ತು ನಕಲಿ ದಾಖಲೆಗಳು, ನಕಲಿ ಐಡಿಗಳು ಮತ್ತು ಪೊಲೀಸ್ ಶೈಲಿಯ ಲಾಂಛನಗಳನ್ನು ಬಳಸಿಕೊಂಡು ಹಣ ಸುಲಿಗೆ ಮಾಡುತ್ತಿತ್ತು.


ಲಖನೌ: ಅಂತರರಾಷ್ಟ್ರೀಯ ಪೊಲೀಸ್ ಮತ್ತು ಅಪರಾಧ ತನಿಖಾ ಬ್ಯೂರೋ" ಹೆಸರಿನಲ್ಲಿ ನಕಲಿ ಕಚೇರಿಯನ್ನು ನಡೆಸುತ್ತಿದ್ದ ಆರು ಮಂದಿ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗುಂಪು ಸಾರ್ವಜನಿಕರನ್ನು ದಾರಿ ತಪ್ಪಿಸುವ, ಸರ್ಕಾರಿ ಅಧಿಕಾರಿಗಳಂತೆ ನಟಿಸಿ ಮತ್ತು ನಕಲಿ ದಾಖಲೆಗಳು, ನಕಲಿ ಐಡಿಗಳು ಮತ್ತು ಪೊಲೀಸ್ ಶೈಲಿಯ ಲಾಂಛನಗಳನ್ನು ಬಳಸಿಕೊಂಡು ಹಣ ಸುಲಿಗೆ ಮಾಡುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇಲೆ ಗೌತಮ್ ಬುದ್ಧ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ (Viral News) ಭಾನುವಾರ ಮಧ್ಯರಾತ್ರಿ ನೋಯ್ಡಾದ ಸೆಕ್ಟರ್ 70 ರ ಬಿಎಸ್-136 ರಲ್ಲಿರುವ ಆವರಣದ ಮೇಲೆ ದಾಳಿ ನಡೆಸಿದ್ದಾರೆ.
ಅವರು ಪೊಲೀಸರ ಸಮವಸ್ತ್ರ ಹಾಗೂ ಲೋಗೋಗಳನ್ನು ಬಳಸುತ್ತಿದ್ದರು. ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಆಯುಷ್ ಸಚಿವಾಲಯ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಕಲಿ ಪ್ರಮಾಣಪತ್ರಗಳನ್ನು ಪ್ರದರ್ಶಿಸಿ ಹಲವರಿಗೆ ವಂಚಿಸಿದ್ದಾರೆ. ಅಷ್ಟೇ ಅಲ್ಲದೆ, ಇಂಟರ್‌ಪೋಲ್, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಯುರೇಷಿಯಾ ಪೋಲ್‌ನೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಗ್ಯಾಂಗ್ ಸಾರ್ವಜನಿಕ ಸೇವಕರಂತೆ ನಟಿಸಿ, ತಮ್ಮ ವೆಬ್‌ಸೈಟ್ - www.intlpscrib.in - ಮೂಲಕ ದೇಣಿಗೆ ಸಂಗ್ರಹಿಸಿಸುತ್ತಿದ್ದರು. ಕಾನೂನುಬದ್ಧವೆಂದು ತೋರಿಸಲು ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಪ್ರದರ್ಶಿಸುತ್ತಿದ್ದರು. ಅಷ್ಟೇ ಅಲ್ಲದೆ "ಅಂತರರಾಷ್ಟ್ರೀಯ ಮಾನವ ಹಕ್ಕುಗಳ" ಗುರುತಿನ ಚೀಟಿಗಳು ಮತ್ತು ಅಧಿಕೃತವಾಗಿ ಕಾಣುವ ಅಂಚೆಚೀಟಿಗಳನ್ನು ಇಟ್ಟುಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು 'ಅಂತರರಾಷ್ಟ್ರೀಯ ಪೊಲೀಸ್ ಮತ್ತು ಅಪರಾಧ ತನಿಖಾ ಬ್ಯೂರೋ'ದ ಸೋಗಿನಲ್ಲಿ ಸೆಕ್ಟರ್ 70 ರಲ್ಲಿ ತಮ್ಮ ಕಚೇರಿಯನ್ನು ತೆರೆದಿದ್ದರು.
ಈ ಸುದ್ದಿಯನ್ನೂ ಓದಿ: Viral News: ಪ್ರಿಯಕರನ ಜತೆ ಲವ್ವಿಡವ್ವಿ, ವಿಡಿಯೊ ಸೆರೆ ಹಿಡಿದಿದ್ದ ಪತಿಯ ಮೊಬೈಲ್ ಕಳ್ಳತನಕ್ಕೆ ಹೆಂಡ್ತಿಯಿಂದಲೇ ಸುಪಾರಿ!
ಪೊಲೀಸರಂತಹ ಲಾಂಛನಗಳು ಮತ್ತು ನಕಲಿ ಸಚಿವಾಲಯದ ದಾಖಲೆಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸಿ ಹಣ ವಂಚಿಸಿಸುತ್ತಿದ್ದ ಆರು ಜನರನ್ನು ಬಂಧಿಸಲಾಗಿದೆ. ಅವರಿಂದ ನಕಲಿ ಐಡಿಗಳು, ಸಚಿವಾಲಯದ ಪ್ರಮಾಣಪತ್ರಗಳು, ಚೆಕ್ ಪುಸ್ತಕಗಳು, ಎಟಿಎಂ ಕಾರ್ಡ್‌ಗಳು, ವಿಸಿಟಿಂಗ್ ಕಾರ್ಡ್‌ಗಳು, ಸೈನ್‌ಬೋರ್ಡ್‌ಗಳು, ಮೊಬೈಲ್ ಫೋನ್‌ಗಳು ಮತ್ತು ₹ 42,300 ನಗದು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಸೆಂಟ್ರಲ್ ನೋಯ್ಡಾದ ಡಿಸಿಪಿ ಶಕ್ತಿ ಮೋಹನ್ ಅವಸ್ಥಿ ಹೇಳಿದ್ದಾರೆ. ಪೊಲೀಸರನ್ನು ಹೋಲುವ ಫಲಕಗಳನ್ನು ಹಾಕಿ ಸುಮಾರು 10 ದಿನಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಸದ್ಯ ಇವರಿಂದ ವಂಚನೆಗೊಳಗಾಗದವರು ದೂರು ನೀಡಬಹುದು ಎಂದು ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.