ಅ.15ರಿಂದ ರಣಜಿ ಟ್ರೋಫಿ; ಕರ್ನಾಟಕಕ್ಕೆ ಸೌರಾಷ್ಟ್ರ ಮೊದಲ ಎದುರಾಳಿ
Ranji Trophy Elite 2025-26: ಈ ರಣಜಿ ಟ್ರೋಫಿ ಋತುವಿನಲ್ಲಿ ಟಿ20 ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು 50 ಓವರ್‌ಗಳ ವಿಜಯ್ ಹಜಾರೆ ಟ್ರೋಫಿಯನ್ನು ಪ್ರತ್ಯೇಕಿಸಲಾಗಿದೆ. ಆಟಗಾರರ ಕೆಲಸದ ಒತ್ತಡ ಕಡಿಮೆಗೊಳಿಸಲು ಬಿಸಿಸಿಐ ಈ ಕ್ರಮಕೈಗೊಂಡಿದೆ ಎನ್ನಲಾಗಿದೆ.


ನವದೆಹಲಿ: ರಣಜಿ ಕ್ರಿಕೆಟ್ ಪಂದ್ಯಾವಳಿಯ 2024-25ರ ಆವೃತ್ತಿ(Ranji Trophy Elite 2025-26) ಅಕ್ಟೋಬರ್ 15ರಿಂದ ಆರಂಭಗೊಳ್ಳಲಿದೆ. 4 ತಿಂಗಳ ಕಾಲ ಪಂದ್ಯಾವಳಿ ಮುಂದುವರಿಯಲಿದ್ದು, ಮುಂದಿನ ವರ್ಷ ಫೆ.28ಕ್ಕೆ ಫೈನಲ್ ಪಂದ್ಯದೊಂದಿಗೆ ಪಂದ್ಯಾವಳಿ ಕೊನೆಗೊಳ್ಳಲಿದೆ. ಪಂದ್ಯಗಳು ಬೆಳಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ. ಕರ್ನಾಟಕ ತಂಡವು ತನ್ನ ಮೊದಲ ಪಂದ್ಯದಲ್ಲಿ ಸೌರಾಷ್ಟ್ರದ(Saurashtra vs Karnataka) ಎದುರು ಕಣಕ್ಕಿಳಿಯಲಿದೆ.
ನಾಲ್ಕು ದಿನಗಳ ಈ ರಣಜಿ ಟ್ರೋಫಿಯ ಮೊದಲ ಹಂತದ ಪಂದ್ಯಗಳು ಅ.15 ರಿಂದ ನವೆಂಬರ್ 19ರವರೆಗೆ ನಡೆಯುವುದು. ಇದರಲ್ಲಿ ಐದು ಪಂದ್ಯಗಳನ್ನು ಆಡಿಸಲಾಗುವುದು. ಎರಡನೇ ಹಂತವು 2026ರ ಜನವರಿ 22 ರಿಂದ ಫೆ.1 ರವರೆಗೆ ನಡೆಯಲಿದೆ. ನಾಕೌಟ್ ಹಂತವು ಫೆ. 6 ರಿಂದ 28ರವರೆಗೆ ಆಯೋಜನೆಗೊಳ್ಳಲಿದೆ. ಮೊದಲ ಹಂತದಲ್ಲಿ ಒಟ್ಟು 16 ಪಂದ್ಯಗಳು ನಡೆಯಲಿವೆ. ಎಲೀಟ್ ಹಂತದಲ್ಲಿ ಕರ್ನಾಟಕವು ಸೌರಾಷ್ಟ್ರ, ಗೋವಾ, ಕೇರಳ, ಮಹಾರಾಷ್ಟ್ರ, ಚಂಡೀಗಢ, ಮಧ್ಯಪ್ರದೇಶ ಮತ್ತು ಪಂಜಾಬ್ ತಂಡಗಳನ್ನು ಎದುರಿಸಲಿದೆ.
ಎಲೈಟ್ ಡಿವಿಶನ್‌ನಲ್ಲಿ 32 ತಂಡಗಳಿರಲಿವೆ. ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ತಲಾ 8 ತಂಡಗಳಿವೆ. ಗ್ರೂಪ್ ಹಂತದಲ್ಲಿ ಪ್ರತೀ ತಂಡವೂ ತಲಾ 7 ಪಂದ್ಯಗಳನ್ನಾಡಲಿದೆ. ಗ್ರೂಪ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಉಲೀಯುವ ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲಿವೆ. ಪ್ರತೀ ಗುಂಪಿನಲ್ಲಿ ತಳದಲ್ಲಿ ಉಳಿಯುವ ಎರಡು ತಂಡಗಳು ಮುಂಇನ ಸೀಸನ್‌ನಲ್ಲಿ ಪ್ಲೇಟ್ ಡಿವಿಶನ್‌ಗೆ ಹೋಗುತ್ತದೆ.
ಇದನ್ನೂ ಓದಿ ಬಿಸಿಸಿಐಗೆ ರಿಲೀಫ್; ಆರ್‌ಟಿಐ ನಿರ್ಧಾರ ಕೈಬಿಟ್ಟ ಕೇಂದ್ರ ಸರ್ಕಾರ
ಈ ರಣಜಿ ಟ್ರೋಫಿ ಋತುವಿನಲ್ಲಿ ಟಿ20 ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು 50 ಓವರ್‌ಗಳ ವಿಜಯ್ ಹಜಾರೆ ಟ್ರೋಫಿಯನ್ನು ಪ್ರತ್ಯೇಕಿಸಲಾಗಿದೆ. ಆಟಗಾರರ ಕೆಲಸದ ಒತ್ತಡ ಕಡಿಮೆಗೊಳಿಸಲು ಬಿಸಿಸಿಐ ಈ ಕ್ರಮಕೈಗೊಂಡಿದೆ ಎನ್ನಲಾಗಿದೆ.