Sirsi News: ಬೆಳ್ಳಂಬೆಳಿಗ್ಗೆ ಶಿರಸಿಯಲ್ಲಿ ಲೋಕಾಯುಕ್ತರ ಕಾರ್ಯಾಚರಣೆ, ಪ್ರಥಮ ದರ್ಜೆ ಲೆಕ್ಕಾಧಿಕಾರಿ ಬಂಧನ
ಕಾರಿನ ಬಾಡಿಗೆ ಸಂಬಂಧ ಸಚಿನ ಕೋಡ್ಕಣಿ ಅವರಿಂದ 20 ಸಾವಿರ ರೂ. ಹಣ ಸ್ವೀಕರಿಸು ತ್ತಿದ್ದ ವೇಳೆ ಪ್ರಥಮ ದರ್ಜೆ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಿಗ್ಗೆ ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಸಂದರ್ಭ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಸುರೇಶ ಬಿಳಗಿ ಅವರನ್ನು ವಶಕ್ಕೆ ಪಡೆಯಲಾಯಿತು.
-
Ashok Nayak
May 21, 2025 6:29 PM
ಶಿರಸಿ: ಕಾರಿನ ಬಾಡಿಗೆ ಸಂಬಂಧ ಸಚಿನ ಕೋಡ್ಕಣಿ ಅವರಿಂದ 20 ಸಾವಿರ ರೂ. ಹಣ ಸ್ವೀಕರಿಸು ತ್ತಿದ್ದ ವೇಳೆ ಪ್ರಥಮ ದರ್ಜೆ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಿಗ್ಗೆ ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಸಂದರ್ಭ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಸುರೇಶ ಬಿಳಗಿ ಅವರನ್ನು ವಶಕ್ಕೆ ಪಡೆಯಲಾಯಿತು.
ಇದನ್ನೂ ಓದಿ: Sirsi News: ಪೂರ್ಣ ಪ್ರಮಾಣದ ಎಸಿ, ಪೌರಾಯುಕ್ತರನ್ನು ನೀಡಲಾಗದ ಸರಕಾರ ಮನೆಗೆ ಹೋಗಲಿ
ಲೋಕಾಯುಕ್ತ ಇನ್ಸ್ಪೇಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಕಾರಿನ ಬಾಡಿಗೆ ಸಂಬಂಧ ಹಣ ಸ್ವೀಕರಿಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದ ಲೆಕ್ಕಾಧಿಕಾರಿ ಯನ್ನು ಬಂಧಿಸಲಾಗಿದೆ.