ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೆಂಡತಿಯ ಎದುರು ಅವಮಾನಿಸಿದ್ದಕ್ಕಾಗಿ ಹೆತ್ತವರನ್ನೇ ಹೊಡೆದು ಕೊಂದ ಮಗ!

ಹೆಂಡತಿಯ ಎದುರೇ ತನಗೆ ಅವಮಾನ ಮಾಡಿದರೆಂದು ಹೆತ್ತವರನ್ನೇ ಮಗ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಧುಲೆಯ ಶಿರ್ಪುರದ ಮಹಾವೀರ್ ಸೊಸೈಟಿಯಲ್ಲಿ ನಡೆದಿದೆ. ಪೋಷಕರು ತಮ್ಮ ಮಗಳ ಮದುವೆಯಲ್ಲಿ ಭಾಗವಹಿಸಿ ಮನೆಗೆ ಮರಳಿದ್ದರು. ಮರಳಿ ಬಂದ ಬಳಿಕ ಮನೆಯಲ್ಲಿ ಕಲಹ ಉಂಟಾಗಿದೆ.

ಹೆತ್ತವರನ್ನೇ ಹೊಡೆದು ಕೊಂದ ಮಗ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 15, 2026 9:10 PM

ಮುಂಬೈ: ಹೆಂಡತಿಯ ಎದುರೇ ತನಗೆ ಅವಮಾನ (Murder Case) ಮಾಡಿದರೆಂದು ಹೆತ್ತವರನ್ನೇ ಮಗ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ (Maharashtra) ಧುಲೆಯ ಶಿರ್ಪುರದ ಮಹಾವೀರ್ ಸೊಸೈಟಿಯಲ್ಲಿ ನಡೆದಿದೆ. ಪೋಷಕರು ತಮ್ಮ ಮಗಳ ಮದುವೆಯಲ್ಲಿ ಭಾಗವಹಿಸಿ ಮನೆಗೆ ಮರಳಿದ್ದರು. ಬಳಿಕ ಮನೆಯಲ್ಲಿ ಜಗಳ ಶುರುವಾಗಿದೆ. ಸೊಸೆಯ ಎದುರೇ ಮಗನನ್ನು ಅವರು ಅವಮಾನಿಸಿದ್ದಾರೆ. ಕೋಪದ ಭರದಲ್ಲಿ, ಮಗ ಮನೆಯಲ್ಲಿ ಇರಿಸಿದ್ದ ಕುಟ್ಟಾಣಿಯಿಂದ ತಲೆಗೆ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.

ಮೃತ ವೃದ್ಧರನ್ನು ರಂಜುದೇವಿ ಮಹ್ತೊ ಮತ್ತು ಇಂದ್ರಾಂ ಮಹ್ತೊ ಎಂದು ಗುರುತಿಸಲಾಗಿದ್ದು, ಭಾರೀ ಹೊಡೆತ ಬಿದ್ದಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಚಂದನ್ ಇಂದ್ರಮ್ ಮಹ್ತೊ ಸ್ಥಳದಿಂದ ಪರಾರಿಯಾಗಲು ಯತ್ನಿಸಿದನು ಆದರೆ ನೆರೆಹೊರೆಯವರು ಅವನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.

ತಾಯಿಯನ್ನು ಕೊಂದ ಪಾಪಿ ಮಗ!

ಮಗನೋರ್ವ ತನ್ನ 75 ವರ್ಷದ ಪಾರ್ಶ್ವವಾಯು ಪೀಡಿತ ತಾಯಿಯನ್ನು ನಾಲ್ಕು ಅಂತಸ್ತಿನ ಕಟ್ಟಡದ ಟೆರೇಸ್‌ನಿಂದ ತಳ್ಳಿ ಕೊಂದಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಆರ್‌ಆರ್ ನಗರದ ಬಿಇಎಂಎಲ್ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. 42 ವರ್ಷದ ವ್ಯಕ್ತಿ ತನ್ನ ತಾಯಿಯನ್ನು ಟೆರೇಸ್‌ಗೆ ಹೊತ್ತೊಯ್ದು ನಂತರ ತಳ್ಳಿ ಸ್ಥಳದಲ್ಲೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರಂಭಿಕ ತನಿಖೆ ಮತ್ತು ತಪ್ಪೊಪ್ಪಿಗೆಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ.

ಸೇಲ್ಸ್​ ಎಕ್ಸಕ್ಯೂಟಿವ್​ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ಆರ್‌ಆರ್ ನಗರದ ಬಿಇಎಂಎಲ್ ಲೇಔಟ್‌ನಲ್ಲಿರುವ ಕಟ್ಟಡದ ಎರಡನೇ ಮಹಡಿಯಲ್ಲಿ ಕುಟುಂಬ ಮತ್ತು ತಾಯಿಯೊಂದಿಗೆ ಬಾಡಿಗೆಗೆ ವಾಸಿಸುತ್ತಿದ್ದ. ತಾಯಿ ಕಳೆದ ನಾಲ್ಕೈದು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಪ್ರತಿದಿನ ಅವರು ಬಳಲುತ್ತಿರುವುದನ್ನು ನೋಡಲು ಸಾಧ್ಯಲಾಗದೆ, ಆರೈಕೆ ಮಾಡಲಾಗದೇ ಈ ಕೃತ್ಯ ಎಸಗಿರುವುದಾಗಿ ಆರೋಪಿ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.