ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Maharashtra Horror: ಇನ್ಸ್ಟಾಗ್ರಾಂ ಪೋಸ್ಟ್‌ಗಾಗಿ ನಡೆದ ಜಗಳ ಭೀಕರ ಹತ್ಯೆಯೊಂದಿಗೆ ಅಂತ್ಯ-ಆರೋಪಿ ಅರೆಸ್ಟ್!

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾರಮಾರಿ ಜಗಳ ನಡೆದಿದ್ದು, ಜಗಳವು ಭೀಕರ ಹತ್ಯೆಯೊಂದಿಗೆ ಅಂತ್ಯವಾಗಿದೆ. ವ್ಯಕ್ತಿಯೊಬ್ಬ 17 ವರ್ಷದ ಬಾಲಕನನ್ನು ಅಮಾನೀಯವಾಗಿ ಕೊಂದಿದ್ದಾನೆ ಎಂದು ಪೊಲೀಸರು ಸೋಮವಾರ(ಫೆ.9) ತಿಳಿಸಿದ್ದಾರೆ.

ಇನ್ಸ್ಟಾಗ್ರಾಂ ಪೋಸ್ಟ್‌ಗಾಗಿ ನಡೆಯಿತು ಭೀಕರ ಹತ್ಯೆ!

Maharashtra Horror -

Profile
Deekshith Nair Feb 10, 2025 4:25 PM

ಮುಂಬೈ: ಮಹಾರಾಷ್ಟ್ರದ ವಾರ್ಧಾ(Wardha) ಜಿಲ್ಲೆಯಲ್ಲಿ ಇನ್‌ಸ್ಟಾಗ್ರಾಮ್(Instagram) ಪೋಸ್ಟ್‌ಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾರಮಾರಿ ಜಗಳ ನಡೆದಿದ್ದು, ಜಗಳವು ಭೀಕರ ಹತ್ಯೆಯೊಂದಿಗೆ(Maharashtra Horror) ಅಂತ್ಯವಾಗಿದೆ. ವ್ಯಕ್ತಿಯೊಬ್ಬ 17 ವರ್ಷದ ಬಾಲಕನನ್ನು ಅಮಾನೀಯವಾಗಿ ಕೊಂದಿದ್ದಾನೆ ಎಂದು ಪೊಲೀಸರು ಸೋಮವಾರ(ಫೆ.9) ತಿಳಿಸಿದ್ದಾರೆ. ಹಿಂಗನ್‌ಘಾಟ್( Hinganghat) ಪ್ರದೇಶದ ಪಿಂಪಾಲ್‌ಗಾಂವ್( Pimpalgaon) ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಸುಮಾರು ಒಂದು ತಿಂಗಳ ಹಿಂದೆ ಹತ್ಯೆಗೀಡಾದ ಹಿಮಾಂಶು ಚಿಮ್ನಿ(Himanshu Chimney) ಮತ್ತು ಆರೋಪಿ ಮಾನವ್ ಜುಮ್ನಾಕೆ (21) ಸಾಮಾಜಿಕ ಜಾಲತಾಣದ ಬಳಕೆದಾರರಿಂದ ವೋಟಿಂಗ್‌ಗಾಗಿ ಇನ್‌ಸ್ಟಾಗ್ರಾಮ್ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ವಿಷಯವಾಗಿ ಇಬ್ಬರ ನಡುವೆಯೂ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಕೊಲೆ ನಡೆದಿದೆ. ಹಿಂಗನ್‌ಘಾಟ್(Hinganghat) ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಇನ್ಸ್ಟಾಗ್ರಾಂ ಪೋಸ್ಟ್ ಕುರಿತು ಹೆಚ್ಚಿನ ವಿವರಗಳನ್ನು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Kolkata Horrror: 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ: ಆರೋಪಿ ಅರೆಸ್ಟ್!

ಕೊಲೆಗೈದ ವ್ಯಕ್ತಿಗಿಂತ ಬಾಲಕನ ಪೋಸ್ಟ್‌ಗೆ ಅತಿಹೆಚ್ಚು ವೋಟ್‌ ಬಂದಿದೆ. ಈ ಸಂಬಂಧ ಮಾತನಾಡಲು ಇಬ್ಬರೂ ಭೇಟಿಯಾಗಿದ್ದಾರೆ. ಈ ಮಧ್ಯೆ ತೀವ್ರ ಗಲಾಟೆಯಾಗಿದೆ. ಜಗಳವೂ ತಾರಕಕ್ಕೇರಿದೆ. ಸಾಕಷ್ಟು ಮಾತಿನ ಚಕಮಕಿಯೂ ನಡೆದಿದೆ. ಆರೋಪಿ ತನ್ನ ಸ್ನೇಹಿತನೊಂದಿಗೆ ಸೇರಿ ಬಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.