ಕಚೇರಿಯಲ್ಲೇ ಮಾಜಿ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಭಗ್ನ ಪ್ರೇಮಿ; ಬಳಿಕ ತಾನೂ ಆತ್ಮಹತ್ಯೆಗೆ ಯತ್ನ
Crime News: ಯುವತಿಯೊಬ್ಬಳನ್ನು ಆಕೆಯ ಮಾಜಿ ಗೆಳೆಯ ಮತ್ತು ಸಹೋದ್ಯೋಗಿ ಇರಿದು ಕೊಲೆ ಮಾಡಿರುವ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು ಪಟಿಯಾಲ ನಿವಾಸಿ 30 ವರ್ಷದ ಡಿಂಪಲ್ ಎಂದು ಗುರುತಿಸಲಾಗಿದೆ. ಯುವತಿಯನ್ನು ಕೊಂದು, ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮಾಜಿ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರೇಮಿ -
ಚಂಡೀಗಢ, ಜೂ.5: ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಆಕೆಯ ಮಾಜಿ ಗೆಳೆಯ ಮತ್ತು ಸಹೋದ್ಯೋಗಿ ಇರಿದು ಕೊಲೆ ಮಾಡಿರುವ ಘಟನೆ ಪಂಜಾಬ್‌ನ (Punjab) ಮೊಹಾಲಿಯಲ್ಲಿ ನಡೆದಿದೆ. ನಂತರ (Crime News).ಅವನು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ (ಜೂ.4) ಸಂಜೆ ಕಂಪನಿಯ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮೃತಪಟ್ಟ ಯುವತಿಯನ್ನು ಪಟಿಯಾಲ ನಿವಾಸಿ 30 ವರ್ಷದ ಡಿಂಪಲ್ ಎಂದು ಗುರುತಿಸಲಾಗಿದೆ. ಆರೋಪಿ ಹ್ಯಾರಿ ಎಂದೂ ಕರೆಯಲ್ಪಡುವ ಹರ್ಜಿಂದರ್ ಸಿಂಗ್ ಮಾನ್ (39) ಮೂರು ವರ್ಷಗಳಿಗೂ ಹೆಚ್ಚು ಕಾಲ ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಚೂರಿ ಇರಿತದ ಘಟನೆ ಕಚೇರಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆರೋಪಿ ಹಾಗೂ ಕೊಲೆಯಾದ ಯುವತಿ ಇಬ್ಬರೂ ಖಾಸಗಿ ಕೊರಿಯರ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿಗಳಾಗಿ ಆತ್ಮೀಯತೆ ಬೆಳೆಸಿಕೊಂಡಿದ್ದ ಅವರು ಕೊನೆಗೆ ಒಬ್ಬರನ್ನೊಬ್ಬರು ಪ್ರೀತಿಸಲು ಪ್ರಾರಂಭಿಸಿದರು. ಆದರೆ, ಇತ್ತೀಚೆಗಷ್ಟೇ ತಮ್ಮ ಪ್ರೇಮವನ್ನು ಕೊನೆಗೊಳಿಸಿದ್ದರು. ಇದರಿಂದ ಹರ್ಜಿಂದರ್ ಬಹಳ ಬೇಸರ ಹೊಂದಿದ್ದ ಎನ್ನಲಾಗಿದೆ. ಡಿಂಪಲ್ ಜೊತೆ ರಾಜಿ ಮಾಡಿಕೊಳ್ಳಲು ಅನೇಕ ಬಾರಿ ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ಆಸ್ತಿ ಕಲಹಕ್ಕೆ ಕುಟುಂಬವೇ ನಾಶ: ಪೋಷಕರು, ಸೋದರಿಯನ್ನು ಹತ್ಯೆ ಮಾಡಿದ ವ್ಯಕ್ತಿ, ಕೊನೆಗೆ ಸ್ನೇಹಿತನಿಂದಲೇ ಕೊಲೆ
ಆದರೆ, ಹರ್ಜಿಂದರ್ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾದವು. ಇದರಿಂದ ಅವನು ತುಂಬಾ ದುಃಖಿತನಾಗಿದ್ದ ಎನ್ನಲಾಗಿದೆ. ಹೀಗಾಗಿ ಕೋಪದ ಭರದಲ್ಲಿ ಮಾಜಿ ಪ್ರಿಯತಮೆಯ ಹತ್ಯೆ ಮಾಡಿದ್ದಾನೆ. ಮೊಹಾಲಿಯಲ್ಲಿರುವ ಕಂಪನಿ ಕಚೇರಿ ಆವರಣದಲ್ಲಿ ಗುರುವಾರ (ಜೂ.4) ಸಂಜೆ ತಡವಾಗಿ ದಾಳಿ ನಡೆದಿದೆ. ದಾಳಿಗೂ ಮುನ್ನ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಹರ್ಜಿಂದರ್ ಡಿಂಪಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಕೆಲವು ಸಹೋದ್ಯೋಗಿಗಳು ದಾಳಿಯನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಕೆಗೆ ಹಲವು ಬಾರಿ ಇರಿದಿದ್ದಾನೆ.
ಡಿಂಪಲ್ ಅನ್ನು ಹತ್ಯೆ ಮಾಡಿದ ನಂತರ, ಹರ್ಜಿಂದರ್ ಕೂಡ ತನ್ನನ್ನು ತಾನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದನು. ಆದರೆ, ಅವನು ಬದುಕುಳಿದನು. ಹಠಾತ್ ಆದಂತಹ ಘಟನೆಯಿಂದ ಕಚೇರಿಯಲ್ಲಿದ್ದ ನೌಕರರು ಆಘಾತಕ್ಕೊಳಗಾದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಡಿಂಪಲ್ ಮತ್ತು ಹರ್ಜಿಂದರ್ ಅವರನ್ನು ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವೈದ್ಯರು ಡಿಂಪಲ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಆದರೆ ಹರ್ಜಿಂದರ್ ಸ್ಥಿತಿ ಗಂಭೀರವಾಗಿದ್ದು, ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ವಿವರವಾದ ತನಿಖೆ ಆರಂಭಿಸಿದ್ದಾರೆ. ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಆಕೆಯ ಪೋಷಕರು ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಮುಂದಿನ ಕಾನೂನು ಕ್ರಮಗಳು ಮುಂದುವರಿಯುತ್ತವೆ ಎಂದು ಅವರು ಹೇಳಿದರು. ತನಿಖಾಧಿಕಾರಿಗಳು ಅಪರಾಧದ ಸ್ಥಳವನ್ನು ಸೀಲ್ ಮಾಡಿ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಕಚೇರಿ ಆವರಣದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.