ಪೂಂಚ್‌ನಲ್ಲಿ ಗಡಿ ದಾಟಿ ಬಂದ ಪಿಒಕೆಯ ಅಪ್ರಾಪ್ತನ ಬಂಧನ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಪ್ರಾಪ್ತನೊಬ್ಬ ಪೂಂಚ್‌ನಲ್ಲಿ ಭಾರತದ ಗಡಿಯಲ್ಲಿ ಒಳನುಸುಳಿ ಬಂದಿದ್ದು, ಆತನನ್ನು ಸೂಕ್ಷ್ಮ ಗಡಿ ವಲಯದಲ್ಲಿ ಭದ್ರತಾ ಪಡೆಗಳು ಬಂಧಿಸಿದೆ. ಅಪ್ರಾಪ್ತ ಯುವಕನನ್ನು ಪಿಒಕೆಯ ಟೆಟ್ರಿನೋಟ್ ನಿವಾಸಿ ಮೊಹಮ್ಮದ್ ಶರೀಫ್ ಅವರ ಮಗ ಜಾವಿದ್ ಅಲಿ ಎಂದು ಗುರುತಿಸಲಾಗಿದೆ. ಗಡಿ ದಾಟಿ ಬಂದ ಕಾರಣವನ್ನು ತಿಳಿಯಲು ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಪೂಂಚ್: ಅಪ್ರಾಪ್ತ ಯುವಕನೊಬ್ಬ (PoK minor boy) ಭಾರತದ ಗಡಿ ದಾಟಿ ಬಂದಿದ್ದು, ಆತನನ್ನು ಬಂಧಿಸಿರುವ ಭದ್ರತಾ ಪಡೆಗಳು ತೀವ್ರ ವಿಚಾರಣೆ ನಡೆಸುತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (Pakistan-occupied Kashmir) ಅಪ್ರಾಪ್ತ ಜಾವಿದ್ ಅಲಿ ಎಂಬಾತ ಪೂಂಚ್‌ನಲ್ಲಿ (Poonch) ಭಾರತದ ಗಡಿಯಲ್ಲಿ ಒಳನುಸುಳಿ ಬಂದಿದ್ದಾನೆ. ತಕ್ಷಣವೇ ಆತನನ್ನು ಸೂಕ್ಷ್ಮ ಗಡಿ ವಲಯದಲ್ಲಿ ಭದ್ರತಾ ಪಡೆಗಳು (security forces) ಬಂಧಿಸಿದೆ. ಜಾವಿದ್ ಪಿಒಕೆಯ ಟೆಟ್ರಿನೋಟ್ ನಿವಾಸಿ ಮೊಹಮ್ಮದ್ ಶರೀಫ್ ಅವರ ಮಗ ಎಂದು ಗುರುತಿಸಲಾಗಿದೆ. ಆತ ಗಡಿ ದಾಟಿ ಬಂದಿರುವ ಕಾರಣ ಪತ್ತೆ ಹಚ್ಚಲು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿವಾಸಿ ಜಾವಿದ್ ಅಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಗಡಿ ದಾಟಿದ ಒಳಗೆ ಬಂದಿದ್ದಾನೆ. ತಾನು ಸ್ನಾನ ಮಾಡಲು ಹತ್ತಿರದ ನದಿಗೆ ಹೋಗಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿರುವುದಾಗಿ ಆತ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ನೆಹರು ಹಿಂದಿಕ್ಕೆ ಐತಿಹಾಸಿಕ ಸಾಧನೆ ಮಾಡಿದ ಮೋದಿ; ಭಾರತದ ದೀರ್ಘಕಾಲ ಪ್ರಧಾನಿಯಾಗಿ ಆಡಳಿತ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸಲೋತ್ರಿ ಪ್ರದೇಶದಲ್ಲಿ ಜಾವಿದ್ ಭಾರತದ ಕಡೆಗೆ ಗಡಿ ದಾಟಿ ಬಂದಿದ್ದು, ಆತನ ಚಲನವಲನ ಗಮನಿಸಿದ ಸೂಕ್ಷ್ಮ ಗಡಿ ವಲಯದಲ್ಲಿ ಭದ್ರತಾ ಪಡೆಗಳು ಆತನನ್ನು ವಶಕ್ಕೆ ಪಡೆಯಿತು.
ಪ್ರಾಥಮಿಕ ವಿಚಾರಣೆಯಲ್ಲಿ ಆತ ನದಿಗೆ ಸ್ನಾನ ಮಾಡಲು ಹೋಗಿ ನಿಯಂತ್ರಣ ರೇಖೆ ದಾಟಿರುವುದಾಗಿ ತಿಳಿದು ಬಂದಿದ್ದರೂ ಭದ್ರತಾ ಸಂಸ್ಥೆಗಳು ಎಚ್ಚರಿಕೆಯಿಂದ ಇದನ್ನು ಗಮನಿಸುತ್ತಿವೆ. ಯುವಕನ ನಿಜವಾದ ಉದ್ದೇಶಗಳನ್ನು ಖಚಿತಪಡಿಸಿಕೊಳ್ಳಲು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೈನಿಕರ ಜಾಗರೂಕತೆಯನ್ನು ಪರೀಕ್ಷಿಸಲು ಈ ಹಿಂದೆಯು ಹಲವು ಬಾರಿ ಪಾಕಿಸ್ತಾನ ಸೇನೆಯು ಅಪ್ರಾಪ್ತರನ್ನು ಕಳುಹಿಸಿದೆ. ಇದರ ಮುಖ್ಯ ಉದ್ದೇಶ ಭಯೋತ್ಪಾದಕರನ್ನು ಭಾರತೀಯ ಪ್ರದೇಶಕ್ಕೆ ಕಳುಹಿಸುವುದಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.
ಯುವಕ ತಿಳಿಯದೇ ಗಡಿ ದಾಟಿ ಬಂದಿದ್ದರೆ 24 ಗಂಟೆಗಳ ಆತನನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಇದರಿಂದ ಯುವಕ ತನ್ನ ಕುಟುಂಬವನ್ನು ಸೇರಬಹುದು. ಆದರೆ ಇದಕ್ಕೂ ಮೊದಲು ಸರಿಯಾದ ವಿಚಾರಣೆ ಮತ್ತು ತನಿಖೆಯನ್ನು ನಡೆಸಲಾಗುತ್ತದೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಡ್ಡ ಮತದಾನದ ಭೀತಿ; ಶಾಸಕರು ಬೆಂಗಳೂರಿಗೆ ಶಿಫ್ಟ್!
ಈ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳನ್ನು ತೀವ್ರಗೊಳಿಸಲು ಭಯೋತ್ಪಾದಕ ಗುಂಪುಗಳು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅನೇಕ ಲಾಂಚ್ ಪ್ಯಾಡ್‌ಗಳಲ್ಲಿ ಕಾಯುತ್ತಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.