ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್ ಥೈಲ್ಯಾಂಡ್‌ನಿಂದ ಭಾರತಕ್ಕೆ ಗಡೀಪಾರು

gangster Sahil Chauhan: ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್‌ನನ್ನು ಥೈಲ್ಯಾಂಡ್‌ನಿಂದ ಗಡೀಪಾರು ಮಾಡಿದ ನಂತರ ಭಾರತಕ್ಕೆ ಕರೆತರಲಾಗುತ್ತಿದೆ. ಸಂಘಟಿತ ಅಪರಾಧಗಳಲ್ಲಿ ಕುಖ್ಯಾತ ವ್ಯಕ್ತಿಯಾಗಿರುವ ಚೌಹಾಣ್, ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೂ ಬೇಕಾಗಿದ್ದಾನೆ.

ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಥೈಲ್ಯಾಂಡ್‌ನಿಂದ ಗಡೀಪಾರು

ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್ (ಸಂಗ್ರಹ ಚಿತ್ರ) -

Priyanka P
Priyanka P Apr 11, 2026 12:39 PM

ನವದೆಹಲಿ, ಏ.11: ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್‌ನನ್ನು ಥೈಲ್ಯಾಂಡ್‌ನಿಂದ (Thailand) ಗಡೀಪಾರು ಮಾಡಿದ ನಂತರ ಭಾರತಕ್ಕೆ ಕರೆತರಲಾಗುತ್ತಿದೆ. ಆರೋಪಿ ಚೌಹಾಣ್‌ನನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Indira Gandhi International Airport) ಕರೆತರಲಾಗುತ್ತಿದ್ದು, ಶನಿವಾರ (ಏ.11) ಇಳಿದ ತಕ್ಷಣ ಹರಿಯಾಣ ವಿಶೇಷ ಕಾರ್ಯಪಡೆ (STF) ಅವನನ್ನು ವಶಕ್ಕೆ ಪಡೆಯಲಿದೆ (crime news).

ಸಂಘಟಿತ ಅಪರಾಧಗಳಲ್ಲಿ ಕುಖ್ಯಾತ ವ್ಯಕ್ತಿಯಾಗಿರುವ ಚೌಹಾಣ್, ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೂ ಬೇಕಾಗಿದ್ದಾನೆ. ಪ್ರಸ್ತುತ ಹರಿಯಾಣ ಜೈಲಿನಲ್ಲಿರುವ ಕೌಶಲ್ ಚೌಧರಿ ನೇತೃತ್ವದ ಗ್ಯಾಂಗ್‌ನ ಪ್ರಮುಖ ಸದಸ್ಯನೆಂದು ಹೇಳಲಾಗಿದೆ. ಚೌಹಾಣ್ ವಿದೇಶದಿಂದ ಕಾರ್ಯನಿರ್ವಹಿಸುತ್ತಾ ಭಾರತದಲ್ಲಿ ಹಲವಾರು ಸುಪಾರಿಗಳನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾನೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಕೇಂದ್ರೀಯ ಸಂಸ್ಥೆಗಳು ಮತ್ತು ಹರಿಯಾಣ ಪೊಲೀಸರ ಸಂಘಟಿತ ಪ್ರಯತ್ನಗಳ ನಂತರ ಚೌಹಾಣ್ ಅವರನ್ನು ಇತ್ತೀಚೆಗೆ ವಿದೇಶದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಪರಾಧ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಅನುಮಾನ ಇತ್ತು. ಈ ಜಾಲಗಳು ಸಾಮಾನ್ಯವಾಗಿ ಡ್ರಗ್ ಸಾಗಣೆ. ಕೊಲೆ, ಭಯೋತ್ಪಾದನೆ ಇತ್ಯಾದಿಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರುತ್ತವೆ.

Lamborghini case: ಲ್ಯಾಂಬೊರ್ಗಿನಿ ಕಾರಿನಲ್ಲಿಯೇ ಹೋಗಿ ರಸ್ತೆ ಕಸ ಗುಡಿಸಿ ಬನ್ನಿ: ಆರೋಪಿಗೆ ಹೈಕೋರ್ಟ್‌ ಸೂಚನೆ

ಚೌಹಾಣ್ ವಿದೇಶದಲ್ಲಿ ಅಡಗಿಕೊಂಡಿದ್ದನೆಂದು ತಿಳಿದುಬಂದಿತು. ಸ್ಥಳೀಯ ಅಧಿಕಾರಿಗಳು ಭಾರತೀಯ ಸಂಸ್ಥೆಗಳ ಮಾಹಿತಿಯ ಆಧಾರದ ಮೇಲೆ ಅವನನ್ನು ಬಂಧಿಸಿ, ಭಾರತಕ್ಕೆ ಹಸ್ತಾಂತರ ಮಾಡಿದರು. ಆರೋಪಿಯ ಆಗಮನಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಸ್ಟಡಿಗೆ ತೆಗೆದುಕೊಂಡ ನಂತರ, ಚೌಹಾಣ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ. ಹೆಚ್ಚಿನ ವಿಚಾರಣೆಗಾಗಿ ಹರಿಯಾಣಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ.

ಈ ಹಸ್ತಾಂತರವನ್ನು ಭಾರತೀಯ ಅಧಿಕಾರಿಗಳ ಪ್ರಮುಖ ಯಶಸ್ಸಾಗಿ ಪರಿಗಣಿಸಲಾಗುತ್ತಿದೆ. ಇದು ಸಂಘಟಿತ ಅಪರಾಧಗಳನ್ನು ಎದುರಿಸುವಲ್ಲಿ ಹಾಗೂ ಪರಾರಿಯಾಗಿರುವ ಆರೋಪಿಗಳನ್ನು ನ್ಯಾಯಕ್ಕೆ ಒಳಪಡಿಸುವಲ್ಲಿ ಅಂತಾರಾಷ್ಟ್ರೀಯ ಸಹಕಾರ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರಿನಲ್ಲಿ ಝಾಂಬಿ ಡ್ರಗ್ ಹಾವಳಿ ಇಲ್ಲ

ಬೆಂಗಳೂರಿನಲ್ಲಿ ‘ಝಾಂಬಿ ಡ್ರಗ್’ ಹಾವಳಿ ಶುರುವಾಗಿದೆ ಎಂದು ವೈರಲ್ ಆಗಿದ್ದ ವಿಡಿಯೊ ಸಂಪೂರ್ಣ ಆಧಾರರಹಿತವಾಗಿದ್ದು, ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ ಯುವಕನ ವಿಡಿಯೊವೊಂದು ‘ಝಾಂಬಿ ಡ್ರಗ್’ ಪ್ರಭಾವ ಎಂದು ಬಿಂಬಿತವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯುಕ್ತರು, ವಿಡಿಯೊದಲ್ಲಿದ್ದ ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆತ ಯಾವುದೇ ಮಾದಕ ದ್ರವ್ಯ ಸೇವಿಸಿಲ್ಲ ಎಂಬುದು ದೃಢಪಟ್ಟಿದೆ. ಆತನಿಗೆ ಆರ್ಥ್ರೈಟಿಸ್ ಇದ್ದು, ಆಲ್ಕೋಹಾಲ್‌ ಜತೆಗೆ ಪೇನ್‌ಕಿಲ್ಲರ್ ಮಾತ್ರೆ ಸೇವಿಸಿದ್ದರಿಂದ ನಶೆಯಿಂದ ಸಮತೋಲನ ತಪ್ಪಿದ್ದಾನೆ. ಆದರೆ, ಕೇವಲ ಊಹೆಗಳ ಮೇಲೆ ಒಬ್ಬ ವ್ಯಕ್ತಿಯ ಬಗ್ಗೆ ಅಪಪ್ರಚಾರ ಮಾಡುವುದು ಅಪರಾಧ ಎಂದು ತಿಳಿಸಿದ್ದಾರೆ.