ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಹೆತ್ತವರು ಮತ್ತು ಸಹೋದರನನ್ನು ಕೊಂದು ಯುವಕ ಎಸ್ಕೇಪ್‌?

ಪೋಷಕರು ಮತ್ತು ಸಹೋದರನನ್ನು ಕೊಂದು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥ ಯುವಕ ತನ್ನ ಪೋಷಕರು ಮತ್ತು ಸಹೋದರನನ್ನು ಹತ್ಯೆ (Murder case) ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಮೂವರ ಮೃತದೇಹಗಳನ್ನು ಪೊಲೀಸರು ಪತ್ತೆ ಹಚ್ಚಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ.

ಹೆತ್ತವರನ್ನು ಕೊಂದು ಓಡಿ ಹೋದನೆ ಮಗ?

ನವದೆಹಲಿ: ಒಂದೇ ಕುಟುಂಬದ ಮೂವರ ಶವ ಮನೆಯಲ್ಲಿ (Murder Case) ಪತ್ತೆಯಾಗಿದ್ದು, ಅವರ ಕಿರಿಯ ಮಗ ನಾಪತ್ತೆಯಾಗಿರುವ ಘಟನೆ ದೆಹಲಿಯ (Delhi crime) ಮೈದಾನಗಢಿಯಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥನಾಗಿರುವ ದಂಪತಿಯ ಕಿರಿಯ ಮಗ ನಾಪತ್ತೆಯಾಗಿದ್ದಾನೆ. ಸುಮಾರು 45 ವರ್ಷದ ಪ್ರೇಮ್ ಸಿಂಗ್, ಅವರ ಪತ್ನಿ 40 ವರ್ಷದ ರಜನಿ, ಅವರ ಹಿರಿಯ ಮಗ 24 ವರ್ಷದ ಹೃತಿಕ್ ಮೃತದೇಹಗಳು ಮೈದಾನಗಢಿಯಲ್ಲಿರುವ ಅವರ ಮನೆಯೊಳಗೆ (Delhi Triple Murde case) ಪತ್ತೆಯಾಗಿದೆ. ಅವರ ಎರಡನೇ ಮಗ ಸಿದ್ದಾರ್ಥ್ ನಾಪತ್ತೆಯಾಗಿದ್ದಾನೆ.

ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆಯ ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ಮೂರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರೇಮ್ ಸಿಂಗ್ ಮತ್ತು ಅವರ ಮಗ ಹೃತಿಕ್ ಮೃತದೇಹಗಳು ಮನೆಯ ನೆಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಪ್ರೇಮ್ ಸಿಂಗ್ ಪತ್ನಿ ರಜನಿ ಅವರ ಮೃತದೇಹ ಮನೆಯ ಮೊದಲ ಮಹಡಿಯಲ್ಲಿ ಪತ್ತೆಯಾಗಿದೆ.

ದಂಪತಿಯ ಕಿರಿಯ ಮಗ ಸಿದ್ಧಾರ್ಥ್ ನಾಪತ್ತೆಯಾಗಿದ್ದಾನೆ. ಸಿದ್ಧಾರ್ಥ್ ಕಳೆದ ಹನ್ನೆರಡು ವರ್ಷಗಳಿಂದ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಾರ್ಥ್ ನ ದಾಖಲೆಗಳು, ಔಷಧಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಆಂಡ್ ಅಲೈಡ್ ಸೈನ್ಸಸ್ (IHBAS) ಮಾಹಿತಿ ಪ್ರಕಾರ ಆತ ಆಕ್ರಮಣಕಾರಿ ನಡವಳಿಕೆ ಮತ್ತು ಗೀಳು- ಕಂಪಲ್ಸಿವ್ ಡಿಸಾರ್ಡರ್‌ನಿಂದ ಬಳಲುತ್ತಿದ್ದ ಎನ್ನಲಾಗಿದೆ. ಸಿದ್ಧಾರ್ಥ್ ತನ್ನ ಪೋಷಕರು ಮತ್ತು ಸಹೋದರನಿಗೆ ಚಾಕುವಿನಿಂದ ಇರಿದು, ಇಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Malayalam Actress: ಅಶ್ಲೀಲ ಮೆಸೇಜ್‌... ಹೊಟೇಲ್‌ಗೆ ಬಾ ಎಂದು ಒತ್ತಾಯ- ಖ್ಯಾತ ನಟಿಗೆ ಕಾಂಗ್ರೆಸ್‌ ಮುಖಂಡನಿಂದ ಕಿರುಕುಳ

ಇನ್ನು ಮುಂದೆ ತಾನು ಮೈದಾನಗಢಿ ನಿವಾಸದಲ್ಲಿ ವಾಸಿಸುವುದಿಲ್ಲ ಎಂದು ಯಾರಿಗೋ ಆತ ಹೇಳಿದ್ದ ಎನ್ನಲಾಗಿದೆ. ಗ್ರಾಮದ ಪ್ರಧಾನ್ ಮೊಹಮ್ಮದ್ ಶಕೀಲ್ ಅಹ್ಮದ್ ಖಾನ್ ಮತ್ತು ಸಿದ್ದಾರ್ಥ್ ತಂದೆ ಮದ್ಯವ್ಯಸನಿಯಾಗಿದ್ದು, ಅವರು ಮನೆಯಲ್ಲಿ ಬಂದು ಆಗಾಗ್ಗೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಮನೆಯನ್ನು ಸೀಲ್ ಮಾಡಲಾಗಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಬೆರಳಚ್ಚು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸುತ್ತಿವೆ. ಸಿದ್ಧಾರ್ಥ್‌ಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.