ಅತ್ಯಂತ ನಿರೀಕ್ಷಿತ ರಿಯಲ್‌ಮೀ P4 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ
ಫ್ಲ್ಯಾಗ್‌ಶಿಪ್ ಮಟ್ಟದ ನವೀನತೆಗಳೊಂದಿಗೆ ರೂಪುಗೊಳಿಸಲಾದ ಈ ಸರಣಿಯನ್ನು ಯಾವುದೇ ರಾಜಿ ಯಿಲ್ಲದ ಆಲ್‌ರೌಂಡರ್ ಆಗಿ ಸ್ಥಾಪಿಸಲಾಗಿದೆ.ಇದು ಡುಯಲ್-ಚಿಪ್ ಶಕ್ತಿಯ ಪ್ರದರ್ಶನ, ಪ್ರೊ ಮಟ್ಟದ ಇಮೇಜಿಂಗ್, ಸಿನಿಮ್ಯಾಟಿಕ್ ಡಿಸ್ಪ್ಲೇಗಳು ಮತ್ತು ದಿನಪೂರ್ತಿ ಬರುವ ಬ್ಯಾಟರಿ ಸಾಮರ್ಥ್ಯವನ್ನು ಲಕ್ಷಾಂತರ ಯುವ ಬಳಕೆದಾರರ ಕೈಗೆ ತರುತ್ತಿದೆ.


ಬೆಂಗಳೂರು: ರಿಯಲ್‌ಮೀ ತನ್ನ ಅತ್ಯಂತ ನಿರೀಕ್ಷಿತ ರಿಯಲ್‌ಮೀ P4 ಸರಣಿಯ ರಿಯಲ್ ಮೀ P4 ಪ್ರೋ ಮತ್ತು ರಿಯಲ್ ಮೀ P4 ಫೋನ್ ಗಳನ್ನ ಬಿಡುಗಡೆ ಮಾಡಿವೆ.
ಫ್ಲ್ಯಾಗ್‌ಶಿಪ್ ಮಟ್ಟದ ನವೀನತೆಗಳೊಂದಿಗೆ ರೂಪುಗೊಳಿಸಲಾದ ಈ ಸರಣಿಯನ್ನು ಯಾವುದೇ ರಾಜಿಯಿಲ್ಲದ ಆಲ್‌ರೌಂಡರ್ ಆಗಿ ಸ್ಥಾಪಿಸಲಾಗಿದೆ.ಇದು ಡುಯಲ್-ಚಿಪ್ ಶಕ್ತಿಯ ಪ್ರದರ್ಶನ, ಪ್ರೊ ಮಟ್ಟದ ಇಮೇಜಿಂಗ್, ಸಿನಿಮ್ಯಾಟಿಕ್ ಡಿಸ್ಪ್ಲೇಗಳು ಮತ್ತು ದಿನಪೂರ್ತಿ ಬರುವ ಬ್ಯಾಟರಿ ಸಾಮರ್ಥ್ಯ ವನ್ನು ಲಕ್ಷಾಂತರ ಯುವ ಬಳಕೆದಾರರ ಕೈಗೆ ತರುತ್ತಿದೆ.
ಹೈಪರ್ ವಿಷನ್ AI ಚಿಪ್, ಸ್ನಾಪ್‌ಡ್ರ್ಯಾಗನ್ 7 ಜನರೇಷನ್ 4 ಪ್ರೊಸೆಸರ್, ಡ್ಯುಯಲ್ 50MP AI ಕ್ಯಾಮೆರಾಗಳು, 144Hz ಹೈಪರ್‌ಗ್ಲೋ ಅಮೋಲೆಡ್ ಡಿಸ್ಪ್ಲೇ ಮತ್ತು 7000mAh ಟೈಟನ್ ಬ್ಯಾಟರಿ ಸೇರಿದಂತೆ ಪ್ರಮುಖ ತಾಂತ್ರಿಕ ಸಾಧನೆಗಳೊಂದಿಗೆ, ರಿಯಲ್‌ಮೀ P4 ಸರಣಿ ಈ ಬೆಲೆ ವಿಭಾಗದಲ್ಲಿ ಬಳಕೆದಾರರಿಗೆ ಹೊಸ ನಿರೀಕ್ಷೆಯನ್ನೇ ಹುಟ್ಟು ಹಾಕಿದೆ. ಇದು ಕ್ರಮವಾಗಿ ₹20,000 ಮತ್ತು ₹15,000 ಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಡ್ಯುಯಲ್-ಚಿಪ್ ಸ್ಮಾರ್ಟ್‌ಫೋನ್ ಆಗಿ ಸ್ಥಾಪಿತವಾಗಿದೆ.
ಇದನ್ನೂ ಓದಿ: Roopa Gururaj Column: ಶಕ್ತಿ-ಯುಕ್ತಿ ಎರಡೂ ಮೇಳೈಸಿದ ಬಲರಾಮ
ಈ ಸಂದರ್ಭದಲ್ಲಿ ಮಾತನಾಡಿದ, ರಿಯಲ್‌ಮೀ ಇಂಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಫ್ರಾನ್ಸಿಸ್ ವಾಂಗ್, 30 ಸಾವಿರ ರೂ ಕೆಳಗಿನ ಬೆಲೆಯಲ್ಲಿ ಮೊದಲ ಬಾರಿಗೆ, ರಿಯಲ್ ಮೀ P4 ಸರಣಿ ಡುಯಲ್-ಚಿಪ್ ಆರ್ಕಿಟೆಕ್ಚರ್ ಪರಿಚಯಿಸುತ್ತಿದೆ, ಇದು ಫ್ಲ್ಯಾಗ್‌ಶಿಪ್ ಮಟ್ಟದ ಕಾರ್ಯಕ್ಷಮತೆ ಮತ್ತು ದೃಶ್ಯಾವಳಿ ಯನ್ನು ವಿಸ್ತೃತ ಬಳಕೆದಾರರಿಗೆ ನೀಡುತ್ತದೆ. ರಿಯಲ್ ಮೀ P4 ಪ್ರೋ ಸ್ನ್ಯಾಪ್ ಡ್ರಾಗನ್ 7 ಜನರೇಷನ್ 4 ಅನ್ನು ಪಿಕ್ಸೆಲ್ವರ್ಕ್ಸ್ ಜೊತೆಗೆ ಸಹ-ವಿಕಸಿತವಾದ ಸಮರ್ಪಿತ ಹೈಪರ್ ವಿಷನ್ AI ಚಿಪ್‌ಸೆಟ್‌ನೊಂದಿಗೆ ಸಂಯೋಜಿಸಿದೆ. ಈ ಆರ್ಕಿಟೆಕ್ಚರ್ ಬಹುಕಾರ್ಯದ ನಿರ್ವಹಣೆ, ಅತ್ಯುತ್ತಮ ಗೇಮಿಂಗ್ ಮತ್ತು AI ಚಾಲಿತ ಅನ್ವಯಿಕೆಗಳಿಗಾಗಿ ಅನನ್ಯ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.
ಸ್ನ್ಯಾಪ್‌ಡ್ರಾಗನ್ 7 ಜನರೇಷನ್ 4 CPU ಮತ್ತು GPU ತೀವ್ರವಾದ ಕೆಲಸಗಳನ್ನು ನಿರ್ವಹಿಸುವು ದನ್ನು ನೋಡಿಕೊಳ್ಳುತ್ತಿದ್ದು, ಹೈಪರ್ ವಿಷನ್ AI ಚಿಪ್ ನಿಖರ ಫ್ರೇಮ್ ತಯಾರಿಕೆ, AI ರೆಸಲ್ಯೂ ಶನ್ ಅಪ್‌ಸ್ಕೇಲಿಂಗ್ ಮತ್ತು ದೃಶ್ಯ ಸುಧಾರಣೆಯ ಮೇಲೆ ಗಮನಹರಿಸುತ್ತದೆ. ಈ ಕೆಲಸ ಹಂಚಿಕೆ ರಿಯಲ್ ಮೀ P4 ಪ್ರೋವು ದೀರ್ಘಕಾಲದ ಗೇಮಿಂಗ್ ಅವಧಿಗಳಲ್ಲಿ ತಾಪಮಾನ ಹೆಚ್ಚಾಗದೆ ಉನ್ನತ ಕಾರ್ಯಕ್ಷಮತೆಯನ್ನು ನಿರಂತರವಾಗಿ ಒದಗಿಸಲು ಮತ್ತು ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗಳಿಗೆ ಸಮಾನ ದೃಶ್ಯವನ್ನು ನೀಡಲು ಸಾಧ್ಯವಾಗಿಸುತ್ತದೆ.
ಹೈಪರ್‌ಗ್ಲೋ ಅಮೋಲೆಡ್ ಮೂಲಕ ಡಿಸ್ಪ್ಲೇಯಲ್ಲಿ ನೂತನ ಸಾಧನೆಗಳು
ರಿಯಲ್ ಮೀ P4 ಪ್ರೋ 144Hz ಹೈಪರ್‌ಗ್ಲೋ ಅಮೋಲೆಡ್ 4D ಕರ್ವ್+ ಡಿಸ್‌ಪ್ಲೇನ್ನು ಪರಿಚಯಿಸು ತ್ತದೆ, ಇದು ₹20,000 ಕೆಳಗಿನ ವಿಭಾಗದ ಅತ್ಯುತ್ತಮ 6500 ನಿಟ್ಸ್ ತೀವ್ರತೆಯನ್ನ ಹೊಂದಿದೆ. ಹೈ ಡೈನಾಮಿಕ್ ರೇಂಜ್ (HDR)10+ ಪ್ರಮಾಣೀಕರಣ, 1.07 ಬಿಲಿಯನ್ ಬಣ್ಣಗಳು ಮತ್ತು 100% DCI-P3 ಬಣ್ಣ ವ್ಯಾಪ್ತಿಯೊಂದಿಗೆ, ಇದು ವೃತ್ತಿಪರ ಮಾನಿಟರ್‌ಗಳಿಗೆ ಸಮಾನ ದೃಶ್ಯಮಟ್ಟವನ್ನು ಒದಗಿಸುತ್ತದೆ. ಸಾಮಾನ್ಯ 120Hz ಡಿಸ್‌ಪ್ಲೇಗಳಿಗಿಂತ 144Hz ರಿಫ್ರೆಶ್ ದರವು 20% ಹೆಚ್ಚು ಮೃದುಗೊಳಿಸುತ್ತದೆ, ಇದರಿಂದ ಗೇಮಿಂಗ್ ಮತ್ತು ಸ್ಕ್ರೋಲಿಂಗ್ ನಲ್ಲಿ ಬೇರೆ ಹೋಲಿಕೆಯಿಲ್ಲದ ನಯತೆಯನ್ನ ನೀಡುತ್ತದೆ. ಈ ಡಿಸ್‌ಪ್ಲೇ TÜV ರೈನ್ಲ್ಯಾಂಡ್ ಪ್ರಮಾಣೀಕರಣ ದಿಂದ ಕಣ್ಣುಗಳಿಗೆ ವಿನಮ್ರವಾಗಿದೆ, ಹಾರ್ಡ್‌ವೇರ್ ಮಟ್ಟದ ಕಡಿಮೆ ಬ್ಲೂ ಲೈಟ್ ರಕ್ಷಣೆಯನ್ನು ಹೊಂದಿದ್ದು, 4320Hz ಹೆಚ್ಚಿನ ಆವೃತ್ತಿಯ ಡಿಮ್ಮಿಂಗ್ ಮೂಲಕ ಒಳಗೂ ಹೊರಗೂ ಸ್ಪಷ್ಟತೆ ಮತ್ತು ಆರಾಮವನ್ನು ಒದಗಿಸುತ್ತದೆ.
ರಿಯಲ್ ಮೀ P4 6.77 ಇಂಚಿನ ಫುಲ್ ಹೈ ಡೆಫಿನಿಷನ್(FHD)+ ಹೈಪರ್‌ಗ್ಲೋ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 144Hz ರಿಫ್ರೆಶ್ ದರ ಮತ್ತು ಹೈ ಡೈನಾಮಿಕ್ ರೇಂಜ್ (HDR)10+ ಬೆಂಬಲವಿದೆ. 4500 ನಿಟ್ಸ್ ತೀವ್ರತೆಯನ್ನು ನೀಡುವ ಈ ಡಿಸ್‌ಪ್ಲೇ, ನೇರ ಸೂರ್ಯಪ್ರಕಾಶದಲ್ಲಿ ಅಥವಾ ರಾತ್ರಿ ವೇಳೆ ಬಳಸುವಾಗ ಒಳ್ಳೆಯ ದೃಶ್ಯಾವಳಿಯನ್ನು ಒದಗಿಸುತ್ತದೆ. 1.07 ಬಿಲಿಯನ್ ಬಣ್ಣಗಳು ಮತ್ತು 3840Hz ಪಲ್ಸ್ ವಿಡ್ತ್ ಮಾಡ್ಯುಲೇಷನ್ (PWM) ಡಿಮ್ಮಿಂಗ್ ಹೊಂದಿರುವ ಈ ಪ್ಯಾನಲ್, ಗೇಮ್ಸ್, ವೀಡಿಯೋಗಳು ಮತ್ತು ದೈನಂದಿನ ಬ್ರೌಸಿಂಗ್‌ಗೆ ಕಣ್ಣಿಗೆ ಆರಾಮವನ್ನು ಒದಗಿಸುತ್ತದೆ.
ಟೈಟನ್ ಬ್ಯಾಟರಿಗಳ ಮೂಲಕ ಶಕ್ತಿ ವೃದ್ಧಿ
ರಿಯಲ್ ಮೀ P4 ಪ್ರೋ ತನ್ನ ವಿಭಾಗದಲ್ಲಿ ಭಾರತದ ಅತ್ಯಂತ ಸಣ್ಣ ಮತ್ತು ತೂಕದ ಸ್ಮಾರ್ಟ್ ಫೋನ್ ಆಗಿದ್ದು, 7.68mm ದಪ್ಪದ 7000mAh ಬ್ಯಾಟರಿ ಹೊಂದಿದೆ. ಇದು 90 ಎಫ್ಪಿಎಸ್ ನಲ್ಲಿ ಬಿಜಿಎಮ್ಐ ಗೇಮ್‌ಪ್ಲೇ ಅನ್ನು 8+ ಗಂಟೆಗಳವರೆಗೆ ನೀಡಲು ಸಾಮರ್ಥ್ಯ ಹೊಂದಿದೆ.
ರಿಯಲ್ ಮೀ P4 ಕೂಡ ಇದೇ 7000mAh ಟೈಟನ್ ಬ್ಯಾಟರಿಯನ್ನು ಹೊಂದಿದ್ದು, 11 ಗಂಟೆಗಳ ನಿರಂತರ ಬಿಜಿಎಮ್ಐ ಗೇಮ್‌ಪ್ಲೇ ಒದಗಿಸುತ್ತದೆ. 80W ಅಲ್ಟ್ರಾ ಚಾರ್ಜ್ ಬೆಂಬಲದಿಂದ, 25 ನಿಮಿಷಗಳಲ್ಲಿ 50% ಚಾರ್ಜ್ನ್ನ ಪೂರ್ಣಗೊಳಿಸುತ್ತದೆ.
7000mm² ಏರ್‌ಫ್ಲೋ ವೇಪರ್ ಚೇಂಬರ್(VC) ಕೂಲಿಂಗ್ ಮೂಲಕ ತಾಪಮಾನ ನಿರ್ವಹಣೆ
ಎರಡು ಸಾಧನಗಳಲ್ಲೂ ತಮ್ಮ ವರ್ಗದಲ್ಲಿ ಅತಿ ದೊಡ್ಡ 7000mm² ಏರ್‌ಫ್ಲೋ ವೇಪರ್ ಚೇಂಬರ್ (VC) ಕೂಲಿಂಗ್ ಸಿಸ್ಟಂ ಇದೆ. ಈ ಸುಧಾರಿತ ವಾಪರ್ ಚೆಂಬರ್ ರಚನೆ, CPU ಕೋರ್ ತಾಪಮಾನ ವನ್ನು 20°C ಕ್ಕೆ ಕಡಿಮೆ ಇಟ್ಟು, ದೀರ್ಘಕಾಲದ ಗೇಮಿಂಗ್ ಅಥವಾ 4K ವೀಡಿಯೊ ರೆಕಾರ್ಡಿಂಗ್ ಸಮಯದಲ್ಲೂ ಕಾರ್ಯಕ್ಷಮತೆಯನ್ನು ನಿರಂತರವಾಗಿ ಕಾಪಾಡುತ್ತದೆ. ಅಧಿಕ ತಾಪಮಾನ ನಿಯಂತ್ರಣ ಪದರಗಳನ್ನು ಅತ್ಯಧಿಕ ಚಾಲಕ ಗ್ರಾಫೈಟ್ ಜೊತೆಗೆ ಸಂಯೋಜಿಸುವ ಮೂಲಕ, ದೀರ್ಘಕಾಲಿಕ ಆಟ, ಬಹುಕಾರ್ಯ ನಿರ್ವಹಣೆ ಅಥವಾ ಸೃಜನಾತ್ಮಕ ಕೆಲಸಗಳಲ್ಲಿ ರಿಯಲ್‌ಮೀ ಸ್ತಬ್ಧ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಪ್ರತಿದಿನದ ಫೋಟೋಗ್ರಫಿಗೆ ಫ್ಲಾಗ್‌ಶಿಪ್ ಡಿಎನ್ಎ
ರಿಯಲ್ ಮೀ P4 ಪ್ರೋ ತನ್ನ ವರ್ಗದಲ್ಲಿ ಮುಂಚೂಣಿಯಲ್ಲಿ ಇದ್ದು, ಮುಂದೆ ಮತ್ತು ಹಿಂಭಾಗ ದಲ್ಲಿ ಎರಡೂ ಕಡೆ 50MP AI ಕ್ಯಾಮೆರಾಗಳನ್ನು ಹೊಂದಿದೆ. ಇದರ ಫ್ಲಾಗ್‌ಶಿಪ್ ಮಟ್ಟದ 50MP ಸೊನಿ IMX896 ಹಿಂಭಾಗ ಸೆನ್ಸರ್ OIS ಜೊತೆಗೆ ಕ್ರಿಸ್ಪ್ ಪೋರ್ಟ್ರೆಟ್‌ಗಳು, ಕಡಿಮೆ ಬೆಳಕಿನ ಫೋಟೋಗಳು ಮತ್ತು ರಾತ್ರಿ ದೃಶ್ಯಗಳನ್ನು ಸ್ಪಷ್ಟತೆಯಿಂದ ಕ್ಯಾಪ್ಚರ್ ಮಾಡುತ್ತದೆ. ಮುಂದೆ 50MP OV50D ಕ್ಯಾಮೆರಾ ತೀಕ್ಷ್ಣ, ವಿವರವಾದ ಸೆಲ್ಫಿಗಳು ಮತ್ತು ವ್ಲಾಗ್ಗಳನ್ನು ಮಾಡಬಹುದು. ಎರಡೂ ಲೆನ್ಸ್‌ಗಳು ಡ್ಯುಯಲ್ 4K 60ಎಫ್ ಪಿಎಸ್ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುವುದರಿಂದ, ಕ್ರಿಯೇಟರ್‌ಗಳು ಯಾವುದೇ ಕೋನದಿಂದ ಗುಣಮಟ್ಟದ ವೀಡಿಯೊಗಳನ್ನು ಮಾಡಲು ಸಾಧ್ಯ ವಾಗುತ್ತದೆ.
ರಿಯಲ್ ಮೀ P4 50MP ಪ್ರಾಥಮಿಕ ಕ್ಯಾಮೆರಾಗೆ 8MP ಅಲ್ಟ್ರಾ ವೈಡ್ ಲೆನ್ಸನ್ನು ಜೋಡಿಸಿದೆ, ಇದು ವಿವರವಾದ ಕ್ಲೋಸ್-ಅಪ್ ಮತ್ತು ವ್ಯಾಪಕ ಲ್ಯಾಂಡ್‌ಸ್ಕೇಪ್‌ಗಳಿಗೆ ಸಹಾಯ ಮಾಡಲಿದೆ. ಅದರ 16MP ಸೊನಿ IMX480 ಮುಂಭಾಗದ ಕ್ಯಾಮೆರಾ ತೀಕ್ಷ್ಣ ಸೆಲ್ಫಿಗಳು ಮತ್ತು ಉತ್ತಮ ಗುಣಮಟ್ಟದ ವೀಡಿಯೊ ಕರೆಗಳನ್ನು ಒದಗಿಸುತ್ತದೆ, ವ್ಲಾಗ್ ಮಾಡಲು ಮತ್ತು ಕಸ್ಟಮೈಸ್ ಮಾಡಬಹುದಾದ ಫಿಲ್ಟರ್‌ಗಳಿಗೆ ಹೊಂದಿಕೊಂಡಿದೆ. 4K ವೀಡಿಯೊ ರೆಕಾರ್ಡಿಂಗ್‌ವರೆಗೆ ಸಾಮರ್ಥ್ಯವಿರುವ ರಿಯಲ್ ಮೀ P4, ವಿಭಿನ್ನ ಲೈಟಿಂಗ್ ಪರಿಸ್ಥಿತಿಗಳಲ್ಲಿ ಗುಣಮಟ್ಟದ ಫಲಿತಾಂಶಗಳನ್ನು ನೀಡುತ್ತದೆ, ಇದು ಕ್ರೀಯೇಟರ್ಸ್ಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಭರವಸೆ ನೀಡುವ ಸಂಗಾತಿಯಾಗಿದೆ.
ಅತ್ಯುತ್ತಮ AI ವೈಶಿಷ್ಟ್ಯಗಳು
ರಿಯಲ್ ಮೀ P4 ಪ್ರೋ ಮತ್ತು ರಿಯಲ್‌ಮೀ P4 5G ಎರಡೂ ಪ್ರತಿದಿನದ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿಯನ್ನು ಸುಧಾರಿಸಲು AI ಚಾಲಿತ ಮೋಡ್‌ಗಳನ್ನು ಬಳಸುತ್ತವೆ. ರಿಯಲ್ ಮೀ P4 ಸರಣಿಯಲ್ಲಿ AI ಎಡಿಟ್ ಜೀನಿ ಎಂಬ ಶಕ್ತಿಶಾಲಿ AI ಉಪಕರಣವಿದೆ, ಇದು ಫೋಟೋ ಸಂಪಾದನೆ ಯನ್ನು ಸುಲಭಗೊಳಿಸುತ್ತದೆ. ಸರಳ ಧ್ವನಿ ಆಜ್ಞೆಯಿಂದ, ಬಳಕೆದಾರರು ವಸ್ತುಗಳನ್ನು ಸೇರಿಸಬಹುದು, ಹಿನ್ನಲೆಯನ್ನು ಬದಲಾಯಿಸಬಹುದು, ಋತುಗಳನ್ನೂ ಹೊಂದಿಸಬಹುದು, ಸುಂದರತೆ ಹೆಚ್ಚಿಸಬಹುದು ಅಥವಾ ಅನಗತ್ಯ ಭಾಗಗಳನ್ನು ತಕ್ಷಣ ತೆಗೆದುಹಾಕಬಹುದು, ಹಾಗೂ ಸೃಜನಶೀಲತೆಯ ಮೇಲೆ ಗಮನಹರಿಸಬಹುದು. ಡಿವೈಸ್‌ನಲ್ಲಿಯೇ ಇರುವ AI ಇನ್ಸ್‌ಪಿರೇಶನ್ ವೈಶಿಷ್ಟ್ಯವು ಪ್ರತಿ ಫೋಟೋವನ್ನು ಸ್ವಯಂಚಾಲಿತವಾಗಿ ವಿಶ್ಲೇಷಿಸಿ, ಬೆಳಕು ಸರಿಹೊಂದಿಸುವುದು, ಧೂಳಿನ ಕಣಗಳನ್ನು ಕಡಿಮೆ ಮಾಡುವುದು, ಎಕ್ಸ್‌ಪೋಷರ್ ಸೂಕ್ತಗೊಳಿಸುವುದು, ಚರ್ಮದ ಬಣ್ಣವನ್ನು ನಯಗೊಳಿಸುವುದು ಮತ್ತು ಗ್ಲೇರ್ ತಪ್ಪಿಸುವಂತಹ ವೃತ್ತಿಪರ ಮಟ್ಟವನ್ನ ಒದಗಿಸುತ್ತದೆ.
AI ಟ್ರಾವೆಲ್ ಸ್ನ್ಯಾಪ್, AI ಲ್ಯಾಂಡ್‌ಸ್ಕೇಪ್, ಮತ್ತು AI ಸ್ನ್ಯಾಪ್ ಮೋಡ್ ನಂತಹ ವೈಶಿಷ್ಟ್ಯಗಳು ಫ್ರೇಮಿಂಗ್, ಬಣ್ಣ, ಮತ್ತು ಎಕ್ಸ್‌ಪೋಷರ್‌ನ್ನು ಬುದ್ಧಿವಂತಿಕೆಯಿಂದ ಆಪ್ಟಿಮೈಸ್ ಮಾಡುತ್ತವೆ. ಅಲ್ಟ್ರಾ ಸ್ಟೆಡಿ ಮೋಡ್ ಮತ್ತು AI ಮೋಶನ್ ಸ್ಟೆಬಿಲೈಜೇಶನ್ ಸಹ ಕಡಿಮೆ ಬೆಳಕಿನಲ್ಲಿ ಅಥವಾ ಚಲನೆಯಲ್ಲಿದ್ದರೂ ಸ್ಮೂತ್ ವೀಡಿಯೋ ಸೆರೆ ಹಿಡಿಯುತ್ತದೆ. ಇತ್ತೀಚಿನ AI ಉಪಕರಣಗಳಲ್ಲಿ, ಒಳಗೊಂಡಿರುವ ಡಾಕ್ಯುಮೆಂಟ್ ಸ್ಕ್ಯಾನರ್ ಕೂಡ ಇದೆ, ಇದು ಪುಟಗಳನ್ನು ಸ್ವಯಂಚಾಲಿತವಾಗಿ ಕತ್ತರಿಸಿ, ಸ್ವಚ್ಛವಾಗಿ ಹಂಚಬಹುದಾದ ರೂಪದಲ್ಲಿ ಸಿದ್ದಪಡಿಸುತ್ತದೆ. ಇದರೊಂದಿಗೆ, ರಿಯಲ್ ಮೀ P4 ಸರಣಿಯಲ್ಲಿ ಕ್ಯಾಮೆರಾಗಳು ಸೃಜನಶೀಲತೆ, ಕೆಲಸ, ಮತ್ತು ದಿನನಿತ್ಯದ ಬಳಕೆಗೆ ಬಹುಮುಖ ಸಾಧನಗಳಾಗಿವೆ. ಈ ಎಲ್ಲಾ ಉಪಕರಣಗಳ ಸಹಾಯದಿಂದ, ಯಾರಾದರೂ ಸಹ ಸುಲಭವಾಗಿ ಪ್ರೊಫೆಷನಲ್ ಲೆವೆಲ್ ಫೋಟೋಗಳನ್ನು ತಯಾರಿಸಿ, ಹಂಚಿಕೊಳ್ಳಬಹುದು. ಇದು ಮಿಡ್-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿಯೇ ಉತ್ತಮ ಎಡಿಟಿಂಗ್ ಅನುಭವವನ್ನು ನೀಡುತ್ತದೆ.
ವಿನ್ಯಾಸ
ರಿಯಲ್ ಮೀ P4 ಪ್ರೋ ಲಿವಿಂಗ್ ನೇಚರ್ ವಿನ್ಯಾಸವನ್ನು ಪರಿಚಯಿಸುತ್ತಿದೆ. ಇದು ನೈಸರ್ಗಿಕ ಪ್ರೇರಣೆ ಮತ್ತು ಆಧುನಿಕ ಕೌಶಲ್ಯದ ಸಮನ್ವಯವಾಗಿದೆ, ಆದ್ದರಿಂದ ಇದು ವಿಶಿಷ್ಟವೂ, ನೋಡಲು ಆಕರ್ಷಕವೂ ಆಗಿದೆ. ಇದರ ಹಿಂಭಾಗವು ಪ್ರೀಮಿಯಂ ಟೆಕ್-ವುಡ್ ಮೆಟೀರಿಯಲ್‌ನಿಂದ ತಯಾ ರಾಗಿದ್ದು, ಇದನ್ನು ಬಾಳಿಕೆ ಮತ್ತು ನಯವಾದ ಸ್ಪರ್ಶಕ್ಕಾಗಿ ಆಯ್ಕೆ ಮಾಡಲಾಗಿದೆ. ನಿಜವಾದ ಮರದ ನೈಸರ್ಗಿಕ ರಚನೆಯನ್ನ ಉಳಿಸಿಕೊಳ್ಳಲು ಪ್ರತಿಯೊಂದು ಮರದ ತಂತುವನ್ನ ಸೂಕ್ಷ್ಮವಾಗಿ ಮಾಡಲಾಗಿದೆ. ಇದು ಕೈಗೆ ನಯವಾಗಿರುತ್ತದೆ, ಸ್ಪಷ್ಟವಾದ ಸ್ಪರ್ಶವನ್ನು ನೀಡುವ ಮೇಲ್ಮೈ ಯಾಗಿದ್ದು, ಬೆಳಕು ಬದಲಾದಾಗ ದೃಷ್ಟಿಗೆ ಆಕರ್ಷಕವಾಗಿ ತೋರುತ್ತದೆ ಹಾಗೂ ದೈನಂದಿನ ಬಳಸುವಿಕೆಗೆ ಪ್ರತಿರೋಧಿಯಾಗಿರುತ್ತದೆ.
ಈ ವಿನ್ಯಾಸವು ನಿಸರ್ಗದಿಂದ ಪ್ರೇರಿತ ಮೂರು ರೀತಿಗಳಲ್ಲಿ ಲಭ್ಯವಿದೆ — ಬರ್ಚ್ ವುಡ್, ಇದು ಬೆಳಕು ಮತ್ತು ಬಿಸಿಲಿನಿಂದ ಬಿಸಿಯಾದ ತಂತುಗಳೊಂದಿಗೆ, ವಸಂತ ಋತುವಿನ ಆರಂಭದ ಕಾಡಿನ ಶಾಂತತೆಯನ್ನು ಸೂಚಿಸುತ್ತದೆ; ಡಾರ್ಕ್ ಓಕ್ ವುಡ್, ಇದು ಹಳೆಯ ಹಾರ್ಡ್‌ವುಡ್‌ನಿಂದ ಪ್ರೇರಿತ ವಾದ ಆಳವಾದ ಕಂದು ಬಣ್ಣವನ್ನ ಪ್ರತಿಬಿಂಬಿಸುತ್ತದೆ; ಮತ್ತು ಮಿಡ್‌ನೈಟ್ ಐವಿ, ಇದು ಸಮುದ್ರ ಮತ್ತು ಕಾಡು ಸೇರುವ ಸ್ಥಳದ ಮ್ಯೂಟ್ ಎಮರಾಲ್ಡ್ ಷೇಡ್ ಆಗಿದೆ. ಪ್ರತಿಯೊಂದು ರೂಪವೂ ವಿಶಿಷ್ಟ ಅನುಭವವನ್ನು ನೀಡುತ್ತದೆ, ನಿತ್ಯವಾದ ನೈಸರ್ಗಿಕ ಸೌಂದರ್ಯ ಮತ್ತು ಆಧುನಿಕ ತಂತ್ರಜ್ಞಾನದ ನಿಖರತೆಯನ್ನು ಸಮತೋಲಗೊಳಿಸುತ್ತಿದೆ.
ರಿಯಲ್ ಮೀ P4 ಮೆಟಲ್ ಹಾರ್ಟ್ ವಿನ್ಯಾಸವನ್ನು ಪರಿಚಯಿಸುತ್ತಿದೆ. ಇದು ಕೈಗಾರಿಕಾ ಎಂಜಿನಿಯರಿಂಗ್‌ನಿಂದ ಪ್ರೇರಿತವಾದ ಬಲಿಷ್ಠ ಹಾಗೂ ನಯವಾದ ಶೈಲಿಯಾಗಿದೆ. ಶುದ್ಧ ಲೋಹದ ರೇಖೆಗಳೊಂದಿಗೆ ಮತ್ತು ವಿಶೇಷವಾಗಿ ಸ್ಕ್ರೂ ಡೀಟೇಲ್‌ಗಳೊಂದಿಗೆ ಈ ವಿನ್ಯಾಸವು ಬಲ ಮತ್ತು ಶೈಲಿಯನ್ನು ಒಟ್ಟುಗೂಡಿಸಿದೆ. ಇದು ದೀರ್ಘಕಾಲ ಬಳಸುವ ಮತ್ತು ಸೌಂದರ್ಯ ಎರಡಕ್ಕೂ ಮಹತ್ವಕೊಡುವ ಬಳಕೆದಾರರಿಗೆ ಆಕರ್ಷಕವಾಗಿರುತ್ತದೆ. ಇದು ಮೂರು ಬಣ್ಣಗಳಲ್ಲಿ ಲಭ್ಯವಿದೆ, ಸ್ಟೀಲ್ ಗ್ರೇ, ಸ್ಲೀಕ್ ಮತ್ತು ಅಂಡರ್ ಸ್ಟೇಟೆಡ್; ಎಂಜಿನ್ ಬ್ಲೂ, ಬೋಲ್ಡ್ ಮತ್ತು ಡೈನಾಮಿಕ್; ಮತ್ತು ಫೋರ್ಜ್ ರೆಡ್, ಎನೆರ್ಜೆಟಿಕ್ ಮತ್ತು ಯೂತ್‌ಫುಲ್, ಪ್ರತಿಯೊಂದು ಬಣ್ಣವೂ ಸಾಧನಕ್ಕೆ ತನ್ನದೇ ಆದ ವಿಭಿನ್ನ ವ್ಯಕ್ತಿತ್ವ ನೀಡುತ್ತದೆ.
ಬೆಲೆ ಮತ್ತು ಲಭ್ಯತೆ
ರಿಯಲ್ ಮೀ P4 ಪ್ರೋ ಮೂರು ಸ್ಟೋರೆಜ್ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ: 8GB+128GB ₹19,999 ಕ್ಕೆ, 8GB+256GB ₹21,999 ಕ್ಕೆ, ಮತ್ತು 12GB+256GB ₹23,999 ಕ್ಕೆ. ಗ್ರಾಹಕರು ಈ ಸರಣಿ ಯ ಅತ್ಯಂತ ವಿಶಿಷ್ಟವಾದ ಲಾಂಚ್ ಆಫರ್ ಅನ್ನು ಆಗಸ್ಟ್ 27 ರಂದು ಮಧ್ಯಾಹ್ನ 12 ಗಂಟೆ ಯಿಂದ ರಾತ್ರಿ 12 ಗಂಟೆಯೊಳಗೆ ಮಾತ್ರ ಪಡೆಯಬಹುದು. ಇದೇ ದಿನ, ಮಧ್ಯಾಹ್ನ 12 ಗಂಟೆಗೆ ಮೊಟ್ಟಮೊದಲ ಬಾರಿಯ ಮಾರಾಟ ಆರಂಭವಾಗುತ್ತದೆ.
ರಿಯಲ್ ಮೀ P4 ಕೂಡ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ. 6GB+128GB ₹14,999 ಕ್ಕೆ, 8GB+128GB ₹15,999 ಕ್ಕೆ, ಮತ್ತು 8GB+256GB ₹17,999 ಕ್ಕೆ. ಅರ್ಲಿ ಬರ್ಡ್ ಸೇಲ್ ಆಗಸ್ಟ್ 20ರಂದು ಸಂಜೆ 6 ರಿಂದ 10 ಗಂಟೆಯವರೆಗೆ ನಡೆಯುತ್ತದೆ, ಮತ್ತು ಮೊದಲ ಅಧಿಕೃತ ಮಾರಾಟ ಆಗಸ್ಟ್ 25 ರಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗುತ್ತದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಫ್ಲಿಪ್ ಕಾಟ್, ರಿಯಲ್ ಮೀ.ಕಾಂ ಮತ್ತು ದೇಶದಾದ್ಯಾಂತ ಪ್ರಮುಖ ರೀಟೇಲ್ ಅಂಗಡಿಗಳಲ್ಲಿ ಲಭ್ಯವಿರುತ್ತವೆ.