ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ಹೆತ್ತ ತಂದೆತಾಯಿಗಳಿಗೆ ಗುರುಹಿರಿಯರಿಗೆ ವಿಧೇಯರಾಗಿ ಸಂಸ್ಕೃತಿ, ಸಂಸ್ಕಾರವಂತರಾಗಿ ಶಿಕ್ಷಣದಲ್ಲಿ ಸಾಧನೆ ಮಾಡಿ: ಶಾಸಕ ಸಿ.ಬಿ.ಸುರೇಶ್‌ ಬಾಬು

ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ವಿಷಯವಾರು ೪೦ಜನ ಶಿಕ್ಷಕರ ತಂಡವನ್ನು ಮಾಡಿದ್ದು ಈ ಶಿಕ್ಷಕರು ಪ್ರತಿಶಾಲೆಗಳಿಗೆ ಭೇಟಿ ನೀಡುವುದು ಈ ಪ್ರೇರಣ ಶಿಬಿರದಲ್ಲಿ ಪಾಲ್ಗೊಳ್ಳುವುದು, ಗೂಗಲ್ ಮೀಟ್ ಈ ಮೂಲಕ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಹಾಗೂ ವಿಷಯಗಳಲ್ಲಿ ಇರುವಂತಹ ಸಂದೇಹಗಳನ್ನು ಬಗೆಹರಿಸುವಂತಹ ಕೆಲಸವನ್ನು ಮಾಡುತ್ತಾರೆ

ತಂದೆ-ತಾಯಿ, ಗುರುಹಿರಿಯರಿಗೆ ವಿಧೇಯರಾಗಿ ಶಿಕ್ಷಣದಲ್ಲಿ ಸಾಧನೆ ಮಾಡಿ

Ashok Nayak Ashok Nayak Jul 22, 2025 1:42 AM

ಚಿಕ್ಕನಾಯಕನಹಳ್ಳಿ: ನಮ್ಮ ಎರಡು ಶೈಕ್ಷಣಿಕ ಜಿಲ್ಲೆಗಳಿಂದ ಚಿಕ್ಕನಾಯಕನಹಳ್ಳಿ ಎಸ್‌ಎಸ್‌ ಎಲ್‌ಸಿ ಪಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದ್ದು ಅದನ್ನು ರಾಜ್ಯಮಟ್ಟಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ. ಅದರಿಂದ ಉತ್ತಮವಾಗಿ ಅಧ್ಯಯನ ನಡೆಸಿ ಆಸೆ ಆಮಿಷಗಳಿಗೆ ಒಳಗಾಗದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಸಾಧನೆ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್‌ ಬಾಬು ತಿಳಿಸಿದರು.

ಪಟ್ಟಣದ ರೋಟರಿ ಶಾಲೆಯಲ್ಲಿ ಭಾನುವಾರ ಎಸ್.ಬಿ.ಚಾರಿಟಬಲ್ ಟ್ರಸ್ಟ್, ಶಾಲಾ ಶಿಕ್ಷಣ ಇಲಾಖೆ, ಮುಖ್ಯೋಪಾದ್ಯಯರು ಹಾಗೂ ಸಹ ಶಿಕ್ಷಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ೨೦೨೫-೨೬ನೇ ಸಾಲಿನ ೧೦ನೇತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಬದುಕಿನ ಎರಡು ತಿರುವುಗಳು ಈ ತಿರುವುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಆಸೆ, ಆಕಾಂಕ್ಷೆ, ಆಮೀಷಗಳಿಗೆ ಒಳಗಾಗದೇ ಶ್ರದ್ದೆಯಿಂದ ಅಭ್ಯಾಸ ಮಾಡಿ ಓದಿನ ಕಡೆ ಹೆಚ್ಚಿನ ಗಮನವನ್ನು ಇಟ್ಟು ಓದಿ ಸಾಧನೆ ಮಾಡಿದರೆ ಅವರ ಬದುಕನ್ನು ಅವರೇ ಕಟ್ಟಿಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಕಳೆದ ವರ್ಷದಿಂದ ಈ ಪ್ರೇರಣಾ ಶಿಬಿರವನ್ನು ಆಯೋಜಿಸಿದ್ದು ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಯಾವುದೇ ಭೇದಭಾವ ಮಾಡದೆ ಎಲ್ಲಾ ಶಾಲೆಯ ಮಕ್ಕಳು ನಮ್ಮ ಮಕ್ಕಳು ಎಂಬ ಭಾವನೆಯಿಂದ ಆಯ್ದ ೧೫೦ಮಕ್ಕಳಿಗೆ ವಿಶೇಷವಾಗಿ ಈ ಪ್ರೇರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: Roopa Gururaj Column: ಆಷಾಢ ಏಕಾದಶಿಯ ಮಹತ್ವ

ಕಳೆದ ವರ್ಷ ೧೨೦ಮಕ್ಕಳಲ್ಲಿ ೪೯ಜನ ವಿದ್ಯಾರ್ಥಿಗಳು ೬೨೫ಕ್ಕೆ ೬೦೦ಕ್ಕು ಹೆಚ್ಚು ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮಸ್ಥಾನಪಡೆಯುವಂತೆ ಮಾಡಿದ್ದಾರೆ. ಅದೇ ರೀತಿ ಈ ವರ್ಷವು ೧೫೦ಮಕ್ಕಳಲ್ಲಿ ೧೫೦ಮಕ್ಕಳು ೬೦೦ಕ್ಕು ಹೆಚ್ಚು ಅಂಕಗಳಿಸಿ ೬೨೫ಕ್ಕೆ ೬೨೫ಅಂಕಗಳನ್ನು ತೆಗೆಯುವ ಮೂಲಕ ರಾಜ್ಯಕ್ಕೆ ಪ್ರಥಮಸ್ಥಾನಪಡೆಯುವ ಮೂಲಕ ನಮ್ಮ ಶೈಕ್ಷಣಿಕ ಕನಸನ್ನು ನನಸು ಮಾಡುವ ಬಗ್ಗೆ ನನಗೆ ಭರವಸೆ ಇದ್ದು ಮಕ್ಕಳು ಇರುವಂತಹ ಸಂಪನ್ಮೂಲ ಶಿಕ್ಷಕರಿಂದ ಶಿಕ್ಷಣ ಪಡೆದು ಸಾಧನೆ ಮಾಡಿ ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ವಿಷಯವಾರು ೪೦ಜನ ಶಿಕ್ಷಕರ ತಂಡವನ್ನು ಮಾಡಿದ್ದು ಈ ಶಿಕ್ಷಕರು ಪ್ರತಿಶಾಲೆಗಳಿಗೆ ಭೇಟಿ ನೀಡುವುದು ಈ ಪ್ರೇರಣ ಶಿಬಿರದಲ್ಲಿ ಪಾಲ್ಗೊಳ್ಳುವುದು, ಗೂಗಲ್ ಮೀಟ್ ಈ ಮೂಲಕ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಹಾಗೂ ವಿಷಯಗಳಲ್ಲಿ ಇರುವಂತಹ ಸಂದೇಹಗಳನ್ನು ಬಗೆಹರಿಸುವಂತಹ ಕೆಲಸವನ್ನು ಮಾಡುತ್ತಾರೆ ಕಳೆದ ಬಾರಿ ೬ ಈ ರೀತಿಯ ಪ್ರೇರಣಾ ಶಿಬಿರಗಳನ್ನು ಮಾಡಿದ್ದು ಅದರಲ್ಲಿ ಯೋಗ ಹಾಗೂ ದ್ಯಾನ ಶಿಬಿರವನ್ನು ಮಾಡಿದ್ದೇವು.

ಈ ಶಿಬಿರಗಳಿಂದಲೇ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಯಿತು ಈ ನಿಟ್ಟಿನಲ್ಲಿ ಈ ಬಾರಿಯು ೧೫೦ ವಿದ್ಯಾರ್ಥಿಗಳಿಗೆ ಈ ಪ್ರೇರಣಾ ಶಿಬಿರವನ್ನು ಏರ್ಪಡಿಸಿದ್ದು ಇದಕ್ಕೆ ನಮಗೆ ನಮ್ಮ ಶಾಸಕರೇ ಪ್ರೇರಣೆಯಾಗಿದ್ದಾರೆ ಅವರ ಮಾರ್ಗದರ್ಶನದಲ್ಲೇ ನಮ್ಮ ತಾಲ್ಲೂಕಿನಲ್ಲಿ ಶೈಕ್ಷಣಿಕವಾಗಿ ಚಟುವಟಿ ಕೆಗಳು ನಡೆಯುತ್ತಿದ್ದು ಅವರು ಈ ಬಾರಿಯ ಎಲ್ಲಾ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಪ್ರಿಂಟ್‌ ಮಾಡಿಸಿ ನೀಡುವ ಬಗ್ಗೆ ತಿಳಿಸಿದ್ದಾರೆ ಇವರು ಮುಂದುವರೆದಂತೆ ಎಸ್‌ಎಸ್‌ಎಲ್‌ಸಿ ನಂತರದಲ್ಲಿ ಪಿಯುಸಿಯ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇಗಳಿಗೆ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಶಿಕ್ಷಣಕ್ಕೆ ಸಂಪೂರ್ಣ ತಮ್ಮನ್ನು ತಾವೇ ತೊಡಗಿಸಿಕೊಂಡು ಕರ್ತವ್ಯ ಮಾಡುತ್ತಿದ್ದಾರೆ. ಇವರ ಕನಸು ಶಿಕ್ಷಣದಲ್ಲಿ ನಮ್ಮ ಮಕ್ಕಳು ಸಾಧನೆ ಮಾಡಬೇಕೆಂದು ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮ ಹಾಗೂ ಮಕ್ಕಳ ಮೇಲಿದ್ದು ಅದನ್ನು ಈಡೇರಿಸುತ್ತೆವೆ ಎಂದರು. 

ರೋಟರಿ ಕಾಲೇಜಿನ ಪ್ರಾಂಶುಪಾಲ ಸತೀಶ್ ಮಾತನಾಡಿ, ದಕ್ಷಿಣ ಕನ್ನಡ ಭಾಗದಲ್ಲಿ ಮಾತ್ರವಲ್ಲದೆ ಶೈಕ್ಷಣಿಕವಾಗಿ ನಮ್ಮ ತಾಲ್ಲೂಕು ಸಹ ಸಾಧನೆ ಮಾಡುತ್ತದೆ ವಿದ್ಯಾರ್ಥಿಗಳು ಶ್ರದ್ದೆಯಿಂದ ಗಂಭೀರ ವಾಗಿ ಪರೀಕ್ಷೆಯನ್ನು ಪರಿಗಣಿಸಿ ಉತ್ತಮ ಸಾಧನೆ ಮಾಡಿದಾಗ ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ ಎಂದರು. 

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿ.ಡಿ.ಸುರೇಶ್, ಸಹಾಯಕ ಕೃಷಿ ನಿರ್ದೇಶಕ ಶಿವರಾಜ್‌ ಕುಮಾರ್ ಸೇರಿದಂತೆ ಇತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಳೆದ ಬಾರಿ ಈ ಹಿಂದಿನ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಕಿಶನ್‌ ಕುಮಾರ್, ಹಾಗೂ ಕುಸುಮ  ವಿದ್ಯಾರ್ಥಿಗಳಿಗೆ ಸರ್ಕಾರದವತಿಯಿಂದ ಲ್ಯಾಬ್‌ಟಾಪ್ ವಿತರಣೆಯನ್ನು ಮಾಡಲಾಯಿತು. 

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅದ್ಯಕ್ಷ ಎಮ್.ಎಲ್.ಮಲ್ಲಿಕಾರ್ಜುನಯ್ಯ ವಹಿಸಿದ್ದು ಈ ಸಂದರ್ಭದಲ್ಲಿ ರೋಟರಿ ಶಾಲೆಯ ಕಾರ್ಯದರ್ಶಿ ದೇವರಾಜು, ಅಕ್ಷರದಾಸೋಹದ ಅಧಿಕಾರಿ ಗವಿರಂಗಯ್ಯ, ತಾಲ್ಲೂಕು ಮುಖ್ಯಶಿಕ್ಷಕರಸಂಘದ ಅಧ್ಯಕ್ಷ ಗಂಗಾಧರಯ್ಯ, ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಡೆಲ್ ಅಧಿಕಾರಿ ಮಲ್ಲಿಕಾರ್ಜುನಯ್ಯ, ರೋಟರಿ ಸಂಸ್ಥೆ ಸದಸ್ಯ ಶಿವಣ್ಣ ಮಿಲ್ಟ್ರಿ, ಸೆರಿದಂತೆ ಇತರರು ಪಾಲ್ಗೊಂಡಿದ್ದರು.