POCSO Case: ಅಶ್ಲೀಲ ಮೆಸೇಜ್... ಅರೆನಗ್ನಳಾಗಿ ವಿಡಿಯೊ ಕಾಲ್! ಪೋಲಿ ಟೀಚರ್‌ಗೆ ತಕ್ಕ ಶಾಸ್ತಿ
ಹಲವು ದಿನಗಳಿಂದ ವಿದ್ಯಾರ್ಥಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ನವಿ ಮುಂಬೈಯ ಶಿಕ್ಷಕಿಯೊಬ್ಬಳು ಅರೆನಗ್ನಳಾಗಿ ವಿಡಿಯೊ ಕರೆ ಮಾಡಿದ ಬಗ್ಗೆ ಪೋಷಕರು ಪೊಲೀಸ್ ದೂರು ದಾಖಲಿಸಿದ್ದು, ಶಿಕ್ಷಕಿಯನ್ನು ಬಂಧಿಸಲಾಗಿದೆ. ಶಿಕ್ಷಕಿ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ FIR ಕೂಡ ದಾಖಲಿಸಲಾಗಿದೆ.


ಮುಂಬೈ: ಅರೆನಗ್ನಳಾಗಿ ವಿದ್ಯಾರ್ಥಿಗೆ ವಿಡಿಯೊ ಕರೆ ( semi-nude video chat) ಮಾಡಿದ ಶಿಕ್ಷಕಿಯನ್ನು ಬಂಧಿಸಲಾಗಿದ್ದು, (Teacher Arrested) ಮಕ್ಕಳ ರಕ್ಷಣೆ ( POCSO ) ಕಾಯ್ದೆಯಡಿಯಲ್ಲಿ (Children from Sexual Offences Act) ಎಫ್‌ಐಆರ್ (FIR) ದಾಖಲಿಸಲಾಗಿದೆ. ನವಿ ಮುಂಬೈಯ (Navi Mumbai) ಶಿಕ್ಷಕಿಯೊಬ್ಬಳು ವಿದ್ಯಾರ್ಥಿಗೆ ಅರೆ ನಗ್ನ ಸ್ಥಿತಿಯಲ್ಲಿ ಕರೆ ಮಾಡಿದ್ದು, ಇದು ಪೋಷಕರಿಗೆ ತಿಳಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಆಕೆ ಬೇರೆ ವಿದ್ಯಾರ್ಥಿಗಳಿಗೂ ಈ ರೀತಿ ಮಾಡಿದ್ದಾಳೆಯೇ ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿಗೆ ನವಿ ಮುಂಬೈನ ಶಾಲಾ ಶಿಕ್ಷಕಿಯೊಬ್ಬಳು ಅರೆನಗ್ನವಾಗಿ ವಿಡಿಯೊ ಕರೆ ಮಾಡಿದ್ದು ಈ ಕುರಿತು ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ 35 ವರ್ಷದ ಶಿಕ್ಷಕಿಯನ್ನು ಬಂಧಿಸಲಾಗಿದೆ. ಆಕೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಹಲವು ದಿನಗಳಿಂದ ಶಿಕ್ಷಕಿ ಬಾಲಕನಿಗೆ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಳು. ಬಳಿಕ ಅರೆನಗ್ನಳಾಗಿ ಬಾಲಕನಿಗೆ ವಿಡಿಯೊ ಕರೆ ಮಾಡಲು ಪ್ರಾರಂಭಿಸಿದ್ದಳು.
ಇದನ್ನೂ ಓದಿ: Viral Video: ಮಕ್ಕಳು ಇರುವ ಕಾರಣಕ್ಕಾಗಿ ಮಹಿಳೆಗೆ ಉದ್ಯೋಗ ನೀಡಲು ನೋ ಎಂದ HR!
ಈ ಕುರಿತು ಆತ ತನ್ನ ಪೋಷಕರಿಗೆ ತಿಳಿಸಿದ್ದು, ಅವರು ಪೊಲೀಸ್ ಠಾಣೆಗೆ ತೆರಳಿ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ. ಶಿಕ್ಷಕಿಯ ಚಟುವಟಿಕೆಗಳು ಮಗನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಶಿಕ್ಷಕಿಯನ್ನು ಬಂಧಿಸಿರುವ ಪೊಲೀಸರು ಆಕೆಯ ಫೋನ್ ಅನ್ನು ವಶಕ್ಕೆ ಪಡೆದಿದ್ದಾರೆ. ಆಕೆ ಬೇರೆ ಬಾಲಕರೊಂದಿಗೆ ಈ ರೀತಿ ವರ್ತಿಸಿದ್ದಾಳೆಯೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಇತ್ತೀಚೆಗೆಷ್ಟೇ ಮುಂಬೈನ ಪ್ರಮುಖ ಶಾಲೆಯೊಂದರಲ್ಲಿ ಬಾಲಕನೊಬ್ಬನಿಗೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ 40 ವರ್ಷದ ಶಿಕ್ಷಕಿಯನ್ನು ಬಂಧಿಸಲಾಗಿತ್ತು.