Puttur Love dokha: ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಪ್ರೇಮ ವಂಚನೆ ಪ್ರಕರಣ: ಸಾಯಲು ಯತ್ನಿಸಿದ ಮಗುವಿನ ತಾಯಿ
ಪುತ್ತೂರಿನ ಉಚ್ಚಾಟಿತ ಬಿಜೆಪಿ ನಾಯಕರೊಬ್ಬರ ಪುತ್ರ, ಜೆ. ಕೃಷ್ಣ ರಾವ್ ಎಂಬಾತ ತನ್ನ ಕ್ಲಾಸ್‌ಮೇಟ್ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಘಟನೆಯ ಬಳಿಕ ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ನಡೆದು ಜೆ. ಕೃಷ್ಣ ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿತ್ತು.
ಪುತ್ತೂರು ಪ್ರಕರಣದ ಯುವತಿ ಮತ್ತು ಯುವಕ -
ಪುತ್ತೂರು, ಫೆ.25: ಪುತ್ತೂರಿನಲ್ಲಿ (Puttur Love dokha) ತನ್ನ ಕ್ಲಾಸ್‌ಮೇಟ್ ಹುಡುಗನನ್ನೇ ಪ್ರೀತಿಸಿ ಆತನಿಂದಲೇ ಗರ್ಭ (pregnant) ಧರಿಸಿ ಮಗುವನ್ನು ಹೆತ್ತಿದ್ದ ವಿದ್ಯಾರ್ಥಿನಿ (Student), ಇದೀಗ ಆತ್ಮಹತ್ಯೆ (self harming) ಮಾಡಿಕೊಳ್ಳಲು ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಗರ್ಭಿಣಿಯಾಗಿ ಮಗು ಆದ ನಂತರವೂ ಹುಡುಗನ ಮನೆಯವರು ಮದುವೆಗೆ ನಿರಾಕರಿಸಿದ್ದರು. ಇದರಿಂದ ನೊಂದಿದ್ದ ಯುವತಿ ಹತಾಶೆಯಿಂದ ಸಾಯಲು ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ.
ಪುತ್ತೂರಿನ ಉಚ್ಚಾಟಿತ ಬಿಜೆಪಿ ನಾಯಕರೊಬ್ಬರ ಪುತ್ರ, ಜೆ. ಕೃಷ್ಣ ರಾವ್ ಎಂಬಾತ ತನ್ನ ಕ್ಲಾಸ್‌ಮೇಟ್ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಘಟನೆಯ ಬಳಿಕ ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ನಡೆದು ಜೆ. ಕೃಷ್ಣ ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿತ್ತು. ಆದರೆ ಆತನ ಕುಟುಂಬದವರು ಜಾತಿಯ ಕಾರಣದಿಂದ ಇಬ್ಬರ ಮಧ್ಯೆ ಮದುವೆಗೆ ನಿರಾಕರಿಸಿದ್ದರು. ಬಿಜೆಪಿಯೂ ಸೇರಿದಂತೆ ಹಲವು ಸಂಘಟನೆಗಳು ಕುಟುಂಬದವರ ಜೊತೆ ಮಾತುಕತೆ ನಡೆಸಿ ಯುವತಿಯನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದ್ದರು. ಆದರೆ ಜೆ ಕೃಷ್ಣ ರಾವ್ ಮನೆಯವರು ಹಠಕ್ಕೆ ಬಿದ್ದು, ಮದುವೆಗೆ ಯಾವುದೇ ಕಾರಣಕ್ಕೂ ಒಪ್ಪಿರಲಿಲ್ಲ. ಇದು ಬೀದಿ ರಂಪಾಟವಾಗಿ ರಾಜ್ಯದ್ಯಂತ ಸುದ್ದಿಯಾಗಿತ್ತು.
ಈ ಪ್ರಕರಣದಲ್ಲಿ ಜೆ. ಕೃಷ್ಣ ರಾವ್ ತಾನು ಮಗುವಿನ ತಂದೆ ಅಲ್ಲ ಎಂದು ಹೇಳಿದ್ದ. ಹೀಗಾಗಿ ಡಿಎನ್‌ಎ ಪರೀಕ್ಷೆ ಕೂಡ ನಡೆದು, ಆತನೇ ಮಗುವಿನ ತಂದೆ ಎಂಬುದು ಸಾಬೀತಾಗಿತ್ತು. ಜೊತೆಗೆ ಈ ಪ್ರಕರಣದಲ್ಲಿ ಆತ ಜೈಲಿಗೂ ಹೋಗಿ ಬಂದಿದ್ದ. ಆದರೆ ಯಾವುದೇ ಶಿಕ್ಷೆ ಇಲ್ಲದೇ ಎರಡೇ ತಿಂಗಳಿಗೆ ಜೈಲಿನಿಂದ ಹೊರಗೆ ಬಂದಿದ್ದು, ಇದರಿಂದ ಯುವತಿ ಖಿನ್ನತೆಗೆ ಜಾರಿದ್ದಳು. ಅಲ್ಲದೇ ಯುವತಿಗೆ ಸಮಾಜದಲ್ಲಿ ವ್ಯಾಪಕವಾದ ಟೀಕೆಗಳು ಕೇಳಿ ಬಂದಿದ್ದವು. ಸೋಶಿಯಲ್ ಮೀಡಿಯಾದಲ್ಲೂ ಯುವತಿಯನ್ನು ನಿರಂತರವಾಗಿ ಹೀಗೆಳೆಯುವುದು ನಡೆಯುತ್ತಿತ್ತು. ಇದರಿಂದಾಗಿ ಮನನೊಂದ ಯುವತಿಗೆ ಸಾಯುವುದಕ್ಕೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಕೂಡಲೇ ಯುವತಿಯ ಮನೆಯವರು ಗಮನಿಸಿ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಚೇತರಿಸಿಕೊಳ್ಳುತ್ತಿದ್ದಾರೆ.
Puttur News: ಪುತ್ತೂರು ಪ್ರೇಮ ವಂಚನೆ ಪ್ರಕರಣ; ಮಗು ಕೃಷ್ಣ ರಾವ್‌ನದ್ದೇ ಎಂದು ಡಿಎನ್‌ಎ ವರದಿಯಲ್ಲಿ ದೃಢ
ಜೆ. ಕೃಷ್ಣ ರಾವ್ ಮದುವೆಯಾಗುವುದಕ್ಕೆ ನಿರಾಕರಿಸಿದ್ದಕ್ಕೆ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಜೊತೆಗೆ ಹಲವು ಸಂಘಟನೆಗಳು ಅವರ ಪರವಾಗಿ ಪ್ರತಿಭಟನೆಯನ್ನು ನಡೆಸಿದ್ದರು. ಹಲವು ಬಿಜೆಪಿ ಮುಖಂಡರು ಅವರ ಮನೆಯವರೊಂದಿಗೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಆದರೆ ಯಾರ ಮಾತುಕತೆಯೂ ಫಲಪ್ರದವಾಗಿಲ್ಲ. ಕೃಷ್ಣ ರಾವ್ ಅವರ ತಂದೆಯನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿತ್ತು.