ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೆನಡಾ ಬಳಿಕ ಥೈಲ್ಯಾಂಡ್‌ನ ಶಾಲೆ ಮೇಲೆಯೂ ಗುಂಡಿನ ದಾಳಿ; ವಿದ್ಯಾರ್ಥಿಗಳ ರಕ್ಷಣೆ

School Shooting in Thailand: ಬಂದೂಕುಧಾರಿ ದುಷ್ಕರ್ಮಿಯೊಬ್ಬ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ಆಘಾತಕಾರಿ ಘಟನೆ ದಕ್ಷಿಣ ಥೈಲ್ಯಾಂಡ್‌ನ ಹ್ಯಾಟ್ ಯಾಯ್ ಜಿಲ್ಲೆಯಲ್ಲಿ ನಡೆದಿದೆ. ಶೂಟರ್‌ನನ್ನು ಬಂಧಿಸಲಾಗಿದ್ದು, ಆತ ಒತ್ತೆಯಾಳಾಗಿರಿಸಿಕೊಂಡಿದ್ದ ಎಲ್ಲಾ ಸಂತ್ರಸ್ಥರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆನಡಾ ಬಳಿಕ  ಥೈಲ್ಯಾಂಡ್‌ನ ಶಾಲೆಯ ಮೇಲೂ ಗುಂಡಿನ ದಾಳಿ

ಸಾಂದರ್ಭಿಕ ಚಿತ್ರ -

Priyanka P
Priyanka P Feb 11, 2026 6:52 PM

ಬ್ಯಾಂಕಾಕ್, ಫೆ.11: ದಕ್ಷಿಣ ಥೈಲ್ಯಾಂಡ್‌ನ (Thailand) ಹ್ಯಾಟ್ ಯಾಯ್ ಜಿಲ್ಲೆಯ ಶಾಲೆಯಲ್ಲಿ ಬುಧವಾರ (ಫೆ.10) ಗುಂಡಿನ ದಾಳಿ (shootout) ನಡೆದಿದೆ. ಗುಂಡು ಹಾರಿಸಿದ ಬಂದೂಕುಧಾರಿಯನ್ನು ಬಂಧಿಸಲಾಗಿದ್ದು, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂಗ್ಖ್ಲಾ ಪ್ರಾಂತ್ಯದ ಪಟೋಂಗ್‌ಪ್ರಥಂಕಿರಿವತ್ ಶಾಲೆಗೆ 18 ವರ್ಷದ ಯುವಕನೊಬ್ಬ ಬಂದೂಕು ಸಹಿತ ಪ್ರವೇಶಿಸಿದ್ದಾನೆ ಎಂದು ಪ್ರಾಂತೀಯ ಆಡಳಿತವು ತಿಳಿಸಿದೆ. ದುಷ್ಕರ್ಮಿಯನ್ನು ಸೆರೆಹಿಡಿಯಲಾಗಿದೆ ಎಂದು ಉಪ ಅಧೀಕ್ಷಕ ವಿಚಿಯನ್ ಸೊಬೂನ್ ತಿಳಿಸಿದರು. ಘಟನೆಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಥೈಲ್ಯಾಂಡ್‌ನಲ್ಲಿ ಬಂದೂಕು ದಾಳಿ ಮತ್ತು ಬಂದೂಕು ಮಾಲಿಕತ್ವವು ಅಪರೂಪದ ಸಂಗತಿಗಳಲ್ಲ. 2022ರಲ್ಲಿ ದೇಶದ ಪೂರ್ವ ಭಾಗದಲ್ಲಿನ ಒಂದು ನರ್ಸರಿಯಲ್ಲಿ ಮಾಜಿ ಪೊಲೀಸ್ ಅಧಿಕಾರಿ ಗನ್ ಹಾಗೂ ಚಾಕುವಿನಿಂದ ದಾಳಿ ನಡೆಸಿ, 22 ಮಕ್ಕಳನ್ನು ಸೇರಿಸಿ ಒಟ್ಟು 36 ಮಂದಿಯನ್ನು ಹತ್ಯೆ ಮಾಡಿದ ದುರ್ಘಟನೆ ನಡೆದಿತ್ತು.

ಬಾಂಗ್ಲಾದಲ್ಲಿ ಹಿಂದೂಗಳೇ ಮೇನ್‌ ಟಾರ್ಗೆಟ್‌; ವ್ಯಾಪಾರಿಯನ್ನು ಕೊಚ್ಚಿ ಕೊಂದ ಧರ್ಮಾಂಧರು

ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ

ಕೆನಡಾದಲ್ಲಿ ಮತ್ತೊಂದು ಭೀಕರ ಗುಂಡಿನ ದಾಳಿ ದೇಶವನ್ನೇ ಬೆಚ್ಚಿಬೀಳಿಸಿದೆ. ಶಾಲೆಯೊಂದರಲ್ಲಿ ನಡೆದ ಈ ದುರಂತದಲ್ಲಿ ಶಂಕಿತ ಮಹಿಳೆ ಸೇರಿದಂತೆ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಸುಮಾರು 25 ಮಂದಿ ಗಾಯಗೊಂಡಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ಬುಧವಾರ (ಫೆ.10) ಗುಂಡಿನ ದಾಳಿ ನಡೆದಿದೆ.

ಶಾಲೆಯಲ್ಲಿ ಆರು ಜನರು ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಮತ್ತು ಇಬ್ಬರು ಸಮುದಾಯದ ನಿವಾಸದಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಶೂಟರ್‌ನನ್ನು ಮಹಿಳೆ ಎಂದು ಗುರುತಿಸಲಾಗಿದ್ದು, ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆಯಲ್ಲಿ ಎರಡನೇ ಶಂಕಿತ ವ್ಯಕ್ತಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಮಾರು 2,400 ಜನರಿರುವ ಟಂಬ್ಲರ್ ರಿಡ್ಜ್ ಪಟ್ಟಣದಲ್ಲಿ, ನೆರೆಯ ಪ್ರದೇಶಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಈ ಘಟನೆಯ ಸಮಯದಲ್ಲಿ ಇತರ ಮಕ್ಕಳೊಂದಿಗೆ ತರಗತಿಯ ಕ್ಲೋಸೆಟ್‌ನಲ್ಲಿ ಅಡಗಿಕೊಳ್ಳಬೇಕಾಯಿತು ಎಂದು 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

ಟಂಬ್ಲರ್ ರಿಡ್ಜ್‌ನಲ್ಲಿ ನಡೆದ ಗುಂಡಿನ ದಾಳಿಯಿಂದ ತಾವು ಆಘಾತಕ್ಕೊಳಗಾಗಿರುವುದಾಗಿ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ಅವರು ಧೈರ್ಯ ತುಂಬಿದರು. ಕೆನಡಿಯನ್ನರೊಂದಿಗೆ ನಾನಿದ್ದೇನೆ. ತಮ್ಮ ಸಹ ನಾಗರಿಕರನ್ನು ರಕ್ಷಿಸಲು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದವರ ಧೈರ್ಯ ಮತ್ತು ನಿಸ್ವಾರ್ಥತೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಅವರು ಬರೆದಿದ್ದಾರೆ.