ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಗ್ ಧರಿಸಿದ್ದಕ್ಕೆ ಭಾವೀ ಪತಿಯನ್ನು ಕೊಂದಳಾ ಸಿಯಾ? ಕೇತನ್‌ ತಂದೆ ಹೇಳಿದ್ದೇನು?

ಲೋಹಗಡ್ ಕೋಟೆಯಿಂದ ತಳ್ಳಲ್ಪಟ್ಟು ಮೃತಪಟ್ಟಿದ್ದ ಉದ್ಯಮಿ ಕೇತನ್‌ ಅವರ ತಂದೆ ಇದೀಗ ಕೊಲೆ ಹಿಂದಿನ ಉದ್ದೇಶದ ಕುರಿತು ಆಘಾತಕಾರಿ ಹೇಳಿಕೆಯೊಂದೊನ್ನು ನೀಡಿದ್ದಾರೆ. ತಮ್ಮ ಮಗನ ಕೂದಲಿನ ಮೇಲೆ ಸಣ್ಣ ಪ್ಯಾಚ್ ಧರಿಸಿದ್ದಕ್ಕಾಗಿ ಅವರನ್ನು ಗುರಿಯಾಗಿಸಿಕೊಂಡಿರಬಹುದು ಎಂದು ವಿಶಾಲ್ ಅಗರ್ವಾಲ್ ಆರೋಪಿಸಿದ್ದಾರೆ.

ವಿಗ್ ಧರಿಸಿದ್ದಕ್ಕೆ ಭಾವೀ ಪತಿಯನ್ನು ಕೊಂದಳಾ ಸಿಯಾ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 26, 2026 5:26 PM

ಪುಣೆ: ಲೋಹಗಡ್ ಕೋಟೆಯಿಂದ ತಳ್ಳಲ್ಪಟ್ಟು ಮೃತಪಟ್ಟಿದ್ದ ಉದ್ಯಮಿ ಕೇತನ್‌ ಅವರ ತಂದೆ ಇದೀಗ ಕೊಲೆ ಹಿಂದಿನ ಉದ್ದೇಶದ ಕುರಿತು ಆಘಾತಕಾರಿ ಹೇಳಿಕೆಯೊಂದೊನ್ನು ನೀಡಿದ್ದಾರೆ. ತಮ್ಮ ಮಗನ ಕೂದಲಿನ ಮೇಲೆ ಸಣ್ಣ ಪ್ಯಾಚ್ ಧರಿಸಿದ್ದಕ್ಕಾಗಿ ಅವರನ್ನು ಗುರಿಯಾಗಿಸಿಕೊಂಡಿರಬಹುದು (Pune Murder Case) ಎಂದು ವಿಶಾಲ್ ಅಗರ್ವಾಲ್ ಆರೋಪಿಸಿದ್ದಾರೆ. "ಕೇತನ್ ತನ್ನ ತಲೆಯ ಮೇಲೆ ಸಣ್ಣ ವಿಗ್ ಪ್ಯಾಚ್ ಬಳಸಿದ್ದಾನೆಂದು ನಾವು ಅವರಿಗೆ (ಸಿಯಾ ಗೋಯಲ್ ಅವರ ಕುಟುಂಬಕ್ಕೆ) ಈಗಾಗಲೇ ತಿಳಿಸಿದ್ದೆವು. ಯಾರನ್ನಾದರೂ ಕೊಲ್ಲಲು ಇದು ಒಂದು ಕಾರಣವೇ?" ಎಂದು ವಿಶಾಲ್‌ ಅಗರ್ವಾಲ್‌ ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಆರೋಪಿಗಳಿಗೆ ಕನಿಷ್ಠ ಮರಣದಂಡನೆಯನ್ನಾದರೂ ವಿಧಿಸಬೇಕೆಂದು ನಾನು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದೇನೆ. ಈ ಪ್ರಕರಣವನ್ನು ತ್ವರಿತವಾಗಿ ವಿಚಾರಣೆಗೆ ಒಳಪಡಿಸುವುದಾಗಿ ಮುಖ್ಯಮಂತ್ರಿ ನನಗೆ ಭರವಸೆ ನೀಡಿದರು. ಪ್ರಕರಣದಲ್ಲಿ ಎಸ್‌ಐಟಿ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಕೊಲೆಯನ್ನು ಅತ್ಯಂತ ಆಘಾತಕಾರಿ ಎಂದು ಹೇಳಿದ್ದು, ಇದು ಒಂದು ಸಮಾಜವಾಗಿ ನಮ್ಮನ್ನು ಗಂಭೀರವಾಗಿ ಚಿಂತಿಸುವಂತೆ ಒತ್ತಾಯಿಸುವ ಘಟನೆ. ವಿದ್ಯಾವಂತ ಮತ್ತು ಸುಸ್ಥಿತಿಯಲ್ಲಿರುವ ಕುಟುಂಬಗಳ ಮಕ್ಕಳು ಇಂತಹ ದುರುದ್ದೇಶಪೂರಿತ ಮತ್ತು ವಿನಾಶಕಾರಿ ಚಿಂತನೆಯನ್ನು ಏಕೆ ಬೆಳೆಸಿಕೊಳ್ಳುತ್ತಾರೆ? ಈ ಮನಸ್ಥಿತಿಯ ಹಿಂದಿನ ಕಾರಣಗಳೇನು? ನಾವು ಅದರ ಬಗ್ಗೆ ಆಳವಾಗಿ ಯೋಚಿಸಬೇಕಾಗಿದೆ" ಎಂದು ಫಡ್ನವೀಸ್ ಹೇಳಿದರು.

ಪುಣೆ ಉದ್ಯಮಿ ಹತ್ಯೆ ಪ್ರಕರಣ: ನನ್ನ ಮಗನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದ ಆರೋಪಿ ಚೇತನ್ ತಂದೆ

ಆರೋಪಿ ಸಿಯಾ ಹಾಗೂ ಆಕೆಯ ಪ್ರಿಯಕರನನ್ನು ಈಗಾಗಲೇ ನಾನು ಚೇತನ್​ನ ಪ್ರೀತಿ ಮಾಡ್ತಿದ್ದೆ. ಹೀಗಾಗಿ ಕೇತನ್​ನ ಮದುವೆ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಈ ವಿಚಾರವನ್ನು ನಾನು ಹೇಳಿದ್ದೆ. ಆದರೆ ಆತ ನಮ್ಮದು ಶ್ರೀಮಂತ ಕುಟುಂಬ. ನಾವು ಪ್ರಭಾವಶಾಲಿಗಳು. ನೀನು ಎಲ್ಲೇ ಓಡಿಹೋಗಲು ಪ್ರಯತ್ನಿಸಿದರೂ ಈ ಮದುವೆಯಿಂದ ನಿನಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಎಂದು ಸಿಯಾ ಹೇಳಿಕೊಂಡಿದ್ದಾಳೆ. ಸದ್ಯ ಸಿಯಾ ಹೇಳಿಕೆಗಳು ಸದ್ಯಕ್ಕೆ ಕಾನೂನಾತ್ಮಕ ಪರಿಶೀಲನೆ ಹಾಗೂ ನ್ಯಾಯಾಲಯದ ತನಿಖೆಗೆ ಒಳಪಟ್ಟಿವೆ.