ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ; ಮೇಲ್ಸೇತುವೆಯಿಂದ ಕಾರು ಬಿದ್ದು ಮಹಿಳೆ ಸಾವು

Mandya Car Accident: ಮಂಡ್ಯದ ಬಳಿಯ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ ನಡೆದಿದೆ. ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎಕ್ಸ್‌ಪ್ರೆಸ್‌ವೇ ಫ್ಲೈ ಓವರ್‌ನಿಂದ ಹಾರಿ ಅಂಡರ್ ಪಾಸ್‌ಗೆ ಬಿದ್ದಿದೆ. ಇದರಿಂದ ಗಂಭೀರಾಗಿ ಗಾಯಗೊಂಡು ಮಹಿಳೆ ಮೃತಪಟ್ಟಿದ್ದಾರೆ.

ಮಂಡ್ಯ ಬಳಿ ಮೇಲ್ಸೇತುವೆಯಿಂದ ಕಾರು ಬಿದ್ದು ಮಹಿಳೆ ಸಾವು

-

Prabhakara R
Prabhakara R Sep 18, 2026 3:55 PM

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮೇಲ್ಸೇತುವೆಯಿಂದ ಬಿದ್ದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ಮಂಡ್ಯದ ಬಳಿಯ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದಿದೆ. ಉಮ್ಮಡಹಳ್ಳಿ ಗೇಟ್ ಸಮೀಪ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಎಕ್ಸ್‌ಪ್ರೆಸ್‌ವೇ ಫ್ಲೈ ಓವರ್‌ನಿಂದ ಹಾರಿ ಅಂಡರ್ ಪಾಸ್‌ಗೆ ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ.

ಮೃತ ಮಹಿಳೆಯನ್ನು ಅಂಜನಾ (32) ಎಂದು ಗುರುತಿಸಲಾಗಿದೆ. ಅಂಜನಾ ಬೆಂಗಳೂರು, ಮೈಸೂರಿನಲ್ಲಿ ಸ್ವಂತ ಸಾಫ್ಟ್‌ವೇರ್‌ ಕಂಪನಿ ಹೊಂದಿದ್ದ ಹರೀಶ್ ಎಂಬವರ ಪತ್ನಿಯಾಗಿದ್ದು, ಸ್ನೇಹಿತ ನಿತಿನ್‌ ಜತೆಗೆ ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ.

ಅಂಜನಾ ಪತಿ ಹರೀಶ್‌ ಜತೆಗೆ ಮೈಸೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ನೇಹಿತ ಹರೀಶ್‌ ಕೂಡ ಕಾರಿನಲ್ಲಿದ್ದರು. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅಂಜನಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಅಂಡರ್‌ಪಾಸ್‌ಗೆ ಬಿದ್ದಿದೆ. ಕಾರು ಅಂಡರ್‌ಪಾಸ್‌ಗೆ ಬೀಳುವಾಗ ಕಾರಿನ ಕಿಟಕಿ ಓಪನ್‌ ಆಗಿದೆ, ಇದರಿಂದ ಅಂಜನಾ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.