ಶ್ರೀ ಸಾಯಿ ಸಿಲ್ಕ್ಸ್ ಮಾಲಕಿ, ಇನ್‌ಸ್ಟಾಗ್ರಾಮ್ ಪ್ರಭಾವಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ; ಕಾರಣವೇನು?
ಇನ್‌ಸ್ಟಾಗ್ರಾಮ್ ನಲ್ಲಿ 3 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದ ಸಾಯಿ ಸಿಲ್ಕ್ಸ್ ಮಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ. ಕೌಟುಂಬಿಕ ಕಲಹ ಇದಕ್ಕೆ ಕಾರಣ ಎನ್ನಲಾಗಿದೆ. ನಂಗನಲ್ಲೂರಿನ ನಾಗಲಕ್ಷ್ಮಿ (42) ಮತ್ತು ಅವರ ಪತಿ ಸುಬ್ರಮಣಿಯನ್ (52) ಮೃತರು.
ಸಂಗ್ರಹ ಚಿತ್ರ -
ಚೆನ್ನೈ: ಸೀರೆ ವ್ಯಾಪಾರ ಮಾಡಿಕೊಂಡು ಸ್ವತಂತ್ರ ಜೀವನ ನಡೆಸುತ್ತಿದ್ದ ನಂಗನಲ್ಲೂರಿನ ತಿಳ್ಳೈಗಂಗಾದ ಶ್ರೀ ಸಾಯಿ ಸಿಲ್ಕ್ಸ್ (Sri Sai Silks) ನ ಮಾಲಕಿ ನಾಗಲಕ್ಷ್ಮಿ (42) ಎಂಬವರನ್ನು ಅವರ ಸುಬ್ರಮಣಿಯನ್ (52) ಹತ್ಯೆ (Murder case) ಮಾಡಿ ಬಳಿಕ ತಾನೂ ಆತ್ಮಹತ್ಯೆ (Self harming) ಮಾಡಿಕೊಂಡ ಘಟನೆ ಚೆನ್ನೈನಲ್ಲಿ (chennai) ನಡೆದಿದೆ. ನಾಗಲಕ್ಷ್ಮಿ ಇನ್‌ಸ್ಟಾಗ್ರಾಮ್ ನಲ್ಲಿ 3 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದರು. ಇವರು ನಂಗನಲ್ಲೂರು ಮತ್ತು ಅಣ್ಣಾ ನಗರದಲ್ಲಿ ರೇಷ್ಮೆ ಸೀರೆ ಅಂಗಡಿಗಳನ್ನು ನಡೆಸುತ್ತಿದ್ದರು. ಚೆನ್ನೈನಲ್ಲೂ ದೊಡ್ಡ ಸೀರೆ ಮಳಿಗೆಯನ್ನು ಹೊಂದಿದ್ದರು. ಏಪ್ರಿಲ್ 27 ರಂದು ದಂಪತಿಯ ಕಿರಿಯ ಮಗ ಮನೆಗೆ ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.
ಇನ್‌ಸ್ಟಾಗ್ರಾಮ್ ಪ್ರಭಾವಿಯಾಗಿದ್ದ ಚೆನ್ನೈನ ನಂಗನಲ್ಲೂರಿನ ಶ್ರೀ ಸಾಯಿ ಸಿಲ್ಕ್ಸ್ ನ ಮಾಲಕಿ ನಾಗಲಕ್ಷ್ಮಿ ಅವರನ್ನು ಅವರ ಪತಿ ಸುಬ್ರಮಣಿಯನ್ ಎಂಬವರು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಜಗಳವಾಡಿ ಸುಬ್ರಮಣಿಯನ್ ಮನೆ ಬಿಟ್ಟು ಮಧುರೈನಲ್ಲಿರುವ ತನ್ನ ಸಹೋದರಿಯೊಂದಿಗೆ ವಾಸಿಸಲು ತೆರಳಿದ್ದರು. ಸುಬ್ರಮಣಿಯನ್ ಅವರು ತಮ್ಮ ಸಂಬಂಧಿಕರೊಂದಿಗೆ ವಾಸಿಸಲು ಮಧುರೈಗೆ ತೆರಳಿದ್ದರು. ಈ ಅವಧಿಯಲ್ಲಿ ನಾಗಲಕ್ಷ್ಮಿ ಅವರಿಗೆ ಆನ್ ಲೈನ್ ನಲ್ಲಿ ಹಣ ಕಳುಹಿಸುತ್ತಿದ್ದರು ಎನ್ನಲಾಗಿದೆ. 10 ದಿನಗಳ ಹಿಂದೆಯಷ್ಟೇ ಸುಬ್ರಮಣಿ ವಾಪಸ್ ಬಂದಿದ್ದರು. ಇತ್ತೀಚೆಗೆ ಚೆನ್ನೈಗೆ ಬಂದಿದ್ದ ಸುಬ್ರಮಣಿಯನ್ ತಮ್ಮ ಹಿಂದಿನ ವರ್ತನೆಗೆ ಕ್ಷಮೆಯಾಚಿಸಿ ನಾಗಲಕ್ಷ್ಮಿಯೊಂದಿಗೆ ರಾಜಿ ಮಾಡಿಕೊಂಡಿದ್ದರು.
ಅವರ ಹಿರಿಯ ಮಗ ಹರೀಶ್ ಭಾರದ್ವಾಜ್ ವೈದ್ಯಕೀಯ ಅಧ್ಯಯನಕ್ಕಾಗಿ ರಷ್ಯಾಕ್ಕೆ ಹೋಗಿದ್ದು, ಕಿರಿಯ ಮಗ ಸಾಯಿಲಾಶ್ ಚೆನ್ನೈನಲ್ಲಿ ಮೊದಲ ವರ್ಷದ ದಂತವೈದ್ಯಕೀಯ ಕೋರ್ಸ್ ಅನ್ನು ಕಲಿಯುತ್ತಿದ್ದಾರೆ.
ಏಪ್ರಿಲ್ 27 ರಂದು ಸುಬ್ರಮಣಿಯನ್ ಸುಬ್ರಮಣಿಯನ್ ಸೋಮವಾರ ಮಧ್ಯಾಹ್ನ ಕಾಲೇಜಿನಲ್ಲಿದ್ದ ಸಾಯಿಲಾಶ್‌ಗೆ ವಾಟ್ಸಾಪ್ ಸಂದೇಶ ಕಳುಹಿಸಿ, ನಿನ್ನ ತಾಯಿ ಮತ್ತು ನಾನು ಇನ್ನು ಮುಂದೆ ಮನೆಯಲ್ಲಿ ಇರುವುದಿಲ್ಲ. ನಿನಗಾಗಿ ಆಹಾರ ಇಟ್ಟಿದ್ದೇನೆ. ಮನೆಗೆ ಬಂದು ತಿನ್ನು ಎಂದು ಬರೆದಿದ್ದರು. ಈ ಸಂದೇಶ ನೋಡಿ ಅನುಮಾನಗೊಂಡ ಸಾಯಿಲಾಶ್ ಮನೆಗೆ ಬಂದಾಗ ತಾಯಿ ನಾಗಲಕ್ಷ್ಮಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ತಂದೆ ಸುಬ್ರಮಣಿಯನ್ ಮತ್ತೊಂದು ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಕ್ಷಣವೇ ಸಾಯಿಲಾಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಿರುದ್ಯೋಗಿಯಾಗಿದ್ದ ಪತಿ ಪ್ರತಿದಿನ ಹಣಕ್ಕಾಗಿ ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ದಂಪತಿ ನಡುವೆ ಜಗಳವಾಗಿ ಕೊಲೆ, ಆತ್ಮಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.