ನಿದಾ ಖಾನ್ ಇರುವ ಸ್ಥಳದ ಕುರಿತು ಪೊಲೀಸರಿಗೆ ಪತಿಯಿಂದಲೇ ಮಾಹಿತಿ! ಮತಾಂತರ ಜಾಲದ ಇನ್ನಷ್ಟು ರಹಸ್ಯ ಬಯಲು!
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನ ನಾಸಿಕ್ ಘಟಕದಲ್ಲಿನ ಮತಾತಂರ ಜಾಲದ ರಹಸ್ಯಗಳು ಬಗೆದಷ್ಟು ಬಯಲಾಗುತ್ತಿದೆ. ಧಾರ್ಮಿಕ ಮತಾಂತರದ ಆರೋಪ ಹೊತ್ತಿರುವ ನಿದಾ ಖಾನ್ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದು, ಆಕೆಯ ಪತಿ ಪೊಲೀಸರಿಗೆ ನಿದಾ ಇರುವ ಜಾಗದ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ -
ನಾಸಿಕ್: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನ ನಾಸಿಕ್ ಘಟಕದಲ್ಲಿನ ಮತಾತಂರ ಜಾಲದ ರಹಸ್ಯಗಳು ಬಗೆದಷ್ಟು (TCS Conversion) ಬಯಲಾಗುತ್ತಿದೆ. ಧಾರ್ಮಿಕ ಮತಾಂತರದ ಆರೋಪ ಹೊತ್ತಿರುವ ನಿದಾ ಖಾನ್ (Nida Khan) ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದು, ಆಕೆಯ ಪತಿ ಪೊಲೀಸರಿಗೆ ನಿದಾ ಇರುವ ಜಾಗದ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟಿಸಿಎಸ್‌ನ ನಾಸಿಕ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಖಾನ್‌ನನ್ನು ಎರಡು ತಿಂಗಳ ಹಿಂದೆ ಮಲಾಡ್ ಮತ್ತು ಹಿರಾನಂದನಿಯಲ್ಲಿರುವ ಮುಂಬೈ ಕಚೇರಿಗಳಿಗೆ ವರ್ಗಾಯಿಸಲಾಯಿತು.
ಆಕೆಯ ಪತಿ ಮೊಯಿನ್ ನವೀದ್ ಇಕ್ಬಾಲ್ ಖಾನ್ ಅವರು ಥಾಣೆಯ ಮುಂಬ್ರಾದಲ್ಲಿರುವ ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್) ನಲ್ಲಿ ಲಾಜಿಸ್ಟಿಕ್ಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಮತಾತಂರ ಪ್ರಕರಣದಲ್ಲಿ ನಿದಾ ಹೆಸರು ಕೇಳಿ ಬಂದ ಬಳಿಕ ಆಕೆಯನ್ನು ಟಿಸಿಎಸ್ ವಜಾಗೊಳಿಸಿದೆ. ಶುಕ್ರವಾರ ಪೊಲೀಸರು ಆಕೆಯ ಪತಿಯನ್ನು ವಿಚಾರಿಸಿದರು. ನಿದಾ, ಏಪ್ರಿಲ್ 14 ರಂದು ತನ್ನ ಮನೆಯಿಂದ ಹೊರಟುಹೋಗಿ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾಳೆ ಎಂದು ಆತ ಹೇಳಿದ್ದಾರೆ.
ಪೊಲೀಸರು ಸಂಬಂಧಿಕರ ನಿವಾಸವನ್ನು ತಲುಪಿದಾಗ, ಅದು ಲಾಕ್ ಆಗಿರುವುದು ಕಂಡುಬಂದಿದೆ. ಆ ಸಮಯದಲ್ಲಿ ನಿದಾ ಮತ್ತು ಆಕೆಯ ಸಂಬಂಧಿಯ ಫೋನ್ ಸ್ವಿಚ್ ಆಫ್ ಆಗಿದ್ದವು. ನಿದಾ ಪತಿ ಪೊಲೀಸರಿಗೆ ಮತ್ತೊಂದು ಜಾಗದ ಮಾಹಿತಿ ನೀಡಿದ್ದರು. ನಿದಾಳನ್ನು ಆಕೆಯ ಚಿಕ್ಕಮ್ಮ ಕರೆದುಕೊಂಡು ಹೋಗಿದ್ದರು ಎಂದು ಆತ ಹೇಳಿದ್ದಾನೆ. ಸದ್ಯ ಆಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಟಿಸಿಎಸ್ ಬಳಿಕ ಇದೀಗ ಲೆನ್ಸ್‌ಕಾರ್ಟ್‌ನಿಂದಲೂ ಹಿಂದೂ ವಿರೋಧಿ ನಡೆ: ಬಿಂದಿ, ತಿಲಕಕ್ಕೆ ನಿಷೇಧ, ಹಿಜಾಬ್‌ಗೆ ಅನುಮತಿ!
ಏನಿದು ಪ್ರಕರಣ?
ಟಿಸಿಎಸ್ ನಾಸಿಕ್ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, 2022 ರಲ್ಲಿ ಸಹೋದ್ಯೋಗಿ ಡ್ಯಾನಿಶ್ ಶೇಖ್ ಅವರು ಸುಳ್ಳು ಮದುವೆ ಭರವಸೆ ನೀಡಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದಾರೆ ಎಂದು ಆರೋಪಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಆತನಿಗೆ ಈ ಮೊದಲೇ ಮದುವೆಯಾಗಿತ್ತು ಎಂಬುದು ತಿಳಿದು ಬಂದಿದೆ. ಪೊಲೀಸ್ ವರದಿಯ ಪ್ರಕಾರ, ನಿದಾ ಖಾನ್ ಡ್ಯಾನಿಶ್ ಶೇಖ್ ಸಹೋದರಿ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ, ಇನ್ನೂ ಏಳು ಮಹಿಳೆಯರು ತಮ್ಮ ಹಿರಿಯ ಸಹೋದ್ಯೋಗಿಗಳು ತಮಗೆ ಮಾನಸಿಕವಾಗಿ ಮತ್ತು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಈ ಘಟನೆಗಳು ಫೆಬ್ರವರಿ 2022 ಮತ್ತು ಮಾರ್ಚ್ 2026 ರ ನಡುವೆ ನಡೆದಿವೆ ಎಂದು ವರದಿಯಾಗಿದೆ. ಆರು ಪುರುಷರು ಮತ್ತು ಒಬ್ಬ ಮಹಿಳಾ ಮಾನವ ಸಂಪನ್ಮೂಲ ಮುಖ್ಯಸ್ಥೆ ಸೇರಿದಂತೆ ಏಳು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.