ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tiger Death: ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಹತ್ಯೆ: ವಿಷವಿಕ್ಕಿದ ಮೂವರ ಬಂಧನ

Tiger Death: ಹಸುವಿನ ಕಳೇಬರದಲ್ಲಿ ವಿಷ ಹಾಕಿ ಹುಲಿಗಳ ಸಾವಿಗೆ ಕಾರಣರಾದ ಕೋನಪ್ಪ ಬಿನ್ ಸೊಣ್ಣೆಗೌಡ, ಮಾದರಾಜು ಬಿನ್ ಶಿವಣ್ಣ ನಾಗರಾಜ ಬಿನ್ ಪೂಜಾರಿಗೌಡ ಇವರನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಇವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಹತ್ಯೆ: ವಿಷವಿಕ್ಕಿದ ಮೂವರ ಬಂಧನ

ಆರೋಪಿಗಳು

ಹರೀಶ್‌ ಕೇರ ಹರೀಶ್‌ ಕೇರ Jun 28, 2025 1:11 PM

ಮೈಸೂರು : ಮಲೆ ಮಹದೇಶ್ವರ (Male Mahadeshwara Hill) ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದಲ್ಲಿ 5 ಹುಲಿಗಳು ಅಸ್ವಾಭಾವಿಕವಾಗಿ ಮರಣ (tiger death) ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು ಹಸುವಿನ ಕಳೇಬರದಲ್ಲಿ ವಿಷ (poisoning) ಹಾಕಿರುವುದು ಖಚಿತವಾಗಿದೆ.

ಜೂನ್ 26ರಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಗಾಜನೂರು ಗಸ್ತು ಅರಣ್ಯ ಪ್ರದೇಶದಲ್ಲಿ ಮಹದೇಶ್ವರನ ಬಯಲು ಅರಣ್ಯ ಪ್ರದೇಶದ ಕಂಪಾರ್ಟ್ ಮೆಂಟ್ ನಂ.117ರಲ್ಲಿ 5 ಹುಲಿಗಳು ಅಸ್ವಾಭಾವಿಕವಾಗಿ ಮೃತಪಟ್ಟಿದ್ದವು. ಈ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಇವುಗಳ ಮರಣ ವಿಷಪ್ರಾಶನದಿಂದ ಆಗಿರಬಹುದೆಂದು ತಿಳಿದುಬಂದಿತ್ತು. ಪ್ರಕರಣವನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ- 1972ರ ಅನ್ವಯ ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1969ರಂತೆ ಗಂಭೀರವಾದ ವನ್ಯಜೀವಿ ಅಪರಾಧ ಪ್ರಕರಣವೆಂದು ಪರಿಗಣಿಸಿ ದಾಖಲಿಸಿಕೊಳ್ಳಲಾಗಿದೆ. ವಿಷಪ್ರಾಶನ ಎಸಗಿದ ಕೋನಪ್ಪ ಬಿನ್ ಸೊಣ್ಣೆಗೌಡ, ಮಾದರಾಜು ಬಿನ್ ಶಿವಣ್ಣ ನಾಗರಾಜ ಬಿನ್ ಪೂಜಾರಿಗೌಡ ಇವರನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಇವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ

ಪ್ರೀತಿಯಿಂದ ಸಾಕಿದ್ದ ಹಸುವನ್ನು ಹುಲಿ ಕೊಂದಿದ್ದಕ್ಕೆ ತಾನೇ ವಿಷ ಹಾಕಿ ಹುಲಿಯನ್ನು ಕೊಂದಿರುವುದಾಗಿ ಮಾದನ ತಂದೆ ಶಿವಣ್ಣ ಹೇಳಿಕೆ ನೀಡಿದ್ದ. ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ, ಶಿವಣ್ಣನ ಪುತ್ರ ಮಾದ ಅಲಿಯಾಸ್ ಮಾದರಾಜು ಐದು ಹುಲಿಗಳ ಸಾವಿಗೆ ತಾನು ಕಾರಣ, ತಾನೇ ವಿಷಹಾಕಿ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಾದ ಅಲಿಯಾಸ್ ಮಾದರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ತಿಂದು ಹಾಕಿತ್ತು. ಇದರಿಂದ ನೊಂದ ಮಾದ ನಾಗರಾಜ್ ಬಳಿ ಹೇಳಿಕೊಂಡಿದ್ದ. ಇಬ್ಬರೂ ಹುಲಿ ಕೊಲ್ಲಲು ನಿರ್ಧರಿಸಿದ್ದರು. ನಾಗರಾಜ್ ಮೃತ ಹಸುವಿನ ಕಳೇಬರಕ್ಕೆ ಕ್ರಿಮಿನಾಶಕ ಸುರಿದು ಬಂದಿದ್ದ. ಇದನ್ನು ತಿಂದ ಹುಲಿಗಳು ಮೃತಪಟ್ಟಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: Tigers death: ಮಲೆ ಮಹದೇಶ್ವರ ಹುಲಿಗಳ ಸಾವು, ತನಿಖೆಗೆ ಎಸ್‌ಐಟಿ ರಚಿಸಿದ ಕೇಂದ್ರ