ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಬಿದ್ದ ಕಾನ್ವೆ

ನ್ಯೂಜಿಲೆಂಡ್ ಪರ ಇಲ್ಲಿಯವರೆಗೆ 43 ಏಕದಿನ ಪಂದ್ಯಗಳಲ್ಲಿ ಆಡಿರುವ 35 ವರ್ಷದ ಕಾನ್ವೇ ಅವರ ಅನುಪಸ್ಥಿತಿಯಲ್ಲಿ, ಟಿಮ್ ಸೀಫರ್ಟ್ ಇನಿಂಗ್ಸ್ ಆರಂಭಿಸಲಿದ್ದಾರೆ. ಬಲಗೈ ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಇವರನ್ನು, ಸೋಮವಾರದಂದು ನ್ಯೂಜಿಲೆಂಡ್‌ನ ಮೊದಲ ಮೂರು ಪಂದ್ಯಗಳ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಬಿದ್ದ ಕಾನ್ವೆ

Devon Conway -

Abhilash BC
Abhilash BC Nov 3, 2026 4:37 PM

ಆಕ್ಲೆಂಡ್‌, ನ.3: ಭಾರತ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಿಂದ ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಹೊರಗುಳಿಯಲಿದ್ದಾರೆ. ಬುಧವಾರ (ನವೆಂಬರ್ 4) ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಮುನ್ನಾದಿನದಂದು ನ್ಯೂಜಿಲೆಂಡ್ ಕ್ರಿಕೆಟ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅಭ್ಯಾಸದ ವೇಳೆ ತಲೆಗೆ ಪೆಟ್ಟು ಬಿದ್ದಿದ್ದರಿಂದ ಈ ಪಂದ್ಯದಲ್ಲಿ ಆಡುವುದಿಲ್ಲ ಎಂದಿದೆ.

ಆತಿಥೇಯ ತಂಡವು ಈಗಾಗಲೇ ರಚಿನ್ ರವೀಂದ್ರ ಮತ್ತು ಮಾರ್ಕ್ ಚಾಪ್‌ಮನ್ ಅವರ ಸೇವೆಯನ್ನು ಕಳೆದುಕೊಂಡಿದೆ. ಇದರ ಬೆನ್ನಲ್ಲೇ ಕಾನ್ವೆ ಮೊದಲ ಪಂದ್ಯದಿಂದ ಹೊರಬಿದ್ದಿರುವುದು ಕಿವೀಸ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

"ಈಡನ್ ಪಾರ್ಕ್‌ನಲ್ಲಿ ಮಂಗಳವಾರ ತಂಡದ ತರಬೇತಿಯ ಸಮಯದಲ್ಲಿ ಡೆವೊನ್ ಕಾನ್ವೇ ಮತ್ತು ಮ್ಯಾಟ್ ಹೆನ್ರಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಡಿಕ್ಕಿ ಹೊಡೆದರು. ಇಬ್ಬರೂ ಆಟಗಾರರಿಗೆ ತಕ್ಷಣವೇ ಸ್ಥಳದಲ್ಲೇ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದರು ಮತ್ತು ತಲೆಗೆ ಗಾಯವಾಗಿದೆ ಎಂದು ನಿರ್ಣಯಿಸಲಾಯಿತು. ಹೆಚ್ಚಿನ ಪರೀಕ್ಷೆಗಾಗಿ ಕಾನ್ವೇ ಅವರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಯಿತು, ಈ ವೇಳೆ ಅವರಿಗೆ ಹೆಚ್ಚಿನ ಗಾಯವಾಗಿರುವುದು ದೃಢಪಟ್ಟಿತು. ಇದರಿಂದಾಗಿ ಬುಧವಾರ ಭಾರತ ವಿರುದ್ಧದ ಮೊದಲ ಪಂದ್ಯದಿಂದ ಅವರನ್ನು ಹೊರಗಿಡಲಾಗಿದೆ" ಎಂದು ನ್ಯೂಜಿಲೆಂಡ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

"ಉಭಯ ಆಟಗಾರರ ಮೇಲೆ ನಿಗಾ ಮುಂದುವರಿಯಲಿದೆ. ಏಕದಿನ ಸರಣಿ'ಯಲ್ಲಿ ಅವರ ಭಾಗವಹಿಸುವಿಕೆಯ ಕುರಿತಾದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಮರಳುವ ಮುನ್ನ ದೇಶೀಯ ಕ್ರಿಕೆಟ್ ಆಡಲಿದ್ದಾರೆ: ಶುಭಮನ್ ಗಿಲ್

ನ್ಯೂಜಿಲೆಂಡ್ ಪರ ಇಲ್ಲಿಯವರೆಗೆ 43 ಏಕದಿನ ಪಂದ್ಯಗಳಲ್ಲಿ ಆಡಿರುವ 35 ವರ್ಷದ ಕಾನ್ವೇ ಅವರ ಅನುಪಸ್ಥಿತಿಯಲ್ಲಿ, ಟಿಮ್ ಸೀಫರ್ಟ್ ಇನಿಂಗ್ಸ್ ಆರಂಭಿಸಲಿದ್ದಾರೆ. ಬಲಗೈ ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಇವರನ್ನು, ಸೋಮವಾರದಂದು ನ್ಯೂಜಿಲೆಂಡ್‌ನ ಮೊದಲ ಮೂರು ಪಂದ್ಯಗಳ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ಕಳೆದ ವಾರ ಭಾರತದ ವಿರುದ್ಧ ನಡೆದ ಐದೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೀಫರ್ಟ್, ನ್ಯೂಜಿಲೆಂಡ್ ತಂಡ ಪರ ಆಡಿದ್ದರು. ಭಾನುವಾರ (ನವೆಂಬರ್ 1) ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ, 192 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಅವರು 50 ಎಸೆತಗಳಲ್ಲಿ 93 ರನ್‌ಗಳನ್ನು ಗಳಿಸಿದ್ದರು.

ನ್ಯೂಜಿಲೆಂಡ್‌ ತಂಡ

ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಜಾಕೋಬ್ ಡಫಿ, ಮ್ಯಾಟ್ ಫಿಶರ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್ (ವಿ.ಕೀ.), ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್, ನಾಥನ್ ಸ್ಮಿತ್, ವಿಲ್ ಯಂಗ್, ಬ್ಲೇರ್ ಟಿಕ್ನರ್.